ಸೋಮವಾರ, ಜೂನ್ 21, 2021
20 °C

ಅಂದು ರವಿವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದು ರವಿವಾರ

ಭಾನುವಾರ ಮುಂಜಾನೆ. ಕಬ್ಬನ್ ಉದ್ಯಾನಕ್ಕೆ ಜೀವಕಳೆ. ರಬ್ಬರ್ ಚಾಪೆಯನ್ನು ಸುರುಳಿ ಸುತ್ತಿಕೊಂಡು ನಿಂತ ತರುಣ- ತರುಣಿಯರು ಧ್ಯಾನ ಮಾಡಲು ತಾಣ ಹುಡುಕುತ್ತಿದ್ದರೆ, ಅನತಿ ದೂರದಲ್ಲೇ ಒಂದಿಷ್ಟು ಅಜ್ಜಂದಿರು ತಮ್ಮದು ಸಂಜೆ ವಯಸ್ಸು ಎಂಬುದನ್ನು ಮರೆತು ಬೆವರು ಬಸಿಯುತ್ತಿದ್ದರು.ವೃತ್ತಾಕಾರದಲ್ಲಿ ಕುಳಿತ ಯುವಪಡೆ ಪೆನ್ನು-ಪೇಪರ್ ಹಿಡಿದು ಅದ್ಯಾವುದೋ ಸಮಸ್ಯೆಯನ್ನು ತಲೆಗೆ ಹಚ್ಚಿಕೊಂಡಿತ್ತು. `ಯಾರು ಹೆಚ್ಚು ಎತ್ತರಕ್ಕೆ ಕಾಲೆತ್ತುತ್ತಾರೋ ನೋಡೋಣ~ ಎಂಬಂತೆ ಇನ್ನೊಂದು ಸಣ್ಣ ಗುಂಪು ಸಾಹಸದ ತಾಲೀಮಿನಲ್ಲಿ ತೊಡಗಿತ್ತು. ಕಂದಮ್ಮಗಳ ಸೈಕಲ್ ಅಭ್ಯಾಸಕ್ಕೆ ಸಾಕ್ಷಿಯಾಗುತ್ತಿತ್ತು ಅಮ್ಮನ ಬೆರಗುಗಣ್ಣು.ಪ್ರೇಮಿಗಳ ಮೆಲುಮಾತಿಗೆ ಎಳೆಬಿಸಿಲ ಹಿನ್ನೆಲೆ. ಸಾಲುಮರಗಳ ನಡುವೆ ತೂರಿಬರುವ ಎಳೆಬಿಸಿಲ ಕಿರಣಗಳಲ್ಲಿ ಇಡೀ ಉದ್ಯಾನದಲ್ಲಿ ಅಕ್ಷರಶಃ `ರವಿ~ ವಾರ. ಬೇಸಿಗೆಯ ಧಗೆಯಲ್ಲೂ ತಂಪು ಕೊಡುವ ಅಸಂಖ್ಯ ದೃಶ್ಯಗಳಿಗೆ ಪ್ರಕೃತಿಯೇ ಅಲ್ಲಿ ಕ್ಯಾನ್ವಾಸ್.

ಚಿತ್ರಗಳು: ಎಸ್.ಕೆ.ದಿನೇಶ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.