ಅಂತರ ಶಾಲಾ ಬ್ಯಾಡ್ಮಿಂಟನ್ ಟೂರ್ನಿ: ಸಂಕೀರ್ತ್‌ಗೆ ಪ್ರಶಸ್ತಿ ಡಬಲ್

7

ಅಂತರ ಶಾಲಾ ಬ್ಯಾಡ್ಮಿಂಟನ್ ಟೂರ್ನಿ: ಸಂಕೀರ್ತ್‌ಗೆ ಪ್ರಶಸ್ತಿ ಡಬಲ್

Published:
Updated:
ಅಂತರ ಶಾಲಾ ಬ್ಯಾಡ್ಮಿಂಟನ್ ಟೂರ್ನಿ: ಸಂಕೀರ್ತ್‌ಗೆ ಪ್ರಶಸ್ತಿ ಡಬಲ್

ಬೆಂಗಳೂರು: ಇಂದಿರಾನಗರದ ಪಿಪಿಇಸಿಯ ಬಿ.ಎಸ್.ಸಂಕೀರ್ತ್ ಇಲ್ಲಿ ನಡೆದ ರಮೇಶ್ ಪಡುಕೋಣೆ ಸಿರೂರು ಸ್ಮಾರಕ ಅಂತರ ಶಾಲಾ ಬ್ಯಾಡ್ಮಿಂಟನ್ ಟೂರ್ನಿಯ 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ `ಡಬಲ್~ ಸಾಧನೆ ಮಾಡಿದ್ದಾರೆ.ಪ್ರಕಾಶ್ ಅಂಕಣದಲ್ಲಿ ನಡೆದ ಟೂರ್ನಿಯ ಸಿಂಗಲ್ಸ್ ಫೈನಲ್‌ನಲ್ಲಿ ಮಂಗಳವಾರ ಸಂಕೀರ್ತ್ 18-21, 21-12, 21-15ರಲ್ಲಿ ಆರ್ಮಿ ಪಬ್ಲಿಕ್ ಸೇನೆಯ ಸುದೀಪ್ ಸುರೇಶ್ ಅವರನ್ನು ಮಣಿಸಿದರು.ಸೆಮಿಫೈನಲ್‌ನಲ್ಲಿ ಅವರು 14-21, 21-14, 21-11ರಲ್ಲಿ ಸೇಂಟ್ ಜೋಸೆಫ್ಸ್‌ನ ವಿಶಾಲ್ ಆರ್.ಭಟ್ ಎದುರೂ, ಸುದೀಪ್ ಸುರೇಶ್ 21-16, 21-16ರಲ್ಲಿ ಸಿಎಂಆರ್ ನ್ಯಾಷನಲ್ಸ್‌ನ ಸಿದ್ದಾರ್ಥ್ ವಿರುದ್ಧವೂ ಗೆಲುವು ಸಾಧಿಸಿದ್ದರು.ಡಬಲ್ಸ್‌ನಲ್ಲಿ ರೋಶನ್ ಜೊತೆಗೂಡಿ ಆಡಿದ ಬಿ.ಎಸ್.ಸಂಕೀರ್ತ್ ಪ್ರಶಸ್ತಿ ಜಯಿಸಿದರು. ಈ ಜೋಡಿ 21-19, 21-14ರಲ್ಲಿ ಕೇಂಬ್ರಿಜ್ ಹೈಸ್ಕೂಲ್‌ನ ಶಿವೇಂದು ಜೈನ್ ಹಾಗೂ ಪ್ರದ್ಯುಮ್ನ ಅವರನ್ನು ಸೋಲಿಸಿತು.

ಇದೇ ವಯೋವರ್ಗದ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಫ್ಲೊರೆನ್ಸ್ ಶಾಲೆಯ ಸೈಯೆದಾ ಸಾದತ್ ಆರ್ಶೀನ್ ಚಾಂಪಿಯನ್ ಆದರು. ಅವರು ಫೈನಲ್‌ನಲ್ಲಿ 21-13, 21-6ರಲ್ಲಿ ವಿದ್ಯಾವರ್ಧಕ ಶಾಲೆಯ ಆಪೇಕ್ಷಾ ನಾಯಕ್ ಎದುರು ಗೆದ್ದರು.ಡಬಲ್ಸ್ ಫೈನಲ್‌ನಲ್ಲಿ ಅರೊಬಿಂದೊ ಶಾಲೆಯ ಚಿನ್ಮಯಿ ವೆಂಕಟೇಶ್ ಹಾಗೂ ಎಸ್.ಶ್ರೇಯಾ 21-14, 21-13ರಲ್ಲಿ ಅರ್ಚನಾ ಪೈ-ಆರ್.ಎನ್.ಸವಿತಾ ಎದುರು ಗೆದ್ದು ಪ್ರಶಸ್ತಿ ಜಯಿಸಿದರು.14 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್‌ನಲ್ಲಿ ಫ್ಲೊರೆನ್ಸ್ ಶಾಲೆಯ ಸೈಯೆದ್ ಸಾದ್ ಅಲಿ 21-16, 21-18ರಲ್ಲಿ ರೋಹನ್ ಕಾಮತ್ ಅವರನ್ನು ಮಣಿಸಿ ಚಾಂಪಿಯನ್ ಆದರು. ಡಬಲ್ಸ್‌ನ ಅಂತಿಮ ಪಂದ್ಯದಲ್ಲಿ ಅಕ್ಷಯ್ ಶ್ರೀನಿವಾಸ್-ಅರ್ಜುನ್ ಆಚಾರ್ಯ 21-13, 21-11ರಲ್ಲಿ ಆರ್.ಪಿ.ವಿಷ್ಣು-ಶಮ್‌ದೀಪ್ ಎದುರು ಗೆಲುವು ಸಾಧಿಸಿದರು.ಈ ವಯೋಮಿತಿಯ ಬಾಲಕಿಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಆಪೇಕ್ಷಾ ನಾಯಕ್ 21-16, 21-13ರಲ್ಲಿ ಅರ್ಚನಾ ಪೈ ಅವರನ್ನು ಪರಾಭವಗೊಳಿಸಿದರು.12 ವರ್ಷದೊಳಗಿನವರ ಫೈನಲ್‌ನಲ್ಲಿ ಅಶ್ವಿನಿ ಭಟ್ 15-21, 21-19, 21-15ರಲ್ಲಿ ಯು.ಕೆ.ಮಿಥುಲಾ ಎದುರು ಗೆದ್ದರು. ಡಬಲ್ಸ್ ಫೈನಲ್‌ನಲ್ಲಿ ಅಶ್ವಿನಿ ಭಟ್-ಪ್ರಾರ್ಥನಾ 21-9, 21-13ರಲ್ಲಿ ತೃಷಾ-ಕೀರ್ತಾನ ಅವರ ಮೇಲೆ ಜಯ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry