ಅಂದು ಸಣ್ಣ ವ್ಯಾಪಾರಿ; ಇಂದು ಭಾರಿ ಉದ್ಯಮಿ

7

ಅಂದು ಸಣ್ಣ ವ್ಯಾಪಾರಿ; ಇಂದು ಭಾರಿ ಉದ್ಯಮಿ

Published:
Updated:

ಮುಂಬೈ: ನಾಗಪುರದಲ್ಲಿ 90ರ ದಶಕದಲ್ಲಿ ಪೀಠೋಪಕರಣದ ಅಂಗಡಿ ಹೊಂದಿದ್ದ ನಿತಿನ್ ಜೈರಾಂ ಗಡ್ಕರಿ ಇಂದು ದೊಡ್ಡ ಉದ್ಯಮಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ.ವಿದರ್ಭದಲ್ಲಿ ಮದ್ಯ, ವಿದ್ಯುಚ್ಛಕ್ತಿ, ಸಕ್ಕರೆ, ತೈಲ, ಖನಿಜ ಮತ್ತು ಸೂಪರ್ ಬಜಾರ್‌ಗಳಂತಹ ವ್ಯವಹಾರಗಳನ್ನು ನಡೆಸುವ `ಪುರ್ತಿ ಸಮೂಹ~ ಗಡ್ಕರಿ ಅವರ ಬೃಹತ್ ಉದ್ಯಮ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ವೇದಿಕೆಯು ಗಡ್ಕರಿ ಅವರನ್ನು ನಾಗಪುರದಿಂದ ಮಹಾರಾಷ್ಟ್ರದ ವಿಧಾನ ಪರಿಷತ್‌ಗೆ ಕರೆತಂದಿತು. ರಾಜಕೀಯ ಪಥ ಕಲ್ಪಿಸಿತು.ಜನಮಾನಸದ ನಾಯಕರೇನೂ ಅಲ್ಲದ ಗಡ್ಕರಿ, ಬಿಜೆಪಿ- ಶಿವಸೇನಾ ಸಮ್ಮಿಶ್ರ ಸರ್ಕಾರದಲ್ಲಿ (1995) ಮೊದಲ ಬಾರಿಗೆ ಅಧಿಕಾರದ ಸವಿ ಉಂಡರು. ಅಲ್ಲಿಂದೀಚೆಗೆ ಅವರ ರಾಜಕೀಯದ ನಾಗಲೋಟ ಎಗ್ಗಿಲ್ಲದೆ ಸಾಗಿದೆ.  ಲೋಕೋಪಯೋಗಿ ಇಲಾಖೆ ಸಚಿವರಾದ ಅವರು, ಮೂಲ ಸೌಕರ್ಯಗಳನ್ನು ವೃದ್ಧಿಸುವ ಅನೇಕ ಯೋಜನೆಗಳಿಗೆ ಚಾಲನೆ ನೀಡಿದರು.ಇದರಲ್ಲಿ ಮುಂಬೈ- ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯೂ ಒಂದು. ಈ ಮಧ್ಯೆ ಅವರ `ಪುರ್ತಿ ಸಮೂಹ~ ಕೂಡ ಭರಪೂರವಾಗಿ ಬೆಳೆಯಿತು. ಜೊತೆಗೆ ಅನೇಕ ವಿವಾದಗಳು ಅವರ ಹೆಗಲಿಗೆ ಹತ್ತಿಕೊಂಡಿತು. ಗಡ್ಕರಿಗೆ ಆಪ್ತ ಸಹಾಯಕರಾಗಿದ್ದ ನಾಗಪುರದ ಪತ್ರಕರ್ತ ಪ್ರಕಾಶ್ ದೇಶಪಾಂಡೆ ಅವರ ಅನುಮಾನಾಸ್ಪದವಾಗಿ  ಸಾವು, ಗಡ್ಕರಿ ಅವರ ಮನೆಗೆಲಸ ಮಾಡಿಕೊಂಡಿದ್ದವರ ಏಳು ವರ್ಷದ ಮಗಳ ಶವವು ಗಡ್ಕರಿ ಕಾರಿನಲ್ಲಿ ದೊರಕಿತ್ತು. ಇತ್ತೀಚೆಗೆ ವೈಭವವಾಗಿ ನಡೆದ ಗಡ್ಕರಿ ಅವರ ಮಗನ ಮದುವೆ. ಇವೆಲ್ಲವು ಗಡ್ಕರಿ ಅವರ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry