ಅಂಬೇಡ್ಕರ್ ಜಾಗತಿಕ ನಾಯಕ: ಹುಡಗಿ

7

ಅಂಬೇಡ್ಕರ್ ಜಾಗತಿಕ ನಾಯಕ: ಹುಡಗಿ

Published:
Updated:

ಗುಲ್ಬರ್ಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಈ ದೇಶ ಅಥವಾ ಕೇವಲ ದಲಿತ ಸಮುದಾಯದ ನಾಯಕರಲ್ಲ. ರೋಮ್ ದೇಶದ ಸ್ಪಾಟಕಸ್, ಅಮೆರಿಕಾದ ಅಬ್ರಾಂಲಿಂಕನ್, ಗ್ರೀಕ್ ದೇಶದ ಸಾಕ್ರಟಿಸ್ ಮುಂತಾದವರ ಸಾಲಿನಲ್ಲಿ ನಿಲ್ಲುವ ಮಹಾನ್ ನಾಯಕರು ಎಂದು ಹಿರಿಯ ಚಿಂತಕ ಪ್ರೊ. ಆರ್.ಕೆ. ಹುಡಗಿ ಅಭಿಪ್ರಾಯಪಟ್ಟರು.ಗುಲ್ಬರ್ಗ ಜಿಲ್ಲಾ ಸರ್ಕಾರಿ, ಅರೆಸರ್ಕಾರಿ ಪರಿಶಿಷ್ಟ ಜಾತಿ/ಪಂಗಡದ ನೌಕರರ ಸಂಘ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಜಗತ್ ವೃತ್ತ ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾ ಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.ಜಿನ್ನಾ ಮುಸ್ಲಿಂರ ಬಿಡುಗಡೆ ದಿನ ಆಚರಣೆಗೆ ಕರೆ ನೀಡಿದ ದಿನ, ಆಂಗ್ಲರ ಕಾಲದಲ್ಲಿ ಸಂವಿಧಾನವನ್ನು ಎರಡು ಬಾಗವಾಗಿ ಮಾಡುವುದು ನ್ಯಾಯ ಸಮ್ಮತ ಎಂದು ನಿರ್ಧರಿಸಿದ ದಿನ, ಬಾಬ್ರಿ ಮಸೀದಿ ಧ್ವಂಸ ಮಾಡಿದ ದಿನ ಸೇರಿದಂತೆ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವೂ ಡಿ.6 ಇರುವುದರಿಂದ ಕೋಮುವಾದಿಗಳಿಗೆ ಇದು ರೊಚ್ಚಿನ ಹಾಗೂ ದ್ವೇಷದ ದಿನ ಎಂದು ಬಣ್ಣಿಸಿದರು.ಮೌನದಿಂದ ಕೊಲೆ ಮಾಡುವುದು, ದೇವರನ್ನಾಗಿ ಆಕಾಶಕ್ಕೇರಿಸುವುದು, ಅವಮಾನಿಸುವ ಮೂಲಕ ಮೂಲೆಗುಂಪು ಮಾಡುವುದು, ಮೂಲೆಗುಂಪು ಆಗದಿದ್ದಲ್ಲಿ ತಮ್ಮ ಬುಟ್ಟಿಯೊಳಗೆ ಹಾಕಿಕೊಳ್ಳುವ ನವಿರಾದ ಇಂತಹ ವಾದವೇ ಡಾ. ಅಂಬೇಡ್ಕರ್ ಅವರನ್ನು ಬಲಿ ತೆಗೆದುಕೊಂಡಿದೆ.ಹೀಗಾಗಿ ಅವರನ್ನು ದಲಿತರ ಮಹಾನ್ ನಾಯಕ ಎಂದು ಬಿಂಬಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಅನುಗಾಲದಿಂದಲೂ ನಡೆದಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ಕರೆ ನೀಡಿದರು.ಇತಿಹಾಸದ ಪ್ರಕಾರ ಮೌರ್ಯರ ಕಾಲವನ್ನು ಸುವರ್ಣಯುಗವೆಂದು ಕರೆಯುತ್ತೇವೆ. ಇದು ಕೆಲವರಿಗೆ ಮಾತ್ರ ಅನಿಸಿರಬೇಕು. ಹಾಗೆ ನೋಡಿದರೆ ಸಂವಿಧಾನ ರಚನೆಯಾದಾಗಿನಿಂದಲೇ, ಈ ದೇಶದ ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸುವರ್ಣಯುಗ ಆರಂಭವಾಯಿತು ಎಂದು ತಿಳಿಸಿದರು.ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಶಿವರಾಮ ಮೋಘಾ, ಜಿಲ್ಲಾ ಪಂಚಾಯಿತಿ ಸಿಇಒ ಪಲ್ಲವಿ ಅಕುರಾತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶಕುಮಾರ್ ಎನ್., ಮಹಾಪೌರ ಸೋಮಶೇಖರ ಮೇಲಿನಮನಿ, ಸಿದ್ದಾರ್ಥ ವಿಹಾರ ಟ್ರಸ್ಟ್‌ನ ಸಂಘಾನಂದ ಭಂತೆ, ಮಲ್ಲಿಕಾರ್ಜುನ ಎನ್.ಕೆ., ಚಂದ್ರಕಾಂತ ಅಷ್ಟಗಿ,  ಸೋಮಶೇಖರ ಎಸ್. ಮದನಕರ್, ಡಿ.ಜಿ. ಸಾಗರ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry