ಮಂಗಳವಾರ, ಮೇ 11, 2021
25 °C

ಅಂತರ ಘಟ್ಟಮ್ಮ ದೇವಿ ಜಾತ್ರೋತ್ಸವ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಪಟ್ಟಣದ ಮೇದರ ಬೀದಿಯಲ್ಲಿರುವ ಕರಿಯಮ್ಮ ದೇವಿ ಹಾಗೂ ಅಂತರ ಘಟ್ಟಮ್ಮ ದೇವಿಯರ ಜಾತ್ರಾ ಮಹೋತ್ಸವವು ಗುರುವಾರ ಪ್ರಾರಂಭವಾಗಿದ್ದು, ಇದೇ ಶನಿವಾರದ ವರೆಗೆ ನಡೆಯಲಿದೆ.

ಜಾತ್ರೋತ್ಸವದ ಪ್ರಾರಂಭದ ದಿನವಾದ ಗುರುವಾರ ದೇವಿಗೆ ವಿಶೇಷ ಅಲಂಕಾರದೊಂದಿಗೆ ಪೂಜಾ ಕಾರ್ಯ ಹಾಗೂ ಭಕ್ತಾದಿಗಳ ಮನೆಯಲ್ಲಿ ಪೂಜೆ ನಡೆಸಲಾಯಿತು.ಜಾತ್ರೆಯ ಎರಡನೇ ದಿನವಾದ ಶುಕ್ರವಾರ ಬೆಳಿಗ್ಗೆ ವಿಶೇಷ ಪೂಜೆ ನಂತರ ಸಂಕಿನ ಕೊಪ್ಪದ ಭದ್ರಾ ಹಿನ್ನೀರಿನಲ್ಲಿ ಗಂಗಾ ಸ್ನಾನ ಹಾಗೂ ಪೂಜೆ, ರಾತ್ರಿ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದವರೆಗೆ ಅಂತರ ಘಟ್ಟಮ್ಮ  ದೇವಿಯ ಬಿಂಬ ಮೆರವಣಿಗೆ ನಡೆಯಲಿದೆ.ಜಾತ್ರೆಯ ಅಂತಿಮ ದಿನವಾದ ಶನಿವಾರ ಬೆಳಗಿನ ಜಾವ 5 ಕ್ಕೆ ಕೆಂಡಾರ್ಚನೆ, ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ಅಂದು ಸಂಜೆ ದೇವಿಗೆ ಓಕುಳಿ ಸೇವೆ, ಪಾನಕ ಸೇವೆ, ನಂತರ ವಿದ್ಯುತ್ ದೀಪಾಲಂಕೃತವಾದ ಪುಷ್ಪಾಲಂಕೃತ ಮಂಟಪದಲ್ಲಿ ಪಟ್ಟಣದಲ್ಲಿ ದುರ್ವಿಗೆರೆ ಕೊಲ್ಲಾರಮ್ಮ, ತರೀಕೆರೆಯ ಗುಳ್ಳಮ್ಮ ದೇವಿ ಹಾಗೂ ಅಂತರಘಟ್ಟಮ್ಮ ದೇವಿಯವರ ಉತ್ಸವ ಮೆರವಣಿಗೆ ನಡೆಯಲಿದೆ. ಮಹಿಳಾ ವೀರಗಾಸೆ, ಮ್ಯೂಜಿಕಲ್ ಡ್ರಂ ಸೆಟ್ ಹಾಗೂ ಸಿಡಿಮದ್ದು ಪ್ರದರ್ಶನ ಏರ್ಪಡಿ ಸಲಾಗಿದೆ.

ಹಲ್ಲೆ: ಖಂಡನೆಕೊಪ್ಪ: ಜಿಲ್ಲೆಯ ಮಾಗೋಡಿನಲ್ಲಿ ಇತ್ತೀಚೆಗೆ ಜಾನುವಾರು ಖರೀದಿ ಮಾಡಿ ಸಾಗಣೆ ಮಾಡುತ್ತಿದ್ದ ರೈತರ ಮೇಲೆ ಭಜರಂಗದಳದ ಪ್ರವೀಣ್ ಖಾಂಡ್ಯ ಹಾಗೂ ಅವರ ಸಹಚರರು ಮರಣಾಂತಿಕ ಹಲ್ಲೆ ಮಾಡಿ ಹಣ ದೋಚಿರುವುದು ಖಂಡನೀಯ ಎಂದು ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಉಮೇಶ್ ತಿಳಿಸಿದ್ದಾರೆ.ಪೊಲೀಸರು ಕ್ರಮ ತೆಗೆದುಕೊಳ್ಳದೇ ಇದ್ದರೆ ಪ್ರತಿಭಟನೆ ರೂಪಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.