ಶುಕ್ರವಾರ, ಫೆಬ್ರವರಿ 26, 2021
27 °C
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹೇಳಿಕೆ

ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿ

ಬೆಂಗಳೂರು: ‘ಕೂಡಲಸಂಗಮದ ಮಾದರಿಯಲ್ಲೇ ಹಾವೇರಿ ಜಿಲ್ಲೆಯ ಚೌಡನಾಪುರದಲ್ಲಿರುವ ಅಂಬಿಗರ ಚೌಡಯ್ಯನ ಗದ್ದುಗೆಯನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ‘ನಿಜಶರಣ ಅಂಬಿಗರ ಚೌಡಯ್ಯ ಜಯಂತಿ’ ಉದ್ಘಾಟಿಸಿ ಅವರು ಮಾತನಾಡಿದರು.‘ಗದ್ದುಗೆಯ ಜಾಗದಲ್ಲಿ ಭೂಮಿಯ ಮಾಲೀಕತ್ವದ ಸಮಸ್ಯೆ ಇದೆ. ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶೀಘ್ರದಲ್ಲಿ ಈ ಸಮಸ್ಯೆಯನ್ನು  ಬಗೆಹರಿಸಲಾಗುವುದು’ ಎಂದರು.ಸಾಹಿತಿ ಪಿ.ವಿ. ನಾರಾಯಣ ಮಾತನಾಡಿ, ‘12ನೇ ಶತಮಾನದಲ್ಲಿ ನಡೆದುದು ಬಹಿಂದ (ಬಹುಸಂಖ್ಯಾತ ಹಿಂದುಳಿದವರ) ಚಳವಳಿ. ಜಾತಿ ವ್ಯವಸ್ಥೆ, ರಾಜರ ದಬ್ಬಾಳಿಕೆ ವಿರುದ್ಧ ಬಹುಸಂಖ್ಯಾತ ಹಿಂದುಳಿದವರು ಚಳವಳಿ ನಡೆಸಿದರು’ ಎಂದರು.‘ಶೋಷಣೆಯ ವಿರುದ್ಧ 30 ಮಹಿಳೆಯರೂ ಸೇರಿದಂತೆ 230 ವಚನಕಾರರು 20 ಸಾವಿರ ವಚನಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಿದರು. ಪ್ರಪಂಚದಲ್ಲಿ ಇಂತಹ ಕ್ರಾಂತಿ ಮತ್ತೆ ನಡೆದಿಲ್ಲ’ ಎಂದು ವಿಶ್ಲೇಷಿಸಿದರು.‘ಅಂಬಿಗರ ಚೌಡಯ್ಯ ಅವರ ವಚನಗಳು ಬೆಂಕಿಯ ಉಂಡೆಗಳು. ಅವರ ವಚನಗಳು ಈಗಲೂ ಪ್ರಸ್ತುತ’ ಎಂದರು.ಎರಡು ಗಂಟೆ ಕಾದ ಮಧ್ವರಾಜ್‌

ಎರಡು ಗಂಟೆ ತಡವಾಗಿ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ಆರಂಭವಾಗಬೇಕಿತ್ತು. ಪ್ರಮೋದ್‌ ಮಧ್ವ ರಾಜ್‌ ಅವರು 12 ಗಂಟೆಗೆ ಬಂದರು. ಮಧ್ಯಾಹ್ನ 1.15ರ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಒಬ್ಬೊಬ್ಬರೇ ಬಂದರು. ಸ್ವಾತಂತ್ರ್ಯ ಉದ್ಯಾನದಿಂದ ಹೊರಟ ಮೆರವಣಿಗೆ ರವೀಂದ್ರ ಕಲಾಕ್ಷೇತ್ರ ತಲುಪುವಾಗ 1.45 ಆಗಿತ್ತು.  ಪ್ರಮೋದ್‌ ಮಧ್ವರಾಜ್‌ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ‘ಗಂಗಾಮತಸ್ಥರು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ಆದರೆ, ಸಮಯ ಪಾಲನೆ ಬಗ್ಗೆ ಕಾಳಜಿ ವಹಿಸುವುದಿಲ್ಲ. ಮೊದಲು ಸಮಯ ಪಾಲನೆ ಮಾಡುವುದನ್ನು ಕಲಿಯಬೇಕು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.