ಶನಿವಾರ, ಜನವರಿ 25, 2020
27 °C

ಅಂತಿಮ ಘಟ್ಟಕ್ಕೆ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡಗಳು 25ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕ  ಬಾಲಕಿಯರ ಕೊಕ್ಕೊ ಟೂರ್ನಿಯಲ್ಲಿ ಶನಿವಾರ ಫೈನಲ್‌ ಪ್ರವೇಶಿಸಿದವು.ನಗರದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ಬಾಲಕಿಯರ ತಂಡ ಸೆಮಿ ಫೈನಲ್‌ನಲ್ಲಿ ಹರಿಯಾಣ ತಂಡವನ್ನು 9– 6 ಅಂಕಗಳ ಅಂತರದಿಂದ ಸೋಲಿಸಿತು.  ಕರ್ನಾಟಕ ಬಾಲಕರ ತಂಡ ಕೊಲ್ಲಾಪುರ ತಂಡವನ್ನು 20– 10 ಅಂಕಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿತು.ಕರ್ನಾಟಕದ ಪರವಾಗಿ ಪಲ್ಲವಿ ಮೊದಲನೆ ಸರದಿಯಲ್ಲಿ 3.30 ನಿಮಿಷ ಮತ್ತು ದ್ವಿತೀಯ ಸರದಿಯಲ್ಲಿ 1.30 ನಿಮಿಷ ಆಟವಾಡಿದರಲ್ಲದೆ, ನಂತರ 3 ಔಟ್‌ಗಳನ್ನು ಗಳಿಸಿ ಗಮನ ಸೆಳೆದರು. ಭಾನುವಾರ ನಡೆಯ ಲಿರುವ ಅಂತಿಮ ಹಣಾಹಣಿ ಯಲ್ಲಿ ಕರ್ನಾಟಕ ಬಾಲಕಿಯರ ತಂಡ ಮಹಾರಾಷ್ಟ್ರವನ್ನು ಎದುರಿಸಲಿದೆ.ಕರ್ನಾಟಕ ಬಾಲಕರ ತಂಡದ ಕಿರಣ್‌ 2.20 ನಿಮಿಷ ಆಟವಾಡಿದರು. ಎಂ.ಶಶಾಂಕ್‌ 7 ಔಟ್‌ ಪಡೆಯುವ ಮೂಲಕ ಉತ್ತಮ ಆಟ ಪ್ರದರ್ಶಿಸಿದರು. ಫೈನಲ್‌ನಲ್ಲಿ ಕರ್ನಾಟಕ ಬಾಲಕರ ತಂಡ ಮಹಾ ರಾಷ್ಟ್ರವನ್ನು ಎದುರಿಸಲಿದೆ.ಫಲಿತಾಂಶ:

ಪುರುಷರ ವಿಭಾಗ: ಕರ್ನಾಟಕ ತಂಡ ಹರಿಯಾಣ ವಿರುದ್ಧ 27–3, ಮಹಾರಾಷ್ಟ್ರ ತಂಡ ಜಾರ್ಖಂಡ್‌ ವಿರುದ್ಧ 15–14, ಕೊಲ್ಲಾಪುರ ತಂಡ ಹರಿಯಾಣ ವಿರುದ್ಧ 14–3, ಆಂಧ್ರಪ್ರದೇಶ ತಂಡ ಜಾರ್ಖಂಡ್‌ ವಿರುದ್ಧ 16–14 ಅಂಕಗಳ ಅಂತರದಿಂದ ಜಯ ಗಳಿಸಿವೆ.

ಮಹಿಳೆಯರ ವಿಭಾಗ: ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 17–7, ಮಧ್ಯಭಾರತ ತಂಡ ಜಾರ್ಖಂಡ್‌ ವಿರುದ್ಧ 9–7, ಕೇರಳ ತಂಡ ಹರಿಯಾಣ ವಿರುದ್ಧ 19–2, ಕರ್ನಾಟಕ– ಪಶ್ಚಿಮ ಬಂಗಾಳ ವಿರುದ್ಧ 12–5, ಮಹಾರಾಷ್ಟ್ರ ತಂಡ ದೆಹಲಿ ವಿರುದ್ಧ 10–5 ಅಂಕಗಳ ಅಂತರದಿಂದ ಜಯ ಗಳಿಸಿವೆ.

ಪ್ರತಿಕ್ರಿಯಿಸಿ (+)