ಮಂಗಳವಾರ, ನವೆಂಬರ್ 12, 2019
28 °C

ಅಂಬಿ ಸುಬ್ರಮಣಿಯನ್ ಕಛೇರಿ

Published:
Updated:

ಹಿರಿಯ ವಯಲಿನ್ ವಿದ್ವಾಂಸ ಡಾ.ಎಲ್. ಸುಬ್ರಮಣಿಯನ್ ಮತ್ತು ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರ ಪುತ್ರ ಅಂಬಿ ಸುಬ್ರಮಣಿಯನ್ ಅವರು ಇದೇ ಶುಕ್ರವಾರ ಮತ್ತು ಶನಿವಾರ (ಏ. 12, 13) ನಗರದಲ್ಲಿ ಕಛೇರಿ ನೀಡಲಿದ್ದಾರೆ.

`ಭೂಮಿಜ' ಚಾರಿಟೆಬಲ್ ಟ್ರಸ್ಟ್ ಆಯೋಜಿಸಿರುವ ಈ ಕಛೇರಿಗಳು ಅಂಬಿ ಅವರ ಸೋಲೊ ವಯಲಿನ್ ನುಡಿಸಾಣಿಕೆಯನ್ನು ಸವಿಯುವ ಅವಕಾಶವನ್ನು ನಗರದ ಸಂಗೀತಾಭಿಮಾನಿಗಳಿಗೆ ಒದಗಿಸಿಕೊಟ್ಟಿದೆ.ಶುಕ್ರವಾರದ ಕಛೇರಿ ವೈಟ್‌ಫೀಲ್ಡ್‌ನಲ್ಲಿರುವ ಜಾಗೃತಿ ಥಿಯೇಟರ್‌ನಲ್ಲಿ ರಾತ್ರಿ 8ಕ್ಕೆ ಆರಂಭವಾಗಲಿದೆ.

ಟಿಕೆಟ್‌ಗಾಗಿ ಸಂಪರ್ಕಿಸಿ bookmyshow.comಮತ್ತುindianstage.in. ಅಂಬಿ ಅವರ ಶನಿವಾರದ ಕಛೇರಿ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಾಡಾಗಿದೆ. ಸಮಯ ಸಂಜೆ 7ಕ್ಕೆ. ಡೋನರ್ ಪಾಸ್‌ಗಳು ಇದೇ ಸ್ಥಳದಲ್ಲಿ ಕಛೇರಿಯ ದಿನವೇ ಲಭ್ಯವಾಗುತ್ತವೆ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98862 99609 ಅಥವಾ info@bhoomija.org.ಈ ಎರಡೂ ಕಛೇರಿಗಳಿಗೆ ವಿ.ವಿ. ರಮಣಮೂರ್ತಿ ಮೃದಂಗ, ಟಿ. ರಾಧಾಕೃಷ್ಣನ್ ಘಟ ಹಾಗೂ ಜಿ. ಸತ್ಯಸಾಯಿ ಮೋರ್ಚಿಂಗ್‌ನಲ್ಲಿ ನೆರವು ನೀಡಲಿದ್ದಾರೆ.

ಪ್ರತಿಕ್ರಿಯಿಸಿ (+)