ಅಂಧತ್ವ ನಿವಾರಣೆಯಲ್ಲಿ ರೋಟರಿ ಸೇವೆ ಅನನ್ಯ

7

ಅಂಧತ್ವ ನಿವಾರಣೆಯಲ್ಲಿ ರೋಟರಿ ಸೇವೆ ಅನನ್ಯ

Published:
Updated:

ಭಾಲ್ಕಿ: ಸಾವಿರಾರು ಬಡ ಜನರ ಉಚಿತ ಕಣ್ಣಿನ ತಪಾಸಣೆ ಮಾಡಿಸುವದರ ಜೊತೆಗೆ ಸುಮಾರು 500 ಜನರಿಗೆ ಉಚಿತ ಆಪರೇಷನ್ ಕೂಡ ರೋಟರಿಯಿಂದ ಮಾಡಿಸಿದ್ದು ಅತ್ಯಂತ ಮಾದರಿ ಸಮಾಜ ಸೇವೆಯಾಗಿದೆ ಎಂದು ಹಿರಿಯ ವಕೀಲ ರಾಜಶೇಖರ ಅಷ್ಟೂರೆ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಭಾನುವಾರ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್‌ನಿಂದ ಆಯೋಜಿಸಿದ್ದ  ಉಚಿತ ಮೋತಿ ಬಿಂದು ಶಸ್ತ್ರಕ್ರೀಯೆ ಮತ್ತು ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ನಗರ ಠಾಣೆಯ ಸಿಪಿಐ ಪ್ರಸಾದ ಗೋಖಲೆ ಅವರು ಮಾತನಾಡಿ, ಯುವಪಡೆ ಮತ್ತು ವಿಭಿನ್ನ ವೃತ್ತಿ ತಜ್ಞರಿಂದ ಕೂಡಿದ ರೋಟರಿ ತಂಡವು ಉತ್ತಮ ಕಾರ್ಯ ಮಾಡುತ್ತಿದೆ ಎಂದರು. ಮಹಾರಾಷ್ಟ್ರದಿಂದ ತಜ್ಞ ವೈದ್ಯರೂ ಸಹ ಇಲ್ಲಿಗೆ ಆಗಮಿಸಿ ಅಗತ್ಯ ಉಳ್ಳವರ ಉಚಿತ ಸೇವೆಯಲ್ಲಿ ತೊಡಗಿಕೊಂಡಿದ್ದು ಬಣ್ಣನೀಯ ಎಂದರು.ಇದೇ ಸಂದರ್ಭದಲ್ಲಿ 240 ರೋಗಿಗಳ ತಪಾಸಣೆ ನಡೆಸಲಾಯಿತು. 51 ಜನರಿಗೆ ಮೋತಿ ಬಿಂದು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ರೋಟರಿ ಅಧ್ಯಕ್ಷ ಉಮಾಕಾಂತ ವಾರದ್ ತಿಳಿಸಿದರು. ಕಾರ್ಯದರ್ಶಿ ನಿರಂಜನ ಅಷ್ಟೂರೆ, ಡಾ. ತಾನಾಜಿ ಮೋರೆ, ಲಾತೂರ್‌ನ ಡಾ. ದಯಾನಂದ ನಿಜವಂತೆ, ಡಾ. ಅನಿಲ ಸುಕಾಳೆ, ಡಾ. ವಸಂತ ಪವಾರ, ಜೈಕಿಶನ ಬಿಯಾಣಿ, ಡಾ. ಅಮಿತ್ ಅಷ್ಟೂರೆ, ಡಾ. ಸಂತೋಷ ಕಾಳೆ, ಪ್ರಸನ್ನ ದೇಶಪಾಂಡೆ, ಸಂಗಮೇಶ ಬಕ್ಕಾ, ಎಸ್.ಜಿ. ಮುದ್ದಾ, ಡಾ. ನಿತಿನ್ ಪಾಟೀಲ, ಯೋಗೇಶ ಅಷ್ಟೂರೆ, ಸಂಜು ಪಂಢರಗೆರೆ, ಮಾಣಿಕಪ್ರಭು ಕೋಟೆ, ಶಾಂತವೀರ ಸಿರಗಾಪುರೆ, ವೈಜಿನಾಥ ಕೋಟೆ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry