ಅಂಧರ ಟಿ-20 ಕ್ರಿಕೆಟ್ ಟೂರ್ನಿ ನಾಳೆಯಿಂದ

7

ಅಂಧರ ಟಿ-20 ಕ್ರಿಕೆಟ್ ಟೂರ್ನಿ ನಾಳೆಯಿಂದ

Published:
Updated:

ಹುಬ್ಬಳ್ಳಿ: ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ, ಸಮರ್ಥನಂ ಅಂಗವಿಕಲರ ನೆರವಿನ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತವಾಗಿ ಹಮ್ಮಿಕೊಂಡಿರುವ ಅಂಧರ ರಾಷ್ಟ್ರಮಟ್ಟದ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಇದೇ 7, 8 ಮತ್ತು 9ರಂದು ಧಾರವಾಡದಲ್ಲಿ ನಡೆಯಲಿದೆ.ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂಧರ ಚೊಚ್ಚಲ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆಯ್ಕೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದ್ದು ದೇಶದ ನಾಲ್ಕು ವಲಯಗಳಿಂದ ಆಗಮಿಸಲಿರುವ ಇಂಡಿಯಾ ಬ್ಲೂ, ಇಂಡಿಯಾ ಗ್ರೀನ್, ಇಂಡಿಯಾ ರೆಡ್ ಹಾಗೂ ಇಂಡಿಯಾ ಯೆಲ್ಲೋ ತಂಡಗಳು ಪಾಲ್ಗೊಳ್ಳಲಿವೆ.`ಇದೇ ತಿಂಗಳ 12ರಿಂದ 14ರ ವರೆಗೆ ಕೇರಳದ ಕೊಚ್ಚಿಯಲ್ಲಿ ಮತ್ತೊಂದು ಸುತ್ತಿನ ಟೂರ್ನಿ ನಡೆಯಲಿದ್ದು ಎರಡೂ ಕಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಒಟ್ಟು 17 ಮಂದಿ ಆಟಗಾರರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗುವುದು~ ಎಂದು ಸಂಘಟಕ ಜಾನ್ ಡೇವಿಡ್ `ಪ್ರಜಾವಾಣಿ~ಗೆ ತಿಳಿಸಿದರು. `7ರಂದು ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ ಟೂರ್ನಿಗೆ ಚಾಲನೆ ನೀಡುವರು. 9ರಂದು ಸಂಜೆ ಫೈನಲ್ ನಡೆಯಲಿದೆ~ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry