ಬುಧವಾರ, ನವೆಂಬರ್ 20, 2019
27 °C

ಅಂತಿಮ ಕಣದಲ್ಲಿ 60 ಅಭ್ಯರ್ಥಿಗಳು

Published:
Updated:

ಬಾಗಲಕೋಟೆ: ಮೇ 5ರಂದು ನಡೆಯಲಿರುವ ಜಿಲ್ಲೆಯ 7 ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರ 33 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದು, 60 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 17 ರವರೆಗೆ  ವಿವಿಧ ಪಕ್ಷಗಳು ಮತ್ತು ಪಕ್ಷೇತರರು ಸೇರಿದಂತೆ ಒಟ್ಟು 93 ಅಭ್ಯರ್ಥಿಗಳಿಂದ 123 ನಾಮಪತ್ರ ಸಲ್ಲಿಕೆಯಾಗಿತ್ತು. ಅದರಲ್ಲಿ ಎರಡು ನಾಮಪತ್ರಗಳು ತಿರಸ್ಕೃತವಾಗಿತ್ತು.ಜಮಖಂಡಿ, ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ಅಸಮಾದಾನವನ್ನು ಸರಿಪಡಿಸವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಬಂಡಾಯ ಅಭ್ಯರ್ಥಿಗಳು ಕಣದಲ್ಲೇ ಉಳಿಯುವ ಮೂಲಕ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ್ದಾರೆ.ಬಾಗಲಕೋಟೆ ಕ್ಷೇತ್ರ: ವೀರಣ್ಣ ಸಿ. ಚರಂತಿಮಠ (ಬಿ.ಜೆ.ಪಿ), ಎಚ್.ವೈ. ಮೇಟಿ (ಕಾಂಗ್ರೆಸ್), ಬಸವರಾಜ ಪಾಟೀಲ (ಜೆ.ಡಿ.ಎಸ್), ಆರ್.ಡಿ. ಬಾಬು (ಬಹುಜನ ಸಮಾಜ ಪಕ್ಷ), ಪರಶುರಾಮ ನೀಲನಾಯಕ (ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ) ಹಾಗೂ ಪರಶುರಾಮ ರಾಠೋಡ (ಪಕ್ಷೇತರ).ಮುಧೋಳ  ಕ್ಷೇತ್ರ: ಗೋವಿಂದ ಕಾರಜೋಳ (ಬಿ.ಜೆ.ಪಿ), ಆರ್.ಬಿ.ತಿಮ್ಮೋಪೂರ (ಕಾಂಗ್ರೆಸ್), ಶಂಕರ ನಾಯಕ (ಜೆ.ಡಿ.ಎಸ್), ಅಶೋಕ ಲಿಂಬಾವಳಿ (ಬಿಎಸ್‌ಆರ್ ಕಾಂಗ್ರೆಸ್) ಹಾಗೂ ಸುರೇಶ  ಕಾಳೆ (ಪಕ್ಷೇತರ).ತೇರದಾಳ  ಕ್ಷೇತ್ರ: ಉಮಾಶ್ರಿ(ಕಾಂಗ್ರೆಸ್), ರಂಗನಗೌಡ ಪಾಟೀಲ (ಜೆ.ಡಿ.ಎಸ್), ಸಿದ್ದು ಸವದಿ (ಬಿ.ಜೆ.ಪಿ), ರಮೇಶ ಕೇಸರಗೊಪ್ಪ (ಬಿಎಸ್‌ಆರ್ ಕಾಂಗ್ರೆಸ್), ಬಸವರಾಜ  ಬಾಳಿಕಾಯಿ (ಕೆ.ಜೆ.ಪಿ), ಮೆಹಬೂಬ್‌ಸಾಬ ನದಾಫ್ (ಜೆ.ಡಿ.ಯು) ಹಾಗೂ ಮೈಬೂಬಸಾಬ ಸಂಗತ್ರಾಸ (ಪಕ್ಷೇತರ).ಹುನಗುಂದ  ಕ್ಷೇತ್ರ: ವಿಜಯಾನಂದ ಕಾಶಪ್ಪನವರ (ಕಾಂಗ್ರೆಸ್), ದೊಡ್ಡನಗೌಡ ಜಿ. ಪಾಟೀಲ (ಬಿ.ಜೆ.ಪಿ), ಅಬ್ದುಲ್ ಜಬ್ಬಾರ ಕಲಬುರ್ಗಿ (ಜೆ.ಡಿ.ಎಸ್), ಸೈಂ ಖಾಜೇಸಾಬ (ಬಹುಜನ ಸಮಾಜ ಪಕ್ಷ), ಅಮರೇಶ ಮಲ್ಲೇಶಪ್ಪ ನಾಗೂರ (ಜೆ.ಡಿ.ಯು), ಕೃಷ್ಣಗೌಡ ಹಲಗತ್ತಿ (ಕೆ.ಜೆ.ಪಿ), ಸಂಗನಗೌಡ್ರ ಎಚ್. ಗೌಡರ (ಬಿ.ಎಸ್.ಆರ್. ಕಾಂಗ್ರೆಸ್), ಖಾಜೇಸಾಬ ಮೇಕಮುಂಗಲಿ (ಪಕ್ಷೇತರ), ಶರಣಬಸಪ್ಪ ನೆಟಿಕಟ್ಟಿ (ಪಕ್ಷೇತರ) ಹಾಗೂ ಎಚ್. ಎಲ್.ಮಾದರ (ಪಕ್ಷೇತರ).ಜಮಖಂಡಿ ಕ್ಷೇತ್ರ: ಶ್ರಿಕಾಂತ ಕುಲಕರ್ಣಿ (ಬಿ.ಜೆ.ಪಿ), ಸಿದ್ದು ನ್ಯಾಮಗೌಡ (ಕಾಂಗ್ರೆಸ್), ಬಿ.ಎಸ್. ಸಿಂಧೂರ (ಜೆ.ಡಿ.ಎಸ್), ಸಂಗಮೇಶ ಕಾಂಬಳೆ (ಬಿ.ಎಸ್.ಪಿ), ಉಮೇಶ ಮಹಾಬಳಶೆಟ್ಟಿ (ಕೆ.ಜೆ.ಪಿ), ಶಂಕರ ಹೂಗಾರ (ಜೆ.ಡಿ.ಯು), ಜಗದೀಶ ಗುಡಗುಂಟಿ (ಪಕ್ಷೇತರ), ಬಸಪ್ಪ ಕೊಕಟನೂರ (ಪಕ್ಷೇತರ), ಮಕಬೂಲ ರಾಜೇಸಾಬ ಸೈಯ್ಯದ್ (ಪಕ್ಷೇತರ), ರವೀಂದ್ರ ಹಳಿಂಗಳಿ (ಪಕ್ಷೇತರ).ಬೀಳಗಿ  ಕ್ಷೇತ್ರ: ಜೆ.ಟಿ.ಪಾಟೀಲ (ಕಾಂಗ್ರೆಸ್), ಮುರುಗೇಶ ನಿರಾಣಿ (ಬಿ.ಜೆ.ಪಿ), ಬಸವಪ್ರಭು ಸರನಾಡಗೌಡ (ಜೆ.ಡಿ.ಎಸ್), ಬಾಲಪ್ಪ ನಂದೇಪ್ಪನವರ (ಬಹುಜನ ಸಮಾಜ ಪಕ್ಷ), ಡಿ.ಬಿ. ಪೂಜಾರ (ಬಿ.ಎಸ್.ಆರ್ ಕಾಂಗ್ರೆಸ್), ವೀರಣ್ಣ ಹಳೇಗೌಡರ (ಜೆ.ಡಿ.ಯು), ಕರಿಯಪ್ಪ ಆನದಿನ್ನಿ (ಪಕ್ಷೇತರ), ಗೌಸ್‌ಲಾಜಮ್ ಬಾ ಮುಲ್ಲಾ (ಪಕ್ಷೇತರ), ಬಸಪ್ಪ ಲಗಳಿ (ಪಕ್ಷೇತರ), ಮಹೇಶ ನಂದಿಹಾಳ (ಪಕ್ಷೇತರ), ಲಕ್ಷ್ಮಪ್ಪ ಮಾದರ (ಪಕ್ಷೇತರ), ಮೀರಾಸಾಹೇಬ ಮೌಲಾಸಾಹೇಬ ಶೇಖ್(ನಧಾಪ್) (ಪಕ್ಷೇತರ), ಯಲ್ಲಪ್ಪ ಮೂಲಿಮನಿ (ಪಕ್ಷೇತರ) ಹಾಗೂ ರಮೇಶ ಭಜಂತ್ರಿ (ಪಕ್ಷೇತರ).ಬಾದಾಮಿ ಕ್ಷೇತ್ರ: ಬಿ.ಬಿ.ಚಿಮ್ಮನಕಟ್ಟಿ (ಕಾಂಗ್ರೆಸ್), ಎಂ.ಕೆ. ಪಟ್ಟಣಶೆಟ್ಟಿ (ಬಿ.ಜೆ.ಪಿ), ಮಹಾಂತೇಶ ಮಮದಾಪೂರ (ಜೆ.ಡಿ.ಎಸ್), ಕಾಂತಿಚಂದ್ರ ಜ್ಯೋತಿ (ಬಹುಜನ ಸಮಾಜ ಪಕ್ಷ), ಬಸಯ್ಯ ಹಳ್ಳೂರ (ಕೆ.ಜೆ.ಪಿ), ಮಲ್ಲಿಕಾರ್ಜುನಗೌಡ ಪಾಟೀಲ (ಬಿಎಸ್‌ಆರ್ ಕಾಂಗ್ರೆಸ್), ಮಾರುತಿ ಜಮೀನ್ದಾರ (ಜೆ.ಡಿ.ಯು) ಹಾಗೂ ದಯಾನಂದ ಕುಲಕರ್ಣಿ (ಪಕ್ಷೇತರ) ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಪ್ರತಿಕ್ರಿಯಿಸಿ (+)