ಅಂಧರ ಕ್ಷೇಮಾಭ್ಯುದಯ ಸಂಸ್ಥೆಗೆ ಧನ ಸಹಾಯ

7

ಅಂಧರ ಕ್ಷೇಮಾಭ್ಯುದಯ ಸಂಸ್ಥೆಗೆ ಧನ ಸಹಾಯ

Published:
Updated:

ವಿಜಯಪುರ : ಇಲ್ಲಿನ ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆಗೆ ಪುರಸಭೆ ನಿಧಿಯಿಂದ 25ಸಾವಿರ ರೂಪಾಯಿ ಧನ ಸಹಾಯ ನೀಡಲಾಗಿದ್ದು, ಈ ಚೆಕ್ ಅನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಣ್ಣ ಸಂಸ್ಥೆಗೆ ನೀಡಿದರು. ನಂತರ ಮಾತನಾಡಿದ ಅವರು, ಪುರಸಭೆಯಿಂದ ಅಂಗವಿಕಲ ಮಕ್ಕಳ ಅಭಿವೃದ್ಧಿಗಾಗಿ ತೆಗೆದಿರಿಸುವ ಹಣವನ್ನು ಸಂಸ್ಥೆಗೆ ನೀಡಲಾಗುತ್ತಿದೆ. ಸುಮಾರು 10ವರ್ಷಗಳಿಂದಲೂ 25 ಸಾವಿರ ರೂ. ದೇಣಿಗೆ ನೀಡಲಾಗುತ್ತಿದೆ. ಅಂಗವಿಕಲ ಮಕ್ಕಳ ಶಿಕ್ಷಣ ಮತ್ತು ವಸತಿ ದೃಷ್ಟಿಯಲ್ಲಿ ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.ಪುರಸಭೆ ಮಾಜಿ ಸದಸ್ಯ ಎನ್.ಸಂಪತ್‌ಕುಮಾರ್, ಮೆಹಬೂಬ್ ಪಾಷಾ, ಸದಾಖತ್, ಎಸ್‌ಜೆಆರ್‌ವೈ ಅಧಿಕಾರಿ ಶಿವಣ್ಣ, ಶಿವನಾಗೇಗೌಡ ಮತ್ತಿತರರು ಇದ್ದರು. ಪುರಸಭೆ ವ್ಯಾಪ್ತಿಯ ವಿವಿಧ ಸ್ತ್ರೀಶಕ್ತಿ ಗುಂಪುಗಳಿಗೆ ಎಸ್‌ಜೆಆರ್‌ವೈ ನಿರಂತರ ಉಳಿತಾಯ ಯೋಜನೆಯಡಿ ಆವರ್ತಕ ನಿಧಿ ಚೆಕ್ಕ ಅನ್ನು ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಣ್ಣ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry