ಅಂತರ್ಜಲ ಚೇತರಿಕೆಗೆ ಕೆರೆ ಪುನಶ್ಚೇತನ ಅಗತ್ಯ

7

ಅಂತರ್ಜಲ ಚೇತರಿಕೆಗೆ ಕೆರೆ ಪುನಶ್ಚೇತನ ಅಗತ್ಯ

Published:
Updated:

ಶಿವಮೊಗ್ಗ:  ಅಂತರ್ಜಲ ಚೇತರಿಕೆಗೆ ಕೆರೆಗಳ ಪುನಶ್ಚೇತನ ಅಗತ್ಯವಿದ್ದು, ಜಲಸಂವರ್ಧನಾ ಯೋಜನಾ ಸಂಘದ ನಂತರವೂ ಜಿಲ್ಲಾ ಪಂಚಾಯ್ತಿ ಜಿಲ್ಲೆಯ ಎಲ್ಲ ಕರೆಗಳ ಪುನಶ್ಚೇತನಕ್ಕೆ ಕಾರ್ಯ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಲ ಸಂವರ್ಧನಾ ಯೋಜನಾ ಸಂಘ, ಜಿಲ್ಲೆಯ ವಿವಿಧ ಮೂರು ತಾಲ್ಲೂಕುಗಳ 28 ಕೆರೆಗಳನ್ನು ಕೆರೆ ಬಳಕೆದಾರರ ಸಂಘಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಸುಮಾರು 37 ಸಾವಿರ ಕೆರೆಗಳಿರುವುದನ್ನು ಗುರುತಿಸಲಾಗಿದೆ. ಆದರೆ ಜಲ ಸಂವರ್ಧನಾ ಯೋಜನಾ ಸಂಘದ ವತಿಯಿಂದ ಕೇವಲ 424 ಕೆರೆಗಳನ್ನು ಮಾತ್ರ ನಿರ್ವಹಿಸಿ ಇದೀಗ ಹಸ್ತಾಂತರಿಸಲಾಗಿದ್ದು, ಅಂತರ್ಜಲ ಕುಸಿಯುತ್ತಿರುವ ಈ ದಿನಗಳಲ್ಲಿ ಆದ್ಯತೆ ಮೇಲೆ ಎಲ್ಲ ಕೆರೆಗಳ ಪುನಶ್ಚೇತನದ ಅಗತ್ಯವಿದೆ ಎಂದರು.ಜಲ ಸಂವರ್ಧನಾ ಯೋಜನಾ ಸಂಘವನ್ನು ಮುಂದುವರಿಸುವಂತೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮನವರಿಕೆ ಕಾರ್ಯ ನಡೆದಿದೆ. ಈ ನಿಟ್ಟಿನಲ್ಲಿ ಕೆರೆ ಬಳಕೆದಾರರ ಸಂಘಗಳು ಈ ಹಂತಕ್ಕೆ ನಿಲ್ಲಿಸದೆ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಬೇಕು ಎಂದರು.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಸ್ಥರು ಮಾನವಾಧಾರಿತ ಕೆಲಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಯೋಜನೆಗಳನ್ನು ಪಡೆಯಬಹುದು. ಈ ಮೂಲಕ ಕರೆಗಳ ಸಂರಕ್ಷಣೆಗೆ ಗ್ರಾಮಸ್ಥರು ಆಸಕ್ತಿ ತೋರಬೇಕು ಎಂದರು.ಕೆರೆ ಅತಿಕ್ರಮಣಕಾರರಿಗೆ ಬಳಕೆದಾರರ ಸಂಘದವರೇ ಕಾರ್ಯಪಡೆಯಾಗಿ ಕೆಲಸ ಮಾಡಿ ಅಂತಹವರನ್ನು ನಿಗ್ರಹಿಸಬೇಕು ಎಂದ ಅವರು, ಮಹಿಳೆಯರ ಸಹಭಾಗಿತ್ವದಲ್ಲಿ ಯೋಜನೆಗಳಗಳು ರೂಪುಗೊಂಡರೆ ಸಮರ್ಪಕ ನಿರ್ವಹಣೆಯಾಗಲಿವೆ ಎಂದರು.ಜನ-ಜಾನವಾರುಗಳಿಗೆ ನೀರಿನ ಅಗತ್ಯವಿರುವುದರಿಂದ ಕಾಲುವೆಗಳ ಮೂಲಕ ಜಲಾಶಯ ಮತ್ತಿತರ ಮೂಲದಿಂದ ನೀರು ಹರಿಸಲು ಅನುಕೂಲವಿದ್ದರೆ ಬಳಕೆದಾರರು ತಮ್ಮ ಕೆರೆಗಳಿಗೆ ನೀರು ತುಂಬಿಸಿಕೊಳ್ಳಬೇಕು. ಈ ಸಂಬಂಧ ಆಡಳಿತಾತ್ಮಕ ವಿಷಯಗಳಿದ್ದರೆ ಜಿಲ್ಲಾಡಳಿತದ ಸಲಹೆ ಕೇಳಬಹುದು ಎಂದರು.ತೀರ್ಥಹಳ್ಳಿ ತಾಲ್ಲೂಕಿನ 11, ಶಿವಮೊಗ್ಗ ತಾಲ್ಲೂಕಿನ 12 ಹಾಗೂ ಹೊಸನಗರ ತಾಲ್ಲೂಕಿನ 5 ಕೆರೆಗಳನ್ನು ಶುಕ್ರವಾರ ಹಸ್ತಾಂತರಿಸಲಾಯಿತು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರು, ಜೆಎಸ್‌ವೈಎಸ್‌ನ ಅಣ್ಣಪ್ಪ, ಮಂಜುನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry