`ಅಂಪೈರ್ ಏಳು ಬಾರಿ ತಪ್ಪು ಮಾಡಿದ್ದು ನಿಜ'

ಸೋಮವಾರ, ಜೂಲೈ 22, 2019
27 °C

`ಅಂಪೈರ್ ಏಳು ಬಾರಿ ತಪ್ಪು ಮಾಡಿದ್ದು ನಿಜ'

Published:
Updated:

ದುಬೈ (ಪಿಟಿಐ): ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಅಂಪೈರ್‌ಗಳು ಏಳು ಸಲ ತಪ್ಪು ಎಸಗಿದ್ದು ನಿಜ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಒಪ್ಪಿಕೊಂಡಿದೆ.`ಪಂದ್ಯದ ವೇಳೆ ಏಳು ಸಲ ತಪ್ಪುಗಳನ್ನು ಎಸೆಗಿರುವುದು ಅಂಪೈರ್‌ಗಳ ತಂಡದ ಮೌಲ್ಯಮಾಪನದ ವೇಳೆ ತಿಳಿದು ಬಂದಿದೆ. ಅದರಲ್ಲಿ ಮೂರು ಸರಿಪಡಿಸಲಾಗದ ತೀರ್ಪುಗಳಿವೆ. ನಾಲ್ಕು ನಿರ್ಣಯಗಳನ್ನು ಅಂಪೈರ್ ತೀರ್ಪು ಪುನರ್‌ಪರಿಶೀಲನಾ ಪದ್ಧತಿ ಸೌಲಭ್ಯವನ್ನು (ಯುಡಿಆರ್‌ಎಸ್) ಉಪಯೋಗಿಸಿ ಸರಿಪಡಿಸಲಾಗಿದೆ' ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.ಅಲ್ಲದೇ `ಯುಡಿಆರ್‌ಎಸ್ ಉಪಯೋಗಿಸುವ ಮುನ್ನ ಶೇಕಡಾ 90.3 ರಷ್ಟು ಸರಿಯಾದ ನಿರ್ಣಯಗಳು ದೊರೆಯುತ್ತಿದ್ದವು. ಆದರೆ ಡಿಆರ್‌ಎಸ್ ಉಪಯೋಗಿಸಿದಾಗಿನಿಂದ ಅದು ಶೇಕಡಾ 95.8 ರಷ್ಟಕ್ಕೆ ಏರಿಕೆಯಾಗಿದೆ. ಒಟ್ಟಾರೆ 2012-13ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಡಿಆರ್‌ಎಸ್ ಉಪಯೋಗದಿಂದಾಗಿ ಸರಿಯಾದ ತೀರ್ಪುಗಳಲ್ಲಿ ಸರಾಸರಿ ಶೇಕಡಾ 5.5 ರಷ್ಟು ಏರಿಕೆ ಕಂಡು ಬಂದಿದೆ' ಎಂದೂ ಐಸಿಸಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry