ಅಂತಿಮ ಹಂತಕ್ಕೆ ರಾಣಾ ವಿಚಾರಣೆ

ಶುಕ್ರವಾರ, ಜೂಲೈ 19, 2019
23 °C

ಅಂತಿಮ ಹಂತಕ್ಕೆ ರಾಣಾ ವಿಚಾರಣೆ

Published:
Updated:

ಷಿಕಾಗೊ (ಪಿಟಿಐ): ಅಮೆರಿಕದ ಎಫ್‌ಬಿಐ ವಶದಲ್ಲಿರುವ ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವುರ್ ರಾಣಾ ನ್ಯಾಯಾಲಯದಲ್ಲಿ ನೀಡುತ್ತಿರುವ ಹೇಳಿಕೆಗಳು ಮುಕ್ತಾಯದ ಹಂತ ತಲುಪಿವೆ.ಇಲ್ಲಿನ ಫೆಡರಲ್ ನ್ಯಾಯಾಲಯದಲ್ಲಿ ಗುರುವಾರ ಸರ್ಕಾರಿ ವಕೀಲರು ಐವರು ಎಫ್‌ಬಿಐ ಏಜೆಂಟರು ಸೇರಿದಂತೆ ಏಳು ಹೊಸ ಸಾಕ್ಷಿಗಳ ವಿಚಾರಣೆ ನಡೆಸಿದರು.ಇಂಟರ್‌ನೆಟ್ ಬಳಕೆ, ಪ್ರಮುಖ ಶಂಕಿತ ಭಯೋತ್ಪಾದಕ ಹೆಡ್ಲಿ- ರಾಣಾ ನಡುವಿನ ಸಂಬಂಧದ ಬಗೆಗಿನ ಹಲವು ದಾಖಲೆಗಳನ್ನು ಈ ಸಂದರ್ಭದಲ್ಲಿ ನ್ಯಾಯಾಲಯದ ಪರಿಶೀಲನೆಗೆ ಒಪ್ಪಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry