ಸೋಮವಾರ, ನವೆಂಬರ್ 18, 2019
23 °C

ಅಂಬೇಡ್ಕರ್ ಚಿತ್ರದ ತಟ್ಟೆ ಮಾರಾಟ: ಅಂಗಡಿಗೆ ಬೀಗ

Published:
Updated:

ಕೊಳ್ಳೇಗಾಲ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರದ ತಟ್ಟೆ ಮಾರಾಟ ಮಾಡುವ ಮೂಲಕ ಚುನಾವಣಾ ನೀತಿ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಶನಿವಾರ ತಾಲ್ಲೂಕು ದಂಡಾಧಿಕಾರಿ ಮಾಳಿಗಯ್ಯ ರಾಮಾ ಪುರ ಎಂ.ಕೆ. ಟ್ರೇಡರ್ಸ್‌ ಅಂಗಡಿಗೆ ಬೀಗ ಜಡಿದ ಘಟನೆ ನಡೆಯಿತು.ತಾಲ್ಲೂಕಿನ ರಾಮಾಪುರ ಮುಖ್ಯ ರಸ್ತೆಯಲ್ಲಿರುವ ಎಂ.ಕೆ. ಟ್ರೇಡರ್ಸ್‌ ಮಾಲೀಕ ಕುಮಾರ್ ಅಂಬೇಡ್ಕರ್ ಭಾವಚಿತ್ರದ ತಟ್ಟೆ ವಿತರಣೆ ಮಾಡಿರುವ ಬಗ್ಗೆ ಕ್ರಮಕೈಗೊಳ್ಳದಿರುವುದರ ಬಗ್ಗೆ ಛಲವಾದಿ ಸಂಘ ತಾಲ್ಲೂಕು ಆಡಳಿತಕ್ಕೆ ದೂರು ನೀಡಿದ್ದರು.ತಹಶೀಲ್ದಾರ್ ಮಾಳಿಗಯ್ಯ ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಜಯರಾಂ ಅಂಗಡಿ ಮೇಲೆ ಶನಿವಾರ ದಾಳಿ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಟನೆಯಡಿ ಅಂಗಡಿಗೆ ಬೀಗ ಜಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಛಲವಾದಿ ಮಹಾ ಸಬಾ ಅಧ್ಯಕ್ಷ ಅಣಗಳ್ಳಿ ಬಸವರಾಜು, ಜಿಲ್ಲಾ ಸಮತಾ ಸಮಾಜದ ಅಧ್ಯಕ್ಷ ವಂಗಪ್ಪ, ರಮೇಶ್, ಮಂಟೇಸ್ವಾಮಿ ಸೋಮಣ್ಣ, ಪುಟ್ಟಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)