ಅಂಬೇಡ್ಕರ್ ಆದರ್ಶ ಪಾಲನೆಗೆ ಕರೆ

7

ಅಂಬೇಡ್ಕರ್ ಆದರ್ಶ ಪಾಲನೆಗೆ ಕರೆ

Published:
Updated:

ಕಾಳಗಿ: `ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ ತತ್ವ ಆದರ್ಶದ ಗುಣಗಳನ್ನು ಪ್ರತಿಯೊಬ್ಬ ನಾಗರಿಕ ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆ ಮಹಾ ಮಾನವತವಾದಿಯ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ' ಎಂದು ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ವೀರೇಶ ಕರಡಿಗುಡ್ಡ ಹೇಳಿದರು.ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಜರುಗಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, `ಅಂಬೇಡ್ಕರ್‌ರು ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ' ಎಂದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಶೀಲಾಬಾಯಿ ಜಾಧವ ಬಾಬಾ ಸಾಹೇಬರ ಮೂರ್ತಿಗೆ ಹೂಮಾಲೆ ಹಾಕಿದರು. ತಾಲ್ಲೂಕು ಪಂಚಾಯತಿ ಸದಸ್ಯ ಚಂದ್ರಕಾಂತ ಜಾಧವ ಧ್ವಜಾರೋಹಣ ಮಾಡಿದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿಲಾಸ ಕುಲಕರ್ಣಿ, ಪೊಲೀಸ್ ಸಹಾಯಕ ಇನ್ಸ್‌ಪೆಕ್ಟರ್ ಶಂಭುಲಿಂಗ ಮೇಲಕೇರಿ, ರವಿ ಮಂತಾ, ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕು ಅಧ್ಯಕ್ಷ ಕಾಶಿನಾಥ ಶೆಳ್ಳಗಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಭೀಮಸಿಂಗ್ ರಾಠೋಡ, ಗ್ರಾಮ ಪಂಚಾಯತಿ ಸದಸ್ಯರಾದ ಪಶು ವೈದ್ಯಾಧಿಕಾರಿ ಡಾ.ಅಣ್ಣರಾವ ಪಾಟೀಲ, ಗ್ರಾಮ ಲೇಖಪಾಲಕ ಉದಯಸಿಂಗ್ ಠಾಕೂರ, ಮಾಣಿಕರಾವ ಜಾಧವ, ಶಿವಕುಮಾರ ಚಿಂತಕೋಟಾ,                      ಸಂತೋಷ ನರನಾಳ, ಬಸವರಾಜ ರಾಜೆ,  ಅರವಿಂದ ಭದ್ರಶೆಟ್ಟಿ, ನಾಗೇಶಮೂರ್ತಿ, ದತ್ತು ಕಲಾಲ, ಹಣಮಂತ ಚೌಡಗುಂಡಿ, ಸೂರ್ಯಕಾಂತ ಮಂತಾ, ಹಣಮಂತ ಡೊಣ್ಣೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry