ಶುಕ್ರವಾರ, ಡಿಸೆಂಬರ್ 13, 2019
26 °C

ಅಂದದ ಮೊಗಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದದ ಮೊಗಕೆ

ಪ್ರಶಾಂತ ಮನಃಸ್ಥಿತಿ ಇದ್ದಲ್ಲಿ ಮುಖದ ಕಾಂತಿ ತಾನೇತಾನಾಗಿ ಹೆಚ್ಚುತ್ತದೆ. ಆದರೆ ಕೆಲವೊಮ್ಮೆ ಕೆಲಸದ ಒತ್ತಡ, ಬಿಡುವಿಲ್ಲದ ಕೆಲಸ ಇವುಗಳ ನಡುವೆ ಮುಖದ ಚರ್ಮಕ್ಕೂ ವಯಸ್ಸಾಗತೊಡಗುತ್ತದೆ. ಇದನ್ನು ತಪ್ಪಿಸಲು ನಮ್ಮ ಅಡುಗೆ ಮನೆಯಲ್ಲಿಯೇ ಸಾಕಷ್ಟು ಸೌಂದರ್ಯ ವರ್ಧಕಗಳಿವೆ. ಮಾಡಿಕೊಳ್ಳುವಷ್ಟು ಸಮಯ, ಸಂಯಮ ಎರಡೂ ಇರಬೇಕು ಅಷ್ಟೆ.ಹಾಲು–ಜೇನು ಲೇಪನ

ಒಂದು ಟೇಬಲ್ ಚಮಚ ಜೇನುತುಪ್ಪಕ್ಕೆ , ಅರ್ಧ ಚಮಚ ಕ್ರೀಮ್‌ ಹಾಗೂ ಒಂದು ಟೇಬಲ್‌ ಚಮಚ ಲಿಂಬೆರಸವನ್ನು ಸೇರಿಸಿ ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ  ಉಗುರು ಬೆಚ್ಚಗಿನ  ನೀರಿನಲ್ಲಿ ಮುಖ ತೊಳೆಯಬೇಕು. ಇದರಿಂದ ಮುಖದ ಕಲೆಗಳು ಕಡಿಮೆಯಾಗುವುದಲ್ಲದೇ ಮುಖದ ಕಾಂತಿ ಹೆಚ್ಚುತ್ತದೆ.ನಿಂಬೆಹಣ್ಣಿನಂಥ ಬಣ್ಣಕ್ಕೆ ನಿಂಬೆರಸ

ಸ್ವಲ್ಪ ಅರಶಿನ, 4 ಹನಿ ಲಿಂಬೆರಸಕ್ಕೆ ಸ್ವಲ್ಪ ರೋಸ್‌ ವಾಟರ್‌ ಮಿಶ್ರಣ ಮಾಡಿ ಮುಖ್ಕಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಬೇಕು. ಇದರಿಂದ ಮುಖದ ಹೊಳಪು ಹೆಚ್ಚುವುದಲ್ಲದೇ, ಎಣ್ಣೆ ಚರ್ಮದವರಿಗೆ ಈ ಲೇಪನ ಒಳಿತು ಸಹಕಾರಿ.ಸೌತೆ–ಚಂದನ

2 ಟೇಬಲ್‌ ಚಮಚ ಗಂಧದ ಪುಡಿಗೆ ಲಿಂಬೆರಸ, ಸೌತೆಕಾಯಿರಸ, ಟೊಮೆಟೋ ರಸ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತಣ್ಣನೆಯ ನೀರಿನಿಂದ ತೊಳೆಯಬೇಕು. ಇದು ಮುಖದಲ್ಲಿನ ಕಪ್ಪುಕಲೆಗಳನ್ನು ಹೋಗಲಾಡಿಸುತ್ತದೆ.ಕೇಸರಿ ದಳದಿಂದ ಸೌಂದರ್ಯ

ಕೇಸರಿದಳಗಳನ್ನು 2ಗಂಟೆ ಹಾಲಿನಲ್ಲಿ ನೆನೆಸಿಡಿ. ನಂತರ ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಬೆಚ್ಚನೆಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ ಇದರಿಂದ ನಿಮ್ಮ  ಮುಖದ ಅಂದ ಹೆಚ್ಚುವುದಲ್ಲದೇ,   ನಿಮ್ಮ ಮುಖವನ್ನು ಕಾಂತಿಯುತವಾಗಿರಿಸುತ್ತದೆ.ಅರಿಶಿನ ಮೊಸರು

ಅರಶಿನ ಹಾಗೂ ಮೊಸರಿನ ತಳ್ಳನೆಯ ಮಿಶ್ರಣ ತಯಾರಿಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಸ್ವಚ್ಚಗೊಳಿಸಬೇಕು. ಮೊಡವೆ, ಕಪ್ಪು ಕಲೆ ಮಾಯವಾಗುತ್ತದೆ.

ಪ್ರತಿಕ್ರಿಯಿಸಿ (+)