ಮಂಗಳವಾರ, ಏಪ್ರಿಲ್ 13, 2021
24 °C

ಅಂಬೇಡ್ಕರ್ ಜಯಂತಿ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್ ಹಬ್ಬ

 * ಬಾಬಾ ಸಾಹೇಬ್ ಅಂಬೇಡ್ಕರ್ ಶತಮಾನೋತ್ಸವ ಟ್ರಸ್ಟ್, ಸ್ಪೂರ್ತಿಧಾಮ:  ಗುರುವಾರ ಅಂಬೇಡ್ಕರ್ ಹಬ್ಬ. ಬೆಳಿಗ್ಗೆ 10ಕ್ಕೆ ಬಿಕ್ಕು ಆನಂದ ಬಂತೆ ಉಪನ್ಯಾಸ ಮತ್ತು ಸಂವಾದ. ಸಂಜೆ 4ಕ್ಕೆ ಅಂಬೇಡ್ಕರ್ ಸ್ಮಾರಕ ಉಪನ್ಯಾಸದಲ್ಲಿ ಡಾ. ಆನಂದ ತೇಲ್ತುಂಬ್ಡೆ (ಅಂಬೇಡ್ಕರ್ ಅನುಯಾಯಿಗಳ ಸಂದಿಗ್ದತೆ- ಮುಂದಿನ ಸವಾಲುಗಳು). ಅಧ್ಯಕ್ಷತೆ: ಎಸ್.ಆರ್. ದಾರಾಪುರಿ. ಸಂಜೆ 6.30ಕ್ಕೆ ಡಾ.ಯು.ಆರ್. ಅನಂತಮೂರ್ತಿ ಅವರಿಂದ ‘ಬೋಧಿವೃಕ್ಷ ಮತ್ತು ಬೋಧಿವರ್ಧನ’ ಪ್ರಶಸ್ತಿ ಪ್ರದಾನ. ಅನುಗ್ರಹ ಭಾಷಣ: ಆನಂದ ಬಂತೆ. ಅತಿಥಿ: ವಿ. ಶ್ರೀನಿವಾಸ ಪ್ರಸಾದ್. ಅಧ್ಯಕ್ಷತೆ: ಎಸ್.ಮರಿಸ್ವಾಮಿ. ನಂತರ ಮೈಸೂರಿನ ‘ಸಂಗೀತ ಜಂಗಮರು’ ತಂಡದಿಂದ ಸಂಗೀತ. ಸ್ಥಳ: ಅಂಜನಾ ನಗರ, ಮಾಗಡಿ ಮುಖ್ಯ ರಸ್ತೆ.  *ಬೆಂಗಳೂರು ವಿಶ್ವವಿದ್ಯಾಲಯ:
ಗುರುವಾರ ಭಾರತರತ್ನ, ಸಂಧಾನಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 120ನೇ ಜಯಂತಿ. ಉದ್ಘಾಟನೆ: ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಅತಿಥಿಗಳು: ಎ.ನಾರಾಯಣ ಸ್ವಾಮಿ, ಪ್ರೊ. ಸಿದ್ದಲಿಂಗಯ್ಯ, ಸಿ.ಕೆ. ಮಹೇಶ್. ಅಧ್ಯಕ್ಷತೆ: ಪ್ರೊ.ಎನ್. ಪ್ರಭುದೇವ್. ನಂತರ ಆನಂದ್ ಮತ್ತು ತಂಡದಿಂದ ಅಂಬೇಡ್ಕರ್ ಗೀತೆಗಳು. ಸ್ಥಳ: ಜ್ಞಾನಭಾರತಿ. ಬೆಳಿಗ್ಗೆ 8.30.  * ಇಂದಿರಾನಗರ ದಲಿತ ಸೇವಾ ಸಂಘ: ಗುರುವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ. ವಿದ್ಯಾರ್ಥಿಗಳಿಂದ ಮೇಣದ ಬತ್ತಿ ಅಂಟಿಸಿ ನಮನ. ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ’ಮೈನಾರಿಟೀಸ್ ನ್ಯೂಸ್’ ಸಂಪಾದಕ ಮುಳ್ಳಹಳ್ಳಿ ಸೂರಿ ಮತ್ತು ರಾಷ್ಟ್ರೀಯ ಈಜುಪಟು ಬಿ.ಆರ್. ಗೋಪಾಲರಾವ್ ಅವರಿಂದ ಚಿಂತನ-ಮಂಥನ. ಅಧ್ಯಕ್ಷತೆ: ಸಂಘದ ಅಧ್ಯಕ್ಷ ಎಂ.ಡಿ. ರಾಜು. ಸ್ಥಳ: ಇಂದಿರಾನಗರ 15ನೇ ಮುಖ್ಯ ರಸ್ತೆ, ಬಾಬಾ ಸಾಹೇಬ್ ಕಾಲೋನಿ, ಹೆಚ್‌ಎಎಲ್ 2ನೇ ಹಂತ. ಬೆಳಿಗ್ಗೆ 10.  * ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸದ್ಭಾವನಾ ಪ್ರತಿಷ್ಠಾನ: ಗುರುವಾರ ಡಾ.ಸರ್.ಎಂ. ವಿಶ್ವೇಶ್ವರಯ್ಯ ನೆನಪಿನಲ್ಲಿ ರಕ್ತದಾನ ಶಿಬಿರ, ಡಾ.ಅಂಬೇಡ್ಕರ್ ಜಯಂತಿ. ಬಿ. ಗಣಪತಿ ಅವರಿಂದ ಡಾ. ರಾಜ್ ಕುರಿತ ‘ಮುಳುಗದ ಸೂರ್ಯ ಡಾ. ರಾಜ್‌ಕುಮಾರ್’ ಕೃತಿ ಲೋಕಾರ್ಪಣೆ. ಉದ್ಘಾಟನೆ: ಡಾ.ಆರ್.ಕೆ.ನಲ್ಲೂರು ಪ್ರಸಾದ್. ಅತಿಥಿಗಳು: ವಿ.ಎನ್.ವೀರನಾಗಪ್ಪ. ಲಕ್ಷ್ಮಿಶ್ರೀನಿವಾಸ್, ಹೀ.ಚೀ.ಶಾಂತವೀರಯ್ಯ. ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಮಧ್ಯಾಹ್ನ 12.30. * ಸನ್‌ಶೈನ್ ಚಾರಿಟೆಬಲ್ ಟ್ರಸ್ಟ್:  ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಜನ್ಮಶತಮಾನೋತ್ಸವ. ಡಾ. ಜಿ. ಪರಮೇಶ್ವರ ಅವರಿಂದ ಡಾ. ಕೆ.ಸುಂದರಮೂರ್ತಿ ಬರೆದಿರುವ ‘ಎಸ್‌ಸಿ, ಎಸ್‌ಟಿ ಆರ್ಗನೈಸ್ಡ್ ಅಂಡ್ ಅನ್ ಆರ್ಗನೈಸ್ಡ್ ಲೇಬರ್ ಇನ್ ಇಂಡಿಯಾ’ ಕೃತಿ ಲೋಕಾರ್ಪಣೆ. ಅತಿಥಿ: ಡಾ.ಪಿ.ಸೆಲ್ವಿದಾಸ್, ಡಾ.ಎಚ್.ಶ್ರೀನಿವಾಸಯ್ಯ.ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತ ಬಳಿ. ಸಂಜೆ 4. * ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ): ಗುರುವಾರ ‘ನೈಜ ಪ್ರಜಾಪ್ರಭುತ್ವ ಪರಿವರ್ತನೆಗಾಗಿ ಬಹುಜನರ ಜನಜಾಗೃತಿ ಸಂಕಲ್ಪ ಅಭಿಯಾನ’ ಮತ್ತು ವಿಚಾರ ಸಂಕಿರಣ.  ಭಾಗವಹಿಸುವವರು: ರುದ್ರಪ್ಪ ಹನಗವಾಡಿ (ದಲಿತ ವರ್ಗ ಹಾಗೂ ರಾಜ್ಯ ಬಜೆಟ್ ನೀತಿ). ಮಾರುತಿ ಮಾನ್ಪಡೆ (ಆಹಾರ ಭದ್ರತೆ ಹಾಗೂ ಕೃಷಿ ಬಿಕ್ಕಟ್ಟುಗಳು), ಡಾ.ಗಂಗಾಧರ (ತಳ ಸಮುದಾಯಗಳ ಧಾರ್ಮಿಕ ಪರ್ಯಾಯ), ಡಾ.ನಿರಂಜನಾರಾಧ್ಯ (ಕೇಂದ್ರ ಶಿಕ್ಷಣ ನೀತಿ ಹಾಗೂ ಸಾಮಾಜಿಕ ತಾರತಮ್ಯ), ಮನೋಹರ್ ಚಂದ್ರಪ್ರಸಾದ್ (ಧಾರ್ಮಿಕ ಅಲ್ಪ ಸಂಖ್ಯಾತರು ಹಾಗೂ ಪ್ರಭುತ್ವ  ಧೋರಣೆ). ಸ್ಥಳ: ಅಂಬೇಡ್ಕರ್ ಭವನ, ಮಿಲ್ಲರ್ ರಸ್ತೆ. ಬೆಳಿಗ್ಗೆ 11.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.