ಭಾನುವಾರ, ಏಪ್ರಿಲ್ 18, 2021
23 °C

ಅಂತರ್‌ಜಾಲ ತಾಣದ ಆಕರ್ಷಣೆ ಹೆಚ್ಚಿಸುವ ವಿಧಾನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2009 ರ ಡಿಸೆಂಬರ್‌ನಲ್ಲಿ ಇಂಟರ್‌ನೆಟ್ ವರ್ಲ್ಡ್ ಸ್ಟಾಟ್ಸ್ ಡಾಟ್ ಕಾಮ್ ಹೊರತಂದ ವರದಿಯ ಪ್ರಕಾರ ಭಾರತದಲ್ಲಿ 81 ದಶಲಕ್ಷ ಇಂಟರ್‌ನೆಟ್ ಬಳಕೆದಾರರಿದ್ದಾರೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಇಂಟರ್‌ನೆಟ್ ಬಳಕೆದಾರರ ರಾಷ್ಟ್ರವಾಗುವ ಸಾಧ್ಯತೆ ಇದೆ.ಡೊಮೇನ್ ಹೆಸರು ನೋಂದಾಯಿಸಿ, ವೆಬ್‌ಸೈಟ್ ಹೊಂದುವ ಮೂಲಕ ಯಾವುದೇ ವಹಿವಾಟು, ಇಂಟರ್‌ನೆಟ್‌ನ ಒಂದು ಭಾಗವಾಗಬಲ್ಲದು. ಆದರೆ, ಯಶಸ್ವಿ ವೆಬ್‌ಸೈಟ್ ರಚನೆಯಲ್ಲಿ ಜಾಗರೂಕತೆಯ ಯೋಜನೆ ಬೇಕು. ವೆಬ್‌ಸೈಟ್ ಯಶಸ್ವಿಯಾಗುವುದೆಂದರೆ ಇಂಟರ್‌ನೆಟ್ ಶೋಧಕರು ಮತ್ತೆ ಮತ್ತೆ ನಿಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುವಂತಿರಬೇಕು. ವೆಬ್‌ಸೈಟ್ ಆಕರ್ಷಕವಾಗಿದ್ದು ಎಲ್ಲ ಮಾಹಿತಿ ನೀಡುವಂತಿದ್ದರೆ ಮೊದಲ ಬಾರಿ ನಿಮ್ಮ ವೆಬ್‌ಸೈಟ್‌ಗೆ ಭೇಟಿ ಕೊಟ್ಟವರು ಮತ್ತೆ ಅದಕ್ಕೆ ಲಾಗ್‌ಆನ್ ಮಾಡಿ ನಿಮ್ಮ ನಿಷ್ಠಾವಂತ ಗ್ರಾಹಕರಾಗುವ ಸಾಧ್ಯತೆ ಇದೆ.

ಒಂದು ವೆಬ್‌ಸೈಟ್ ಆಕರ್ಷಕವಾಗಲು ಏನೇನು ಕ್ರಮ ಕೈಗೊಳ್ಳಬಹುದು ಇಲ್ಲಿವೆ ಕೆಲವು ಸಲಹೆಗಳು.ಮೊದಲ ಪ್ರಮುಖ ಹೆಜ್ಜೆಯೆಂದರೆ ಇಂಟರ್‌ನೆಟ್ ವಿಶ್ವದಲ್ಲಿ  ನಿಮ್ಮ ಕಂಪೆನಿಯ ಹೆಸರು ಚೆನ್ನಾಗಿ ಕಾಣಿಸುವಂತಹ ಡೊಮೇನ್ ಹೆಸರು ಹೊಂದುವುದು. ಡಾಟ್ ಕಾಮ್ ಡೊಮೇನ್ ನೇಮ್ ವಿಸ್ತರಣೆ ಅತ್ಯಂತ ಜನಪ್ರಿಯ ಮತ್ತು ಇಂಟರ್‌ನೆಟ್ ಜಾಲದಲ್ಲಿ ಅತಿ ಹೆಚ್ಚು ಬಳಕೆಯಾಗುವ ಹೆಸರು. ಎಲ್ಲ ರೀತಿಯ, ಎಲ್ಲ ಗಾತ್ರದ ವಹಿವಾಟಿಗೂ ಇದು ಸೈ.ವೆಬ್‌ಸೈಟ್ ಅನ್ನು ಮೇಲಿಂದ ಮೇಲೆ ಪರಿಷ್ಕರಿಸುತ್ತಿರಬೇಕು. ಪ್ರತಿಬಾರಿಯೂ ಗ್ರಾಹಕ ನಿಮ್ಮ ವೆಬ್‌ಸೈಟ್‌ಗೆ ಭೇಟಿ ಕೊಟ್ಟಾಗ ಅದರಲ್ಲಿ ಹೊಸತನ ಇರಬೇಕು. ವರ್ಷ ಕಳೆದರೂ ಅದೇ ಮಾಹಿತಿ ಇದ್ದರೆ ಭೇಟಿ ಕೊಡುವವರಿಗೆ ಬೋರು ಹೊಡೆಸಬಹುದು. ಹಾಗಾಗಿ ಹೊಸ ಹೊಸ ಸಲಹೆ, ಸಂಸ್ಥೆಯ ಹೊಸ ಸುದ್ದಿ ಅಥವಾ ವೆಬ್‌ಸೈಟ್‌ನ ಗ್ರಾಫಿಕ್ ಚಿತ್ರಗಳನ್ನು ಬದಲಿಸಬಹುದು.ವೆಬ್‌ಸೈಟ್‌ಗೆ ಭೇಟಿ ಕೊಡುವವರಿಗೆ ಏನಾದರೂ ಲಾಭ ಕೊಡುವ ವ್ಯವಸ್ಥೆ ಮಾಡಿದರೆ ಉತ್ತಮ. ಅಂದರೆ ನಿಮ್ಮ ಪ್ರತಿಸ್ಪರ್ಧಿಯಲ್ಲದ ಇನ್ನೊಂದು ಸಂಸ್ಥೆಯೊಂದಿಗೆ ಸಹಭಾಗಿತ್ವ ಸಾಧಿಸಿ ನಿಮ್ಮ ವೆಬ್‌ಸೈಟ್‌ಗೆ ಭೇಟಿ ಕೊಡುವವರಿಗೆ ಆ ಸಂಸ್ಥೆಯಿಂದ ಲಾಭ ದೊರೆಯುವಂತೆ ವ್ಯವಸ್ಥೆ ಮಾಡಬಹುದು. ಇದು ಪರಸ್ಪರ ಪ್ರಯೋಜನಕಾರಿ.ವೆಬ್‌ಸೈಟ್ ಸಂದರ್ಶಿಸುವವರಿಗೆ ಬುಕ್ ಮಾರ್ಕಿಂಗ್ ಆಯ್ಕೆ  ಕೊಡಿ. ಇದರಿಂದಾಗಿ ಅವರು ನಿಮ್ಮ ವೆಬ್‌ಸೈಟ್ ಅನ್ನು ತಮ್ಮ ನೆಚ್ಚಿನ ವೆಬ್‌ಸೈಟಾಗಿ ಪಟ್ಟಿ ಮಾಡಬಹುದು.ವೆಬ್‌ಸೈಟ್‌ನುದ್ದಕ್ಕೂ ಒಂದೇ ಮಾದರಿಯ ಬಣ್ಣಗಳು, ಲಾಂಛನ ಮತ್ತು ಘೋಷಣೆಗಳನ್ನು ಉಳಿಸುವುದರಿಂದ ಭೇಟಿಕೊಡುವವರು ಸುಲಭವಾಗಿ ನಿಮ್ಮ ವೆಬ್‌ಸೈಟ್ ಗುರುತಿಸಬಲರ್ಲು.ವೆಬ್‌ಸೈಟ್‌ಗೆ ಭೇಟಿ ಕೊಡುವವರಿಗೆ ನಿಮ್ಮ ಇ-ಮೇಲ್ ನ್ಯೂಸ್‌ಲೆಟರ್ ಬೇಕೆನಿಸಿದರೆ ಅದರ ಆಯ್ಕೆಯ ಅವಕಾಶವನ್ನೂ ಒದಗಿಸಿ.

ವೆಬ್‌ಸೈಟ್‌ಗೆ ಗ್ರಾಹಕರು ಮರಳಿ ಭೇಟಿ ಕೊಡುವಂತಾಗಲು ಡಿಸ್ಕೌಂಟ್ ಪ್ರಕಟಿಸಿ.ಆಗಾಗ್ಗೆ ವೆಬ್‌ಸೈಟ್ ಸಂದರ್ಶಕರ ಸಮೀಕ್ಷೆಯನ್ನೂ ನಡೆಸಿ.

ಬೇರೆಲ್ಲೂ ಸಿಗದಂತಹ ಮೌಲ್ಯವನ್ನು ನೀವು ನಿಮ್ಮ ವೆಬ್‌ಸೈಟ್‌ನಲ್ಲಿ ಒದಗಿಸಿದರೆ, ಗ್ರಾಹಕರು ಮತ್ತೆ ಮತ್ತೆ ನಿಮ್ಮ ವೆಬ್‌ಸೈಟ್ ಸಂದರ್ಶಿಸಬಹುದು. ಇದರಿಂದ ವಹಿವಾಟು ವಿಸ್ತರಣೆಯೂ ಸಾಧ್ಯವಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.