ಅಂಧರ ಕ್ರಿಕೆಟ್ ಟೂರ್ನಿ;ಇಂಡಿಯಾ ಗ್ರೀನ್ ತಂಡಕ್ಕೆ ಜಯ

7

ಅಂಧರ ಕ್ರಿಕೆಟ್ ಟೂರ್ನಿ;ಇಂಡಿಯಾ ಗ್ರೀನ್ ತಂಡಕ್ಕೆ ಜಯ

Published:
Updated:

ಹುಬ್ಬಳ್ಳಿ: ಇಂಡಿಯಾ ಯೆಲ್ಲೋ ಹಾಗೂ ಇಂಡಿಯಾ ಗ್ರೀನ್ ತಂಡಗಳು ಧಾರವಾಡದಲ್ಲಿ ಭಾನುವಾರ ಆರಂಭಗೊಂಡ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ, ಸಮರ್ಥನಂ ಹಾಗೂ ಲಯನ್ಸ್ ಕ್ಲಬ್ ಆಶ್ರಯದ    ಅಂಧರ ರಾಷ್ಟ್ರಮಟ್ಟದ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಜಯ ಸಾಧಿಸಿದವು.ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಡಿಯಾ ಎಲ್ಲೋ ತಂಡ, ಇಂಡಿಯಾ ಬ್ಲೂ ತಂಡವನ್ನು 35 ರನ್‌ಗಳಿಂದ ಮಣಿಸಿತು.ಪಂದ್ಯಶ್ರೇಷ್ಠ ಡಿ.ವೆಂಕಟೇಶ (66, 32 ಎಸೆತ, 13 ಬೌಂಡರಿ) ಹಾಗೂ ಗಣೇಶ ಭೂಸರ (52, 36 ಎಸೆತ, 4 ಬೌಂಡರಿ) ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 213 ರನ್ ಗಳಿಸಿದ ಯೆಲ್ಲೋ ತಂಡದವರು ಎದುರಾಳಿಗಳನ್ನು 178 ರನ್‌ಗಳಿಗೆ ಕೆಡವಿದರು.ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಡಿಯಾ ಗ್ರೀನ್ ತಂಡ, ಇಂಡಿಯಾ ರೆಡ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು.ಸಂಕ್ಷಿಪ್ತ ಸ್ಕೋರ್:ಇಂಡಿಯಾ ಎಲ್ಲೋ: 19.5 ಓವರ್‌ಗಳಲ್ಲಿ 213 (ಡಿ.ವೆಂಕಟೇಶ್ 66, ಗಣೇಶ ಭೂಸರ 52; ಹಿತೇಶ್‌ಭಾಯಿ ಪಟೇಲ್ 28ಕ್ಕೆ 2); ಇಂಡಿಯಾ ಬ್ಲೂ: 19.4 ಓವರ್‌ಗಳಲ್ಲಿ 178 (ಶೇಖರ್ ನಾಯಕ್ 69, ಹಿತೇಶ್‌ಭಾಯಿ ಪಟೇಲ್ 20; ಡಿ.ವೆಂಕಟೇಶ್ 25ಕ್ಕೆ 2, ಗಣೇಶ ಭೂಸರ 12ಕ್ಕೆ 2). ಇಂಡಿಯಾ ಎಲ್ಲೋಗೆ 35 ರನ್ ಜಯ.ಇಂಡಿಯಾ ರೆಡ್: 16.5 ಓವರ್‌ಗಳಲ್ಲಿ 144 (ಜೆ.ಪ್ರಕಾಶ 41, ಮನೀಶ್ 32; ಅಜಯ್ ರೆಡ್ಡಿ 30ಕ್ಕೆ 1, ರವಿ 19ಕ್ಕೆ 1); ಇಂಡಿಯಾ ಗ್ರೀನ್: 12.1 ಓವರ್‌ಗಳಲ್ಲಿ 1 ವಿಕೆಟ್‌ಗೆ 145 (ಕೇತನ್ ಪಟೇಲ್ 80, ದಿಲೀಪ್ ಮುಂಡೆ 41). ಇಂಡಿಯಾ ಗ್ರೀನ್‌ಗೆ 9 ವಿಕೆಟ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry