ಮಂಗಳವಾರ, ನವೆಂಬರ್ 19, 2019
27 °C

ಅಂಬೇಡ್ಕರ್ ಛಲ ಸರ್ವರಿಗೂ ಆದರ್ಶ: ತರನಳ್ಳಿ

Published:
Updated:

ಹುಮನಾಬಾದ್: ಡಾ.ಬಿ.ಆರ್.ಅಂಬೇಡ್ಕರ ಅವರಲ್ಲಿದ್ದ ಛಲ ಎಲ್ಲರಿಗೂ ಆದರ್ಶಪ್ರಾಯ ಎಂದು ಲಕ್ಷ್ಮೀವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ಕಾರ್ಯದರ್ಶಿ ಶಿವಶಂಕರ ತರನಳ್ಳಿ ತಿಳಿಸಿದರು. ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್‌ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು.ಅತ್ಯಂತ ಕಡುಬಡತನದಲ್ಲಿ ಬೆಳೆದ ಅಂಬೇಡ್ಕರ ಅವರು ಬಾಲ್ಯದಲ್ಲಿ ಅನುಭವಿಸಿದ ಹಲವಾರು ಘಟನೆಗಳನ್ನು ವಿವರಿಸಿದರು. ವಿದ್ಯಾರ್ಥಿ ಜೀವನದಲ್ಲಿ ಬೀದಿ ದೀಪದ ಕೆಳಗೆ ಓದಿದ್ದನ್ನು ಸ್ಮರಿಸಿದರು. ಹಲವು ಸಂಕಷ್ಟಗಳ ಮಧ್ಯದಲ್ಲೂ ಅಪಾರ ಪಾಂಡಿತ್ಯ ಗಳಿಸಿ, ಉನ್ನತ ಶಿಕ್ಷಣ ವಿದೇಶದಲ್ಲಿ ಪೂರೈಸಿದರು. ಸಂಸ್ಕೃತ ಕಲಿಯಬೇಕೆಂಬ ಅವರ ಆಸೆ ಈಡೇರದಿದ್ದಾಗ ನಿರಾಶರಾಗದೇ ಸತತ ಪ್ರಯತ್ನಿಸಿ, ಸಂಸ್ಕೃತದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು.ತಾನು ಅನುಭವಿಸಿದ ನೋವು ಭವಿಷ್ಯದಲ್ಲಿ ಇನ್ಯಾರೂ ಅನುಭವಿಸಬಾರದು ಎಂಬ ಉದ್ದೇಶದಿಂದ ಜಾತಿಯತೆ ತೊಲಗಿಸಲು ಶಕ್ತಿಮೀರಿ ಪ್ರತ್ನಿಸಿದರು ಎಂದು ಹೇಳಿದರು.ಬಸವರಾಜ ಕೊಂಡಗೂಳಿ ಪ್ರಾರ್ಥಿಸಿದರು. ವೀರಶೆಟ್ಟಿ ಜೀರ್ಗಿ ನಿರೂಪಿಸಿದರು. ವೆಂಕಟೇಶ ಜಾಧವ್ ವಂದಿಸಿದರು.ಅಶೋಕಕುಮಾರ ವಡ್ಡನಕೇರಾ, ರುದ್ರಶೆಟ್ಟಿ ಸಂಗೊಳ್ಳಿ, ಕಿಶೋರ ಕಲಕರ್ಣಿ, ದಿಗಂಬರ ಖಮಿತ್ಕರ್, ಕಲ್ಪನಾ ಕಠಾರಮಠ್, ಪ್ರಭಾರ ಮುಖ್ಯಗುರು ನಿಜಲಿಂಗಪ್ಪ ಜಕ್ಕಾ ಇದ್ದರು.

ಪ್ರತಿಕ್ರಿಯಿಸಿ (+)