ಅಂಧರ ಸೌಲಭ್ಯ ದುರ್ಬಳಕೆ

7

ಅಂಧರ ಸೌಲಭ್ಯ ದುರ್ಬಳಕೆ

Published:
Updated:

ರಾಜ್ಯ ಸಾರಿಗೆ ಸಂಸ್ಥೆ ಮತ್ತು ಬಿಬಿಎಂಪಿ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅಂಧರು, ಅಂಗವಿಕಲರು ಮತ್ತು ಸ್ವಾತಂತ್ರ ಯೋಧರಿಗೆ ಉಚಿತ ಪಾಸ್‌ಗಳನ್ನು ನೀಡಿರುವುದು ಸ್ತುತ್ಯರ್ಹ.

 

ಆದರೆ ಅನರ್ಹರು ಈ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ನಕಲಿ ವೈದ್ಯರಿಂದ ಅಂಧರೆಂದು ಸುಳ್ಳು ಪ್ರಮಾಣ ಪತ್ರ ಪಡೆದು ಅದನ್ನೇ ಬಳಸಿಕೊಂಡು ಬಸ್ ಪಾಸು ಪಡೆದು ಸರ್ಕಾರಕ್ಕೆ ನಷ್ಟ ಮಾಡುತ್ತಿದ್ದಾರೆ.ಬಹುತೇಕ ಅಂಗವಿಕಲರು ಹಾಗೂ ಅಂಧರು ಬಸ್ ಪಾಸ್‌ಗಳನ್ನು ಉಪಯೋಗಿಸುತ್ತಿಲ್ಲ. ನಕಲಿ ಬಸ್ ಪಾಸ್ ಬಳಕೆಯಿಂದಾಗಿ ಸಾಮಾನ್ಯ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.

 

ಬಸ್ ಪಾಸ್‌ಗಳನ್ನು ಬಳಸುತ್ತಿರುವ ವ್ಯಕ್ತಿಗಳು ಅರ್ಹರೇ ಎಂಬ ಬಗ್ಗೆ ಸರ್ಕಾರ ಆಗಾಗ ತನಿಖೆ ಮಾಡಿಸಿ ಅಂಥವರನ್ನು ಹಿಡಿದು ಶಿಕ್ಷಿಸಬೇಕು. ಇಂತಹ ಕ್ರಮಗಳಿಂದ ದುರ್ಬಳಕೆ ತಪ್ಪಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry