ಅಂತರ್‌ಶಾಲಾ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

7

ಅಂತರ್‌ಶಾಲಾ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ

Published:
Updated:

ಧಾರವಾಡ: ‘ಸಮಾಜದ ಓರೆ ಕೋರೆಗಳನ್ನು ಸರಿಪಡಿಸಲು ಹಾಗೂ ಮಕ್ಕಳಲ್ಲಿ ಕೋಮು ಸಾಮರಸ್ಯ, ಪರಿಸರ ಪ್ರಜ್ಞೆ, ಸಹಬಾಳ್ವೆ ಮತ್ತು ಶಿಸ್ತು ಅಳವಡಿಸುವಲ್ಲಿ ನಾಟಕೋತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ.ಹಿರೇಗೌಡರ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಧಾರವಾಡ ಥಿಯೇಟರ್ಸ್ ಅಂತರ್‌ಶಾಲಾ ಮಕ್ಕಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಧಾರವಾಡ ಥಿಯೇಟರ್ಸ್‌ ಮಕ್ಕಳಿಗೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು­ತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅವರ ಪ್ರಯತ್ನಕ್ಕೆ ಸೂಕ್ತ ಸಹಾಯ ನೀಡಲಾ­ಗುವುದು’ ಎಂದು ಭರವಸೆ ನೀಡಿದರು.ವಿ.ಎಸ್.ಕುಲಕರ್ಣಿ, ಶ್ಯಾಮ ಕುಲಕರ್ಣಿ, ಹಂಪಿಹೊಳಿ, ಸುಮಂಗಲಾ ದಾಂಡೆವಾಲೆ, ಎಂ.ಯು.ಪಾಟೀಲ ಇದ್ದರು. ಎಚ್.ಜಿ. ಜೋಶಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಅನಂತ ಥಿಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ದೇಸಾಯಿ ನಿರೂ­ಪಿ­ಸಿದರು. ಎಸ್.ಎಂ. ದೇಶ­ಪಾಂಡೆ ವಂದಿಸಿದರು. ಟಕೋತ್ಸವದಲ್ಲಿ ಜಗು­ಚಂದ್ರ ಕುಡ್ಲ, ವಿಷಯಾ ಜೇವೂರ, ಸುನಂದಾ ನಿಂಬನಗೌಡರ ನಿರ್ಣಾಯಕರಾಗಿ ಭಾಗವಹಿಸಿದ್ದರು.

ನಂತರ ಆರ್ಎಲ್ಎಸ್ ಹೈಸ್ಕೂಲಿನ ವಿದ್ಯಾರ್ಥಿಗಳು, ‘ತುಂಟ ಗಣಪ’ ಎಲ್ಇಎ ಹೈಸ್ಕೂಲಿನ ವಿದ್ಯಾರ್ಥಿಗಳು, ‘ಪರಿಸರ ಮಾಲಿನ್ಯ’ ಮತ್ತು ಬಾಲಬಳಗ ಶಾಲೆಯ ವಿದ್ಯಾರ್ಥಿಗಳು ‘ಮಳೆ ಬೇಕ್ರಿ ಮಳೆ’ ಎಂಬ ನಾಟಕಗಳನ್ನು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry