ಶನಿವಾರ, ಜೂನ್ 19, 2021
26 °C
ಕುಟುಂಬದ ಮೂಲಗಳ ಮಾಹಿತಿ

ಅಂಬರೀಷ್‌ ಆರೋಗ್ಯ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಗೆ ದಾಖಲಿಸಿರುವ ವಸತಿ ಸಚಿವ ಎಂ.ಎಚ್‌.ಅಂಬರೀಷ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.‘ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯ ವೈದ್ಯ ಡಾ.ಸಿ.ಕೆ.ಆಂಗ್‌ ಅವರು ಅಂಬರೀಷ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗಾಗಲೇ ಅಂಬರೀಷ್‌ ಅವರಿಗೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಸಚಿವರ ಪತ್ನಿ ಸುಮಲತಾ ಅವರು ಕುಟುಂಬದ ಆಪ್ತರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.ಅಂಬರೀಷ್‌ ಅವರನ್ನು ಕರೆದೊಯ್ದ ‘ಏರ್‌ ಆಂಬುಲೆನ್ಸ್‌’ ಜೊತೆ ಸಿಂಗಪುರಕ್ಕೆ ತೆರಳಿದ್ದ ವಿಕ್ರಂ ಆಸ್ಪತ್ರೆಯ ವೈದ್ಯರಾದ ಡಾ.ಸತೀಶ್‌ ಮತ್ತು ಡಾ.ರಘುನಂದನ್‌ ಅಲ್ಲಿಂದ ವಾಪಸಾಗಲಿದ್ದಾರೆ.

ಸುಮಲತಾ ಹಾಗೂ ಮೈಸೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಅಂಬರೀಷ್‌ ಅವರ ಸಹೋದರಿಯ ಪುತ್ರ ಡಾ.ಎಂ.ಎ.ಶೇಖರ್‌ ಅವರು ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲೇ ಉಳಿದು­ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.