ಅಂಧರ ವಿಶ್ವಕಪ್: ಫೈನಲ್‌ಗೆ ಭಾರತ

7

ಅಂಧರ ವಿಶ್ವಕಪ್: ಫೈನಲ್‌ಗೆ ಭಾರತ

Published:
Updated:

ಬೆಂಗಳೂರು: ನಿರೀಕ್ಷೆ ನಿಜವಾಯಿತು. ಲೆಕ್ಕಾಚಾರದಂತೆಯೆ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ತಂಡದವರು ಚೊಚ್ಚಲ ಅಂಧರ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರು.ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 123 ರನ್ ಜಯ ಪಡೆಯಿತು.ಇಂದು ಫೈನಲ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ `ಚಾಂಪಿಯನ್' ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ.ಪಾಕ್ ತಂಡ ಇಂಗ್ಲೆಂಡ್ ವಿರುದ್ಧ ಒಂಬತ್ತು ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.

ಪಾಕ್ ಮತ್ತು ಭಾರತ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಪಾಕ್ ಜಯಭೇರಿ ಬಾರಿಸಿತ್ತು. ಲೀಗ್ ಹಂತದಲ್ಲಿ ಎದುರಾದ ಸೋಲಿಗೆ `ಮುಯ್ಯಿ' ತೀರಿಸುವ ತವಕ ಭಾರತ ತಂಡದ್ದು.ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 318. (ಪ್ರಕಾಶ್ ಜಯರಾಮಯ್ಯ 27, ಅಜಯ್ ಕುಮಾರ್ ರೆಡ್ಡಿ 134, ಕೇತನ್ ಪಟೇಲ್ 54, ಗಣೇಶ್ ಭುಸಾರ ಔಟಾಗದೆ 59. ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 195. (ದೇಶಪ್ರಿಯ ಔಟಾಗದೆ 111, ರವೀಂದ್ರ 20; ಅಜಯ್ ಕುಮಾರ್ ರೆಡ್ಡಿ 23ಕ್ಕೆ2. ಫಲಿತಾಂಶ: ಭಾರತಕ್ಕೆ 123 ರನ್‌ಗಳ ಗೆಲುವು. ಪಂದ್ಯ ಶ್ರೇಷ್ಠ: ಅಜಯ್ ಕುಮಾರ್ ರೆಡ್ಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry