ಅಂದು ಕೂಚ್ ಬಿಹಾರಿ: ಇಂದು ರಣಜಿ ಪಂದ್ಯ

7

ಅಂದು ಕೂಚ್ ಬಿಹಾರಿ: ಇಂದು ರಣಜಿ ಪಂದ್ಯ

Published:
Updated:

ಮೈಸೂರು: ಗಂಗೋತ್ರಿ ಗ್ಲೇಡ್ಸ್ ಅಂಗಳದಲ್ಲಿ ಅಂದು 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದ ಹುಡುಗ, ಶನಿವಾರ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ!ಕಳೆದ ವರ್ಷ ಇಲ್ಲಿ ನಡೆದಿದ್ದ ಕೂಚ್ ಬಿಹಾರಿ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ತಂಡದ ಪರವಾಗಿ ಆಡಿದ್ದ ಮಂಡ್ಯದ ಹುಡುಗ ಎಚ್.ಎನ್. ಶರತ್ ಈಗ ಇದೇ ಮೈದಾನದಲ್ಲಿ ರಣಜಿ ಪಂದ್ಯ ಆಡಲಿದ್ದಾರೆ.

ಆರ್. ವಿನಯಕುಮಾರ್  ಮತ್ತು ಅಭಿಮನ್ಯು ಮಿಥುನ್ ಗಾಯಗೊಂಡ ಕಾರಣ, ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಕಳೆದ ಮೂರು ಪಂದ್ಯಗಳಿಂದ 14 ವಿಕೆಟ್ ಗಳಿಸಿರುವ ಶರತ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.`ನಾನು ಮೈಸೂರಿನಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ. 19 ವರ್ಷದೊಳಗಿನ ಟೂರ್ನಿಯಲ್ಲಿ ಕರ್ನಾಟಕವನ್ನು ಇದೇ ಮೈದಾನದಲ್ಲಿ ಪ್ರತಿನಿಧಿಸಿದ್ದೆೆ' ಎಂದು ಹೇಳಿದ ಶರತ್, `ಈ ಮೈದಾನದಲ್ಲಿ ಮೊದಲ ಬಾರಿ ರಣಜಿ ಪಂದ್ಯ ಆಡುತ್ತಿರುವುದು ಸಂತಸ ತಂದಿದೆ. ಹೊಸ ಪೆವಿಲಿಯನ್,  ನೆಟ್ಸ್ ಮತ್ತಿತರ ಸೌಲಭ್ಯಗಳು ಅಭಿವೃದ್ಧಿಯಾಗಿರುವುದು ಚೆನ್ನಾಗಿವೆ' ಎಂದರು.ಇದಕ್ಕೂ ಮುನ್ನ ಶರತ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ತರಬೇತುದಾರ ಜೆ. ಅರುಣಕುಮಾರ್, `ಈ ಋತುವಿನ ಶೋಧ ಶರತ್. ಬಹಳ ಪ್ರತಿಭಾವಂತ ಹಾಗೂ ಕಠಿಣ ಪರಿಶ್ರಮಪಡಬಲ್ಲ ಆಟಗಾರ. ಉತ್ತಮ ಭವಿಷ್ಯವಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry