ಮಂಗಳವಾರ, ನವೆಂಬರ್ 19, 2019
28 °C

ಅಂಬೇಡ್ಕರ್ ಆದರ್ಶ ಅನುಕರಣೀಯ: ಪುಟ್ಟರಾಜು

Published:
Updated:

ಪಾಂಡವಪುರ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತಕ್ಕೆ ಒಂದು ಸಂವಿಧಾನವನ್ನು ನೀಡುವ ಮೂಲಕ ಶೂದ್ರ ಸಮುದಾಯಕ್ಕೆ ಒಂದು ಶಕ್ತಿ ನೀಡಿದರು ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.ಪಟ್ಟಣದ ರೋಟರಿ ಶಾಲೆಯ ಆವರಣದಲ್ಲಿ ದಲಿತ ಸಂಘಟನೆಗಳ ಸಮನ್ವಯ ವೇದಿಕೆ ಆಶ್ರಯದಲ್ಲಿ ಮಂಗಳವಾರ ನಡೆದ ಡಾ.ಅಂಬೇಡ್ಕರ್ ಅವರ 122ನೇ ಜಯಂತಿ ಹಾಗೂ ರಾಜಕೀಯ ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ರಾಷ್ಟ್ರ ಕಂಡ ಮಹಾನ್ ಪುರುಷ ಅಂಬೇಡ್ಕರ್ ಅವರ ಒಂದೆರಡು ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಸಮಾಜದಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ದಲಿತ ಮುಖಂಡ ಕಣಿವೆ ಯೋಗೀಶ್ ಮಾತನಾಡಿದರು.

ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಕೆ.ಬಿ.ರಾಮು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕರಾದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶೈಲಜಾ ಗೋವಿಂದರಾಜು, ಪಿ.ಎಸ್.ಶಾಮಣ್ಣ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ವೀರಶೈವರ ಮುಖಂಡ ಮಲ್ಲೇಶ್, ದಲಿತ ಮುಖಂಡರಾದ  ಅಲ್ಪಹಳ್ಳಿ ಗೋವಿಂದರಾಜು, ಸ್ವಾಮಿ ಹೊಸೂರು, ದೇವರಾಜು, ಎಂ.ವಿ.ಕೃಷ್ಣ, ಸಣಬ ಶಿವಣ್ಣ, ಎಂ.ಎನ್.ಭಾರತಿ, ಭಾನುಮತಿ, ಬಿ.ಚಂದ್ರು, ಚಿಕ್ಕಹಲಗಯ್ಯ, ಪಾಪಯ್ಯ, ಎಂ.ಎಸ್.ಜಗದೀಶ್ ಇತರರು ಇದ್ದರು.ಹಸ್ತಪ್ರತಿ ತರಬೇತಿ

ಮಂಡ್ಯ: ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಏ. 25 ರಿಂದ 27ರ ವರೆಗೆ ನಗರದ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಕರ್ನಾಟಕ ಸಂಘ ಮತ್ತು ಮಹಿಳಾ ಸರ್ಕಾರಿ ಪದವಿ ಕಾಲೇಜು ವತಿಯಿಂದ ಶಿಬಿರವನ್ನು ಏರ್ಪಡಿಸಲಾಗಿದ್ದು, ಜಾನಪದ ವಿದ್ವಾಂಸ ಡಾ. ಹ.ಕ.ರಾಜೇಗೌಡ ಅವರು ಉದ್ಘಾಟಿಸಲಿದ್ದಾರೆ. ಹಂಪಿ ವಿವಿಯ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರತಿಕ್ರಿಯಿಸಿ (+)