ಅಂಧರ ಟಿ-20 ವಿಶ್ವಕಪ್ ಭಾರತಕ್ಕೆ ಮಣಿದ ಲಂಕಾ

7

ಅಂಧರ ಟಿ-20 ವಿಶ್ವಕಪ್ ಭಾರತಕ್ಕೆ ಮಣಿದ ಲಂಕಾ

Published:
Updated:

ಬೆಂಗಳೂರು: ಭಾರತ ತಂಡದ ಬ್ಯಾಟ್ಸ್ ಮನ್‌ಗಳಿಂದ ಸತತವಾಗಿ ರನ್ ಹೊಳೆ ಹರಿದು ಬರುತ್ತಿದೆ. ಈ ಪರಿಣಾಮವಾಗಿ ಆತಿಥೇಯರು ಅಂಧರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ಸಾಧಿಸಿದರು.ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದವರು168 ರನ್‌ಗಳ ಭರ್ಜರಿ ಗೆಲುವು ಪಡೆದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 300 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆದರೆ, ಈ ಮೊತ್ತವನ್ನು ಮುಟ್ಟಲು ಸಿಂಹಳೀಯರಿಗೆ ಸಾಧ್ಯವಾಗಲಿಲ್ಲ. ಪಂಕಜ್ ಭುಯೆ (4ಕ್ಕೆ2) ಹಾಗೂ ಅಜಯ್ ರೆಡ್ಡಿ (24ಕ್ಕೆ2) ಅವರ ಸಮರ್ಥ ಬೌಲಿಂಗ್ ಎದುರು ಲಂಕಾ ಬೆದರಿ ಹೋಯಿತು. ಈ ತಂಡ 20 ಓವರ್‌ಗಳಲ್ಲಿ 132 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.ಕನ್ನಡಿಗ ಪ್ರಕಾಶ್ ಜಯರಾಮಯ್ಯ ಕೇವಲ 54 ಎಸೆತಗಳಲ್ಲಿ 149 ರನ್ ಗಳಿಸಲು ಮೂಲಕ ಭಾರತ ಸವಾಲಿನ ಮೊತ್ತ ಗಳಿಸಲು ನೆರವಾದರು. ಬಿ-2 ವಿಭಾಗದ ಬ್ಯಾಟ್ಸ್‌ಮನ್ ಜಿ. ಭುಷಾರ 22 ಎಸೆತಗಳಲ್ಲಿ 53 ರನ್ ಗಳಿಸಿದರು. ಪ್ರಕಾಶ್ ಶ್ರೀಲಂಕಾ ವಿರುದ್ಧ ಗಳಿಸಿದ ಮೂರನೇ ಶತಕವಿದು.

ಇದೇ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೂರು ರನ್‌ಗಳಿಂದ ನೇಪಾಳ ತಂಡದ ವಿರುದ್ಧ ರೋಚಕ ಗೆಲುವು ಪಡೆಯಿತು.ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 300. (ಪ್ರಕಾಶ್ ಜಯರಾಮಯ್ಯ 149, ಜಿ. ಭುಷಾರ 53, ಅಜಯ್ ರೆಡ್ಡಿ 29;  ಗುಣವರ್ಧನೆ 46ಕ್ಕೆ2). ಶ್ರೀಲಂಕಾ 20 ಓವರ್‌ಗಳಲ್ಲಿ 132. (ಕರುಣಾ ತಿಲಕ 46; ಅಜಯ್ ರೆಡ್ಡಿ 24ಕ್ಕೆ2, ಪಂಕಜ್ ಭುಯೆ 4ಕ್ಕೆ2). ಫಲಿತಾಂಶ: ಭಾರತಕ್ಕೆ 168 ರನ್ ಜಯ. ಪಂದ್ಯ ಶ್ರೇಷ್ಠ: ಪ್ರಕಾಶ್ ಜಯರಾಮಯ್ಯ.ಭಾರತ- ಪಾಕ್ ಸೆಣಸು

ಭಾರತ ಹಾಗೂ ಪಾಕಿಸ್ತಾನ ತಂಡಗಳು ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಎಲ್ಲರ ಚಿತ್ತ ನೆಲಮಂಗಲದ ಬಳಿಯಿರುವ ಆದಿತ್ಯ ಗ್ಲೋಬಲ್ ಶಾಲೆಯ ಕ್ರೀಡಾಂಗಣದತ್ತ ನೆಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry