ಅಂತೂ ಬಂತು ಕೂಡಲಸಂಗಮಕ್ಕೆ ನೀರು

ಮಂಗಳವಾರ, ಮೇ 21, 2019
24 °C

ಅಂತೂ ಬಂತು ಕೂಡಲಸಂಗಮಕ್ಕೆ ನೀರು

Published:
Updated:
ಅಂತೂ ಬಂತು ಕೂಡಲಸಂಗಮಕ್ಕೆ ನೀರು

ಕೂಡಲಸಂಗಮ :  ಐದು ತಿಂಗಳಿಂದ ಬರಿದಾಗಿದ್ದ ಕೃಷ್ಣೆಗೆ ಗುರುವಾರ ಬೆಳಿಗ್ಗೆ  ನೀರು ಬಂದಿದೆ. ಆಲಮಟ್ಟಿ ಜಲಾಶಯಕ್ಕೆ  ಅಧಿಕ ಪ್ರಮಾಣದಲ್ಲಿ ನೀರು ಹರಿದ ಬಂದ ಕಾರಣ ನೀರು ಹರಿಯ ಬಿಡಲಾಗಿದೆ. ಗುರುವಾರ ಕೂಡಲಸಂಗಮಕ್ಕೆ ಬಂದ ಭಕ್ತರು ಕೃಷ್ಣೆಯಲ್ಲಿ ಸ್ನಾನ ಮಾಡಿ ಸಂಭ್ರಮಿಸಿದರು.ಕೃಷ್ಣೆಗೆ ನೀರು ಬರುತ್ತಿರುವುದನ್ನು ನೋಡಿ ತಂಡ ತಂಡವಾಗಿ ಕೂಡಲಸಂಗಮಕ್ಕೆ ಭೇಟಿಕೊಟ್ಟು ಕೃಷ್ಣ ಮಲ್ಲಪ್ರಭೆಯಲ್ಲಿ ಸಂಭ್ರಮದಿಂದ ಸ್ನಾನ ಮಾಡಿ ಸಂಗಮನಾಥ, ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪ ದರ್ಶನ ಪಡೆದರು.ನದಿಯ ದಡದ ತುರಡಗಿ, ಕಟಗೂರ, ವಳಕಲದಿನ್ನಿ, ಬಿಸಲದಿನ್ನಿ, ಕೂಡಲಸಂಗಮ, ಕೆಂಗಲ್, ಕಜಗಲ್ಲ  ಗ್ರಾಮಸ್ಥರು ಸಂಗಮೇಶ್ವರ ದೇವಾಲಯದ ಬಳಿಯ ಕೃಷ್ಣೆಗೆ ಹಾಗೂ  ಸಂಗಮನಾಥನಿಗೆ ಪೂಜೆ ಸಲ್ಲಿಸಿದರು.ನದಿಗೆ ನೀರು ಬರುತ್ತಿದಂತೆಯೇ ಅಡವಿಹಾಳ- ಕೂಡಲಸಂಗಮ ಮಧ್ಯೆ ದೋಣಿ ಸಂಚಾರ ಆರಂಭಿಸಲಾಯಿತು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry