ಗುರುವಾರ , ಏಪ್ರಿಲ್ 22, 2021
25 °C

ಅಂತ್ಯವಲ್ಲ ಆರಂಭ ಆಗಸ್ಟ್ 15ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಿರ್ಮೂಲನೆಯ ಹಾದಿಯಲ್ಲಿನ ನನ್ನ ಹೋರಾಟ ಅಂತ್ಯವಾಗಿಲ್ಲ ಬದಲಿಗೆ ಇಂದಿನಿಂದ ಆರಂಭವಾಗಿದೆ ಎಂದು ಗುಡುಗಿ ರುವ ಗಾಂಧಿವಾದಿ ಅಣ್ಣಾ ಹಜಾರೆಯವರು, ಲೋಕ ಪಾಲ ಮಸೂದೆಯನ್ನು ಸಂಸತ್ತು ಅಂಗೀಕರಿಸಲು ಆಗಸ್ಟ್ 15ರ ಗಡುವು ವಿಧಿಸಿದ್ದಾರೆ.

ಲೋಕಪಾಲ ಮಸೂದೆಯ ಕರಡು ರಚನಾ ಸಮಿತಿಯಲ್ಲಿ ನಾಗರಿಕರ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರ ಅಧಿಕೃತ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ತಮ್ಮ ಆಮರಣ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ನಂತರ ಅವರು ಮಾತನಾಡಿ,  ಸರ್ಕಾರ ಆ.15ರೊಳಗೆ ಮಸೂದೆಯನ್ನು ಅಂಗೀಕರಿ ಸದೇ ಹೋದಲ್ಲಿ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಎರಡನೇ ಸ್ವಾತಂತ್ರ್ಯ ಚಳವಳಿಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು.

ಇದು ಜನತೆಯ ಗೆಲುವು. ಭ್ರಷ್ಟಾಚಾರವನ್ನು ಹೊಡೆದೋಡಿಸುವ ಸುದೀರ್ಘ ಹೋರಾಟದ ಹಾದಿಯಲ್ಲಿ ಇದು ಕೇವಲ ಆರಂಭವಷ್ಟೇ. ಮಸೂದೆ ಅಂಗೀಕಾರಗೊಂಡ ಮಾತ್ರಕ್ಕೆ ತಾವು ವಿರಮಿಸು ವುದಿಲ್ಲ. ವ್ಯವಸ್ಥೆ ಸುಧಾರಣೆಗೆ ಹೋರಾಟ ಅನವರತ ವಾಗಿರುತ್ತದೆ ಎಂದು ಅಣ್ಣಾ ಸ್ಪಷ್ಟಪಡಿಸಿದರು.

ನಿರಶನ ಸ್ಥಳವಾದ ಇಲ್ಲಿನ ಜಂತರ್ ಮಂತರ್‌ನಲ್ಲಿ ಬೆಳಿಗ್ಗೆ 10.45ಕ್ಕೆ ಸರಿಯಾಗಿ ಪುಟ್ಟ ಬಾಲಕಿಯೊಬ್ಬಳ ಕೈಯಿಂದ ಅಣ್ಣಾ ಒಂದು ಲೋಟ ನೀರು ಸ್ವೀಕರಿಸುವ ಮೂಲಕ 98 ಗಂಟೆಗಳ ಉಪವಾಸವನ್ನು ಕೊನೆ ಗೊಳಿಸಿದರು. ಇದಕ್ಕೂ ಮುನ್ನ ಅವರು, ತಮ್ಮೊಂದಿಗೆ ಉಪವಾಸಕ್ಕೆ ಸಾಥ್ ನೀಡಿದ್ದ ನೂರಾರು ಕಾರ್ಯಕರ್ತರಲ್ಲಿ ಕೆಲವು ಮಹಿಳೆಯರಿಗೆ ನೀರನ್ನು ನೀಡುವ ಮೂಲಕ ಸತ್ಯಾಗ್ರಹಕ್ಕೆ ಸಾಂಕೇತಿಕ ಮುಕ್ತಾಯ ಹಾಡಿದರು.

ದೇಶದಾದ್ಯಂತ ಪ್ರವಾಸ: ತಮ್ಮ ನಿರಶನಕ್ಕೆ ಅತ್ಯ ಪೂರ್ವ ಬೆಂಬಲ ನೀಡಿದ ಎಲ್ಲರಿಗೂ, ವಿಶೇಷವಾಗಿ ಯುವಜನತೆಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಬೇಡಿಕೆಗಳನ್ನು ಸರ್ಕಾರ ಸಂಪೂರ್ಣ ಒಪ್ಪಿದೆ. ಕರಡು ತಯಾರಿಕೆಯ ಹತ್ತು ಜನರ ಸಮಿತಿಯಲ್ಲಿ ನಾಗರಿಕರಿಗೆ ಸಮ ಸಹಭಾಗಿತ್ವ ನೀಡಿರುವುದರಿಂದ ಸತ್ಯಾಗ್ರಹವನ್ನು ಕೊನೆಗೊಳಿಸುತ್ತಿದ್ದೇವೆ. ಆದರೆ ಭ್ರಷ್ಟಾಚಾರ ನಿರ್ಮೂಲನೆಗಾಗಿ ದೇಶದೆಲ್ಲೆಡೆ ವ್ಯಾಪಕ ಪ್ರವಾಸ ಮಾಡಿ ಜನಜಾಗೃತಿ ಕಾರ್ಯ ಮುಂದುವರಿಸುತ್ತೇನೆ. ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಲು ಯಾವುದೇ ಅಡೆತಡೆ ಉಂಟಾದಲ್ಲಿ ಹೆಗಲ ಮೇಲೆ ತ್ರಿವರ್ಣ ಧ್ವಜ ಹಾಕಿಕೊಂಡು ಲೋಕಸಭೆ ಪ್ರವೇಶಿಸುತ್ತೇನೆ ಎಂದೂ ಅವರು ಹೇಳಿದರು.

ಗೆಜೆಟ್ ಅಧಿಸೂಚನೆ: ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ಐತಿಹಾಸಿಕ ಲೋಕಪಾಲ ಮಸೂದೆ ಯನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿ ಪ್ರಧಾನಿ ಮನಮೋಹನ ಸಿಂಗ್ ಬೆಳಿಗ್ಗೆ ಪ್ರಕಟಿಸಿದರು. ಇದೇ ವೇಳೆ ಸರ್ಕಾರವು ಮಸೂದೆಯ ಕರಡು ರಚನೆಯಲ್ಲಿ ನಾಗರಿಕರ ಸಹಭಾಗಿತ್ವಕ್ಕೆ ಸಮಪಾಲು ನೀಡುವ ದಿಸೆಯಲ್ಲಿ ಅಧಿಕೃತ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಿತು.
ಏಪ್ರಿಲ್ 16ಕ್ಕೆ ಪ್ರಥಮ ಸಭೆನವದೆಹಲಿ (ಪಿಟಿಐ): ಮಸೂದೆಯ ಕರಡು ರಚನಾ ಸಮಿತಿಯು ಮುಂದಿನ ವಾರ ಸಭೆ ಸೇರಲಿದೆ ಎಂದು ಕೇಂದ್ರ ಕಾನೂನು ಸಚಿವ ಹಾಗೂ ಲೋಕಪಾಲ ಮಸೂದೆಯ ಕರಡು ರಚನಾ ಸಮಿತಿ ಸಂಚಾಲ ಕರೂ ಆದ ಎಂ.ವೀರಪ್ಪ ಮೊಯಿಲಿ ತಿಳಿಸಿದ್ದಾರೆ.ಮೊದಲ ಸಭೆ ಏಪ್ರಿಲ್ 16ರಂದು ನಡೆಯಲಿದೆ. ಸದಸ್ಯರ ಸಮಯಾವಕಾಶ ನೋಡಿಕೊಂಡು ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದು ಅವರು ಹೇಳಿದ್ದಾರೆ.

ದೇಶದೆಲ್ಲೆಡೆ ಸಂಭ್ರಮ: ಅಣ್ಣಾ ಅವರು ಉಪವಾಸ ಅಂತ್ಯಗೊಳಿಸುತ್ತಿದ್ದಂತೆಯೇ ದೇಶದ ವಿವಿಧೆಡೆ ಅವರ ಬೆಂಬಲಿಗರು ಮತ್ತು ಸಾರ್ವಜನಿಕರು ಭಾರಿ ಸಂಭ್ರಮ ಆಚರಿಸಿದರು. ಹಲವೆಡೆ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಸಚಿವರೇ ಭ್ರಷ್ಟರು!: ಕರಡು ರಚನಾ ಸಮಿತಿ ಯಲ್ಲಿರುವ ಐವರು ಸಚಿವರು ಒಂದಲ್ಲಾ ಒಂದು  ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರೇ ಆಗಿದ್ದಾರೆ ಎಂದು ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ ತಿರುಚಿನಾಪಳ್ಳಿಯಲ್ಲಿ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.