ಸೋಮವಾರ, ಜನವರಿ 20, 2020
20 °C

ಅಂತರ ಕಾಲೇಜು ಕ್ರೀಡಾಕೂಟ: 12 ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಹಳೆಯಂಗಡಿಯ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯ ನಗರದ ಮಂಗಳ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ‘ಮಂಗಳೂರು ವಿಶ್ವವಿದ್ಯಾ­ಲಯ ಅಂತರ ಕಾಲೇಜು ಮಟ್ಟದ 33ನೇ ಅಥ್ಲೆಟಿಕ್‌ ಕ್ರೀಡಾಕೂಟ’ ಬುಧವಾರ ಸಮಾರೋಪ­ಗೊಂಡಿತು.ಮೂರು ದಿನ ನಡೆದ ಅಥ್ಲೆಟಿಕ್‌ ಕೂಟದಲ್ಲಿ ಗುರುವಾರದ ಮೂರು ದಾಖಲೆ ಸೇರಿಸಿ ಒಟ್ಟು 12 ದಾಖಲೆಗಳು ನಿರ್ಮಾಣವಾದವು. ಶಾಸಕ ಬಿ.ಎ.ಮೊಯಿದ್ದೀನ್‌ ಬಾವ ಪ್ರಶಸ್ತಿ ಪ್ರದಾನ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಮಾಜಿ ವೇಟ್‌ಲಿಫ್ಟರ್‌ ಪುಷ್ಪರಾಜ್‌, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಚ್‌.ನಾಗಲಿಂಗಪ್ಪ, ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ.ವಿಶ್ವನಾಥ ಭಟ್‌, ಕಾಲೇಜು ಆಡಳಿತ ಸಮಿತಿ ಸಂಯೋಜಕ ಎಚ್‌.ವಿಶ್ವನಾಥ ಬರ್ನಾರ್ಡ್‌, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್‌ ಕುಮಾರ್‌ ಕೆ. ಮತ್ತಿತರರು ಇದ್ದರು.ಪುರುಷರ ವಿಭಾಗದ ಫಲಿತಾಂಶ:

200 ಮೀ. ಓಟ: ಗಣೇಶ್‌ (ಆಳ್ವಾಸ್‌ ಕಾಲೇಜು ಮೂಡುಬಿದಿರೆ)– (ಸಮಯ –22.3 ಸೆಕೆಂಡ್‌)–1; ಅನ್ಮೋಲ್‌ ಶೆಟ್ಟಿ (ಪದುವಾ ಕಾಲೇಜು ಮಂಗಳೂರು)–22.4 ಸೆ.–2; ಸುನೀಶ್‌ ಬಾಬು (ಜಿಎಫ್‌ಜಿಸಿ ತೆಂಕನಿಡಿಯೂರು ಉಡುಪಿ)–22.8 ಸೆ–3.

1500 ಮೀ: ಸೂರಜ್‌ (ಆಳ್ವಾಸ್‌)–4.7.9 ಸೆ.–ಪ್ರ; ಶರತ್‌ (ಆಳ್ವಾಸ್‌)–4.11 ಸೆ–ದ್ವಿ; ಯಶವಂತ ಕೆ.ಬಿ.(ಎಸ್‌ಡಿಎಂ ಉಜಿರೆ)–4.20.2 ಸೆ–ತೃ.ಹಾಫ್‌ ಮ್ಯಾರಥಾನ್‌: ದೇವಣ್ಣ (ವಿವಿ ಕ್ಯಾಂಪಸ್‌)–ಪ್ರ; ಶಿವಾನಂದ ಬಿ.ನಾಯ್ಕ್‌ (ಆಳ್ವಾಸ್‌ ಮೂಡುಬಿದಿರೆ)–ದ್ವಿ; ಸದಾಶಿವ (ಎಸ್‌ಡಿಎಂ ಉಜಿರೆ)–ತೃ.

ಪೋಲ್‌ ವಾಲ್ಟ್‌: ಅನೂಪ್‌ ಸಿ.ವಿ. (ಆಳ್ವಾಸ್‌)–4.40 ಮೀ.–ಪ್ರ; ಸುನೀಲ್‌ ಅನೋಲ್ಕರ್‌ (ವಿವಿ ಕ್ಯಾಂಪಸ್‌)–2.50 ಮೀ–ದ್ವಿ.

ಟ್ರಿಪಲ್‌ ಜಂಪ್‌: ಅನೂಪ್‌ ಸಿ.ಕೊರೆಯ (ಡಾ.ಎನ್‌ಎಸ್‌ಎಎಂ ನಿಟ್ಟೆ)–14.38 ಮೀ.–ಪ್ರ; ವಿನೋದ್‌ ವಿ.ನಾಯ್ಕ್‌ (ಎಸ್‌ಡಿಎಂ ಉಜಿರೆ)–14.7 ಮೀ–ದ್ವಿ; ಸಂಶೀರ್‌ ಎಸ್‌.ಇ. (ಆಳ್ವಾಸ್‌ ಮೂಡುಬಿದಿರೆ)–14.04 ಮೀ–ತೃ.ಶಾಟ್‌ಪುಟ್‌: ಸಾಯಿರಾಜ್‌ (ಆಳ್ವಾಸ್‌)–14.10 ಮೀ–ಪ್ರ; ಗೌತಮ್‌ ಜಿ. (ಆಳ್ವಾಸ್‌)–11.79–ದ್ವಿ; ಸುನಿಲ್‌ ಆರ್‌. (ಜಿಎಫ್‌ಜಿಸಿ ಕುಶಾಲನಗರ)–11.43–ತೃ.

ಹ್ಯಾಮರ್‌ ಎಸೆತ: ಖಾಸಿಂ (ಆಳ್ವಾಸ್‌ ಮೂಡುಬಿದಿರೆ)–53.02 ಮೀ–ಪ್ರ; ಸುಧೀರ್‌ ಶಿರ್ಡನ್‌ (ಆಳ್ವಾಸ್‌)–51.53–ದ್ವಿ; ಶರತ್‌ ಕುಮಾರ್‌ (ಗೋವಿಂದದಾಸ ಸುರತ್ಕಲ್‌)–26.87 ಮೀ.–ತೃ.ಡೆಕಾಥ್ಲಾನ್‌: ನಾಗೇಂದ್ರ ಪ್ರಸಾದ್‌್ (ಆಳ್ವಾಸ್‌)–5576 ಅಂಕ–ಪ್ರ; ಬಸವರಾಜ್‌ ಎಚ್‌.(ಆಳ್ವಾಸ್‌ ದೈಹಿಕ ಶಿಕ್ಷಣ ಕಾಲೇಜು)–5106–ದ್ವಿ; ವಿನೋದ್‌ ವಿ.ನಾಯ್ಕ್‌ (ಎಸ್‌ಡಿಎಂ ಉಜಿರೆ)–4803 ಅಂಕ–ತೃ.

4x100 ಮೀ. ರಿಲೆ: ಆಳ್ವಾಸ್‌ ಕಾಲೇಜು ಮೂಡುಬಿದಿರೆ (43.3ಸೆ)–ಪ್ರ; ಎಸ್‌ಡಿಎಂ ಉಜಿರೆ (45.2 ಸೆ)–ದ್ವಿ; ಸೇಂಟ್‌ ಅಲೋಷಿಯಸ್‌ ಮಂಗಳೂರು (45.9)–ತೃ.4X400 ಮೀ. ರಿಲೆ: ಆಳ್ವಾಸ್‌ (3.19.9ಸೆ)–ಪ್ರ; ಎಸ್‌ಡಿಎಂ ಉಜಿರೆ (3.26.8ಸೆ)–ದ್ವಿ; ಮಂಗಳೂರು ವಿವಿ ಕ್ಯಾಂಪಸ್‌ (3.31.5 ಸೆ)–ತೃ.

ಮಹಿಳಾ ವಿಭಾಗ: 200 ಮೀ. ಓಟ: ಸುಶ್ಮಿತಾ ದೇವದಾಸ್‌ (ಆಳ್ವಾಸ್‌)–25.5 ಸೆ–ಪ್ರ; ನಿಶ್ವಿತಾ ಎಸ್‌.ಎಸ್‌. (ಎಸ್‌ಡಿಎಂ ಉಜಿರೆ)–26.6–ದ್ವಿ; ತೇಜಶ್ವಿನಿ ಕೆ. (ಆಳ್ವಾಸ್‌)–27.1 ಸೆ–ತೃ.

1500 ಮೀ ಓಟ: ಸುಪ್ರೀತಾ ಬಿ.ಕೆ. (ಆಳ್ವಾಸ್‌)–4.59.3ಸೆ.–ಪ್ರ; ಸುಜಾತಾ ಎ.ಎಸ್‌. (ಆಳ್ವಾಸ್‌ ದೈಹಿಕ ಶಿಕ್ಷಣ ಕಾಲೇಜು)–5.01.6 ಸೆ–ದ್ವಿ; ಅಕ್ಷತಾ ಪಿ.ಎಲ್‌.(ಆಳ್ವಾಸ್‌)–5.18.2 ಸೆ–ತೃ.ಹಾಫ್‌ ಮ್ಯಾರಥಾನ್‌: ಅರ್ಚನಾ ಕೆ.ಎಂ. (ಆಳ್ವಾಸ್‌)–ಪ್ರ; ಅಕ್ಷತಾ ಎಸ್‌. (ಆಳ್ವಾಸ್‌)–ದ್ವಿ; ಕವಿತಾ ವಿ.ಎಚ್‌.(ಆಳ್ವಾಸ್‌)–ತೃ.

ಪೋಲ್‌ ವಾಲ್ಟ್‌: ಪ್ರೀತಿ (ಆಳ್ವಾಸ್‌)–2.70 ಮೀ– ಪ್ರ; ಕೀರ್ತಿ ಶೆಟ್ಟಿ (ಶಾರದಾ ಕಾಲೇಜು ಬಸ್ರೂರು)–2.60 ಮೀ–ದ್ವಿ; ಸುಪ್ರಿಯಾ (ಎಸ್‌ಡಿಎಂ ಉಜಿರೆ)–2.50 ಮೀ–ತೃ.

ಟ್ರಿಪಲ್ ಜಂಪ್‌: ಜಾಲಿ ವಿ.ಎಂ. (ಆಳ್ವಾಸ್‌)– 12.20 ಮೀ–ಪ್ರ; ಅಶ್ವಿನಿ ಡಿ. (ವಿವಿ ಕ್ಯಾಂಪಸ್‌)–11.30 ಮೀ–ದ್ವಿ; ಪ್ರಿಯಾ ಎ. (ಎಸ್‌ಡಿಎಂ ಉಜಿರೆ)–11.17–ತೃ.ಜಾವೆಲಿನ್‌ ಎಸೆತ: ರಶ್ಮಿ ಕೆ. (ಆಳ್ವಾಸ್‌)–41.98–ಪ್ರ; ಮಧು ಕೇಸರ್‌ಕರ್‌ (ಆಳ್ವಾಸ್‌)–36.48 ಮೀ.–ದ್ವಿ; ದೀಕ್ಷಾ ಕೆ. (ಜಿಎಫ್‌ಜಿಸಿ ಉಪ್ಪಿನಂಗಡಿ)–31.7 ಮೀ–ತೃ.

ಹ್ಯಾಮರ್‌ ಎಸೆತ: ವಿಭಾ ಶಂಕರ್‌ (ವಿವಿ ಕ್ಯಾಂಪಸ್‌)–38.79 ಮೀ–ಪ್ರ; ಪುಣ್ಯಶ್ರೀ ರೈ (ಆಳ್ವಾಸ್‌)–36.64 ಮೀ–ದ್ವಿ; ರಚನಾ (ಆಳ್ವಾಸ್‌)–34.39 ಮೀ–ತೃ.ಹೆಪ್ಟಾಥ್ಲಾನ್‌: ರೋಜಾ ಎಚ್‌.ಸಿ. (ಎಸ್‌ಡಿಎಂ ಉಜಿರೆ)–3555 ಅಂಕ–ಪ್ರ; ತೇಜಸ್ವಿನಿ ಕೆ. (ಆಳ್ವಾಸ್‌)–3204–ದ್ವಿ.

4X100 ಮೀ ರಿಲೆ: ಆಳ್ವಾಸ್‌ ಮೂಡುಬಿದಿರೆ (49.2 ಸೆ.)–ಪ್ರ; ಎಸ್‌ಡಿಎಂ ಉಜಿರೆ (51.8 ಸೆ)–ದ್ವಿ; ಮಂಗಳೂರು ವಿವಿ ಕ್ಯಾಂಪಸ್‌ (53.4 ಸೆ)–ತೃ.

4X400 ಮೀ ರಿಲೆ: ಆಳ್ವಾಸ್‌ ಕಾಲೇಜು ಮೂಡುಬಿದಿರೆ (4.15.2 ಸೆ)–ಪ್ರ; ಎಸ್‌ಡಿಎಂ ಉಜಿರೆ (4.40.7 ಸೆ)–ದ್ವಿ; ಜಿಎಫ್‌ಜಿಸಿ ಹೆಬ್ರಿ (5.19.8 ಸೆ)–ತೃ.

ಪ್ರತಿಕ್ರಿಯಿಸಿ (+)