ಶನಿವಾರ, ಮೇ 15, 2021
25 °C

ಅಂಧರ ಕ್ರಿಕೆಟ್: ಫೈನಲ್‌ಗೆ ದಾವಣಗೆರೆ, ಹುಬ್ಬಳ್ಳಿ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಸ್ವಾಮಿ ವಿವೇಕಾನಂದ ಅಂಗವಿಕಲರ ಸೇವಾ ಸಮಿತಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂದ್ಯದಲ್ಲಿ ಶನಿವಾರ ದಾವಣಗೆರೆ ಮತ್ತು ಹುಬ್ಬಳ್ಳಿ ತಂಡಗಳು ಜಯ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿವೆ.ದಾವಣಗೆರೆ ತಂಡದ ಪ್ರಕಾಶ್ 50 ಬಾಲ್‌ಗೆ 7 ಸಿಕ್ಸರ್ ಸೇರಿ ಒಟ್ಟು 145 ರನ್ ಗಳಿಸಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು.ಬೆಳಗಾವಿಯ ಸ್ಫೂರ್ತಿ ಮತ್ತು ಹುಬ್ಬಳ್ಳಿಯ ಕನಸು ತಂಡಗಳ ನಡುವೆ ನಡೆದ ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿಯ ಕನಸು ತಂಡ ಜಯ ಗಳಿಸಿತು. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.ಸಂಕ್ಷಿಪ್ತ ಸ್ಕೋರು: ದಾವಣಗೆರೆ 12 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 165 (ಪ್ರಕಾಶ್ 145) ಮೈಸೂರು ಸೂಪರ್ ಕಿಂಗ್ಸ್ 6 ವಿಕೆಟ್‌ಗೆ 81.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.