ಅಂತರ ವಿವಿ ಈಜು: ಜೈನ್ ತಂಡಕ್ಕೆ ಪ್ರಶಸ್ತಿ

7

ಅಂತರ ವಿವಿ ಈಜು: ಜೈನ್ ತಂಡಕ್ಕೆ ಪ್ರಶಸ್ತಿ

Published:
Updated:

ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ತಂಡದವರು ಕೋಲ್ಕತ್ತದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು.ಅಕ್ಟೋಬರ್ 3 ರಿಂದ 7ರ ವರೆಗೆ ಸುಭಾಷ್ ಸರೋವರ್ ಈಜುಕೊಳದಲ್ಲಿ ನಡೆದ ಕೂಟದಲ್ಲಿ ಜೈನ್ ವಿವಿ ತಂಡ ಒಟ್ಟು 83 ಪಾಯಿಂಟ್‌ಗಳನ್ನು ಕಲೆಹಾಕಿತು. ಮಹಿಳೆಯರ ವಿಭಾಗದಲ್ಲೂ (59 ಪಾಯಿಂಟ್) ಅಗ್ರಸ್ಥಾನ ಜೈನ್ ತಂಡಕ್ಕೆ ಒಲಿಯಿತು.ಒಲಿಂಪಿಯನ್ ಎ.ಪಿ. ಗಗನ್ ಮತ್ತು ಸುರಭಿ ತಿಪ್ರೆ ಒಳಗೊಂಡಂತೆ ಒಟ್ಟು ಆರು ಸ್ಪರ್ಧಿಗಳು ಜೈನ್ ತಂಡವನ್ನು ಪ್ರತಿನಿಧಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯ ತಂಡ ಪುರುಷರ ವಿಭಾಗದಲ್ಲಿ (33 ಪಾಯಿಂಟ್) `ರನ್ನರ್ ಅಪ್~ ಸ್ಥಾನ ತನ್ನದಾಗಿಸಿೊಂಡಿತು. ಚಂಡೀಗಡದ ಪಂಜಾಬ್ ವಿವಿ ಪುರುಷರ ವಿಭಾಗದಲ್ಲಿ ಅಗ್ರಸ್ಥಾನ (48 ಪಾಯಿಂಟ್) ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry