ಅಂತಿಮ ಕಣದಲ್ಲಿ 91 ಮಂದಿ

7
21 ಅಭ್ಯರ್ಥಿಗಳ ಉಮೇದುವಾರಿಕೆ ವಾಪಸ್ಸು

ಅಂತಿಮ ಕಣದಲ್ಲಿ 91 ಮಂದಿ

Published:
Updated:

ಮಂಡ್ಯ: ವಿಧಾನಸಭೆ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಜಿಲ್ಲೆಯಲ್ಲಿ ಒಟ್ಟು 21 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್ಸು ಪಡೆದಿದ್ದು, 91 ಮಂದಿ ಅಂತಿಮವಾಗಿ ಅಖಾಡದಲ್ಲಿ ಇದ್ದಾರೆ.ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಸುಮಂತ್, ಎ.ಎಸ್.ರವೀಂದ್ರ ಹಾಗೂ ಅಶೋಕ್ ಕುಮಾರ್ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದು, 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಮದ್ದೂರು ಕ್ಷೇತ್ರದಲ್ಲಿ ಎಸ್. ದೇವರಾಜ್ (ಪಕ್ಷೇತರ) ನಾಮಪತ್ರ ವಾಪಸ್ಸು ಪಡೆದಿದ್ದು, 13 ಮಂದಿ ಕಣದಲ್ಲಿದ್ದಾರೆ. ಮಳವಳ್ಳಿ ಕ್ಷೇತ್ರದಲ್ಲಿ ಶಿವಪ್ಪ, ಆರ್.ಎಂ.ನಂಜುಂಡಸ್ವಾಮಿ, ಮುತ್ತುರಾಜು ಕೆ ಹಾಗೂ ಎಚ್. ಮಹದೇವ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದು, 14 ಮಂದಿ ಅಖಾಡದಲ್ಲಿದ್ದಾರೆ.ಮೇಲುಕೋಟೆ ಕ್ಷೇತ್ರದಲ್ಲಿ ಡಿ.ಕೆ.ರವಿಕುಮಾರ್, ಎಸ್.ಎ.ಪುಟ್ಟರಾಜು ನಾಮಪತ್ರ ಹಿಂದಕ್ಕೆ ಪಡೆದಿದ್ದು, 12 ಮಂದಿ ಕಣದಲ್ಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಎಸ್.ಎಚ್.ಸಾಯಿಕುಮಾರ್, ಕೆ.ಗೋವಿಂದರಾಜು, ಸಿ.ಟಿ.ಹೇಮೇಶ್, ಟಿ.ಮಹದೇವಸ್ವಾಮಿ, ಎಚ್.ಎಂ.ಈರೇಗೌಡ, ಕೆ.ವಿ.ಕುಮಾರ್, ಎಂ.ಚಂದ್ರಶೇಖರ ಸೇರಿದಂತೆ ಒಟ್ಟು 7 ಮಂದಿ ನಾಮಪತ್ರ ಹಿಂಪಡೆದಿದ್ದು, 12 ಮಂದಿ ಅಖಾಡದಲ್ಲಿದ್ದಾರೆ.ನಾಗಮಂಗಲದಲ್ಲಿ ಎನ್.ಶಿವಲಿಂಗಯ್ಯ, ಕೃಷ್ಣೇಗೌಡ, ಬಿ.ಎಂ.ರಮೇಶ್ (ಪಕ್ಷೇತರರು) ನಾಮಪತ್ರ ಹಿಂದಕ್ಕೆ ಪಡೆದಿದ್ದು, 12 ಮಂದಿ ಕಣದಲ್ಲಿದ್ದಾರೆ.ಕೃಷ್ಣರಾಜಪೇಟೆಯಲ್ಲಿ ಕೆ.ಜೆ.ವಿಜಯ್‌ಕುಮಾರ್ (ಪಕ್ಷೇತರ) ನಾಮಪತ್ರ ಹಿಂಪಡೆದಿದ್ದು, 8 ಮಂದಿ ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry