ಅಂತರ್ಜಾಲದಲ್ಲೊಂದು ವಿಜ್ಞಾನ ಪತ್ರಿಕೆ

ಬುಧವಾರ, ಜೂಲೈ 17, 2019
26 °C

ಅಂತರ್ಜಾಲದಲ್ಲೊಂದು ವಿಜ್ಞಾನ ಪತ್ರಿಕೆ

Published:
Updated:

ಕನ್ನಡದಲ್ಲಿ ವಿಜ್ಞಾನ ಪತ್ರಿಕೆಗಳ ಕೊರತೆಯಿದೆ. ಇರುವ ಪತ್ರಿಕೆಗಳೂ ಅಷ್ಟು ಸಮರ್ಪಕವಾಗಿ ಮೂಡಿಬರುತ್ತಿಲ್ಲ. ತಕ್ಕಮಟ್ಟಿಗೆ ಚೆನ್ನಾಗಿರುವ ಪತ್ರಿಕೆಗಳು ಎಲ್ಲೂ ಸಿಗುವುದಿಲ್ಲ - ಇವೆಲ್ಲ ಆಗಿಂದಾಗ್ಗೆ ಕೇಳಿಬರುವ ಅಭಿಪ್ರಾಯಗಳು.

 

ಈ  ಅಭಿಪ್ರಾಯಗಳನ್ನು ಕೊಂಚಮಟ್ಟಿಗಾದರೂ ಬದಲಿಸುವ ಉದ್ದೇಶದಿಂದ ಇ-ಜ್ಞಾನ ಡಾಟ್ ಕಾಮ್ (www.­ejnana.­com)) ಇದೀಗ ಹೊಸತೊಂದು ಸಾಹಸಕ್ಕೆ ಕೈಹಾಕಿದೆ.

ಕನ್ನಡದ ಹಿರಿಯ ವಿಜ್ಞಾನ ಲೇಖಕರ ಮಾರ್ಗದರ್ಶನದಲ್ಲಿ  ರೂಪಗೊಳ್ಳುತ್ತಿರುವ ಅನಿಯತಕಾಲಿಕ ವಿಜ್ಞಾನ ಪತ್ರಿಕೆ ಇದು.  ಈ ಪತ್ರಿಕೆಗೆ ಕನ್ನಡ ವಿಜ್ಞಾನ ಬರಹಗಾರರ ಅಂತರಜಾಲ ಬಳಗ `ಪೆನ್-ಸರ್ಕಲ್~ನ ಬೆಂಬಲ ಕೂಡ ಇದೆ. 

 

ವಿದ್ಯುನ್ಮಾನ ರೂಪದಲ್ಲಷ್ಟೆ ಲಭ್ಯವಾಗಲಿರುವ ಈ ಪತ್ರಿಕೆಯನ್ನು www.­ejnana.­com ತಾಣದಲ್ಲಿ  ಉಚಿತವಾಗಿ ಓದಬಹುದು. ಪತ್ರಿಕೆಯ ಮೊದಲ ಸಂಚಿಕೆ ಪರಿಸರ ಸಂಚಿಕೆ~ಯಾಗಿ ಮೂಡಿಬಂದಿದೆ. ವಿಶ್ವ ಪರಿಸರ ದಿನದಿಂದ `ಇ-ಜ್ಞಾನ~ ಅಂತರ್ಜಾದಲ್ಲಿ ಲಭ್ಯವಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry