ಅಂತರ್ಜಾಲ- ಜಾಗೃತಿ ಅಗತ್ಯ

7

ಅಂತರ್ಜಾಲ- ಜಾಗೃತಿ ಅಗತ್ಯ

Published:
Updated:

ವಿಟ್ಲ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂತರ್ಜಾಲ ವಿದ್ಯಾರ್ಥಿಗಳಿಗೂ ಅವಿಭಾಜ್ಯ ಅಂಗವಾಗಿದೆ. ಪ್ರತಿ ವಿದ್ಯಾರ್ಥಿಯೂ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಕೀಲ ಅಬೂಬಕ್ಕರ್ ವಿಟ್ಲ ಹೇಳಿದರು.ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ವತಿಯಿಂದ ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದ ನಡೆದ `ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ 2012~ ಕಾರ್ಯಕ್ರಮ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.ಅಂತರ್ಜಾಲ ಚಟುವಟಿಕೆಗಳು ಗ್ರಾಮ ಪಂಚಾಯಿತಿನಿಂದ ಸಂಸತ್ತಿನವರೆಗೂ ವ್ಯಾಪಿಸಿದೆ. ಬ್ಯಾಂಕ್ ವಹಿವಾಟುಗಳನ್ನು ಮನೆಯಲ್ಲಿ ಇದ್ದುಕೊಂಡೇ ಮಾಡಲು ಸಾಧ್ಯವಾಗುತ್ತಿದೆ. ಒಟ್ಟಿನಲ್ಲಿ ಅಂತರ್ಜಾಲ ಜೀವನಕ್ಕೆ ಅನಿವಾರ್ಯ ಎಂಬಂತಾಗಿದೆ ಎಂದರು.ವಿದ್ಯಾರ್ಥಿಗಳು ಅಂತರ್ಜಾಲದ ಉಪಯೋಗದ ಕುರಿತು ಮುಂಜಾಗ್ರತೆ ವಹಿಸಬೇಕು. ಕೆಲವು ಸೈಬರ್ ಅಪರಾಧಿಗಳು ಮುಗ್ಧ ಜನರನ್ನು ಮೊಸಗೊಳಿಸುವ ಕೃತ್ಯ ಎಸಗುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆಯನ್ನು ವಿಠಲ ವಿದ್ಯಾ ಸಂಘದ ಕಾರ್ಯದರ್ಶಿ ಯಶವಂತ ವಿಟ್ಲ ವಹಿಸಿದ್ದರು. ವಿಟ್ಲ ಕ್ಲಸ್ಟರ್‌ಗೊಳಪಟ್ಟ 9 ಶಾಲೆಗಳ ಸುಮಾರು 416 ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದರು.ವಿಟ್ಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಾ ಎಸ್.ಎನ್ ಭಟ್, ವಿಠಲ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಕಿರಣ್‌ಕುಮಾರ್ ಬ್ರಹ್ಮಾವರ, ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಧಾಕೃಷ್ಣ ಭಟ್, ಶಿಕ್ಷಕ ರಾಮಚಂದ್ರ ಪ್ರಭು ಉಪಸ್ಥಿತರಿದ್ದರು.

ಶಿಕ್ಷಕ ಎಂ.ಕೆ ಶಂಕರನಾರಾಯಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರಾಮಚಂದ್ರ ಪ್ರಭು ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry