ಅಂತರ ವಿವಿ ಬಾಲ್‌ಬ್ಯಾಡ್ಮಿಂಟನ್ ಮಂಗಳೂರು ವಿವಿಗೆ 2ನೇ ಸ್ಥಾನ

7

ಅಂತರ ವಿವಿ ಬಾಲ್‌ಬ್ಯಾಡ್ಮಿಂಟನ್ ಮಂಗಳೂರು ವಿವಿಗೆ 2ನೇ ಸ್ಥಾನ

Published:
Updated:

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಮಹಿಳೆಯರ ತಂಡ, ಚೆನ್ನೈನಲ್ಲಿ ಎಸ್‌ಆರ್‌ಎಂ ವಿವಿ ಆಶ್ರಯದಲ್ಲಿ ಶುಕ್ರವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿವಿ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದೆ.

ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಕೊಟ್ಟಾಯಮ್‌ನ ಮಹಾತ್ಮಾ ಗಾಂಧಿ ವಿವಿ ತಂಡವನ್ನು 29-23, 29-3 ರಲ್ಲಿ ಸೋಲಿಸಿದ ಮಂಗಳೂರು ವಿವಿ ಸತತ ಏಳನೇ ಬಾರಿ ಸೆಮಿಫೈನಲ್ ಲೀಗ್ ಪ್ರವೇಶಿಸಿತ್ತು. ಲೀಗ್‌ನಲ್ಲಿ ಮದರಾಸು ವಿವಿ ಮತ್ತು ಎಸ್‌ಆರ್‌ಎಂ ವಿವಿ ತಂಡವನ್ನು ಸೋಲಿಸಿದ ಮಂಗಳೂರು, ವಿಜೇತ ಅಣ್ಣಾ ವಿವಿ ತಂಡಕ್ಕೆ ಮಣಿಯಿತು.

ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ ತಂಡ ನಾಲ್ಕನೇ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಉತ್ತಮ ನಿರ್ವಹಣೆಗಾಗಿ ನಾಯಕಿ ಪೂರ್ಣಿಮಾ ಜಿ.ಎಸ್. ‘ಉತ್ತಮ ಆಟಗಾರ್ತಿ’ ಹಾಗೂ ಪುರುಷರ ವಿಭಾಗದಲ್ಲಿ ಕಿರಣ್ ಕುಮಾರ್ ‘ಉತ್ತಮ ಆಟಗಾರ’ ಪ್ರಶಸ್ತಿ ಪಡೆದರು. ಮಂಗಳೂರು ವಿವಿ ತಂಡಗಳಿಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸಿದ್ಧತಾ ಶಿಬಿರ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry