ಅಂಬೇಡ್ಕರ್ ಭವನ ಕಾಮಗಾರಿ ತ್ವರಿತಕ್ಕೆ ಆಗ್ರಹ

ಶುಕ್ರವಾರ, ಜೂಲೈ 19, 2019
28 °C

ಅಂಬೇಡ್ಕರ್ ಭವನ ಕಾಮಗಾರಿ ತ್ವರಿತಕ್ಕೆ ಆಗ್ರಹ

Published:
Updated:

ಯಲಹಂಕ: ಇಲ್ಲಿನ ಉಪನಗರದಲ್ಲಿ ನಿರ್ಮಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ (ಸಮತಾ ವಾದ) ಬೆಂಗಳೂರು ಉತ್ತರ ತಾಲ್ಲೂಕು ಶಾಖೆಯ ಕಾರ್ಯಕರ್ತರು ಬ್ಯಾಟರಾಯನಪುರದ ಬಿಬಿಎಂಪಿ ವಲಯ ಕಚೇರಿಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಚಳವಳಿಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ, `ಎರಡು ವರ್ಷದ ಹಿಂದೆ ಬಿಬಿಎಂಪಿ ವತಿಯಿಂದ್ಙ 8.53 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳ ಲಾಯಿತು. ಅರ್ಧ ಭಾಗ ಕಾಮಗಾರಿ ಪೂರ್ಣಗೊಳಿಸಿ ಸ್ಥಗಿತಗೊಳಿಸಲಾಗಿದೆ. ಉಳಿದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ, ಭವನವನ್ನು ಸಾರ್ವ ಜನಿಕರ ಸಭೆ- ಸಮಾರಂಭಗಳಿಗೆ ಬಳಸಲು ಅನುವು ಮಾಡಿಕೊಡ ಬೇಕೆಂದು ಮನವಿ ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ದೂರಿದರು.ಮನವಿ ಸ್ವೀಕರಿಸಿದ ವಲಯದ ಜಂಟಿ ಆಯುಕ್ತ ರಾಮಚಂದ್ರ ಮೂರ್ತಿ, `ಈವರೆಗೆ ರೂ4.30 ಕೋಟಿ ವೆಚ್ಚದಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಒಳಾಂಗಣ ವಿನ್ಯಾಸ ಕಾಮಗಾರಿಗಾಗ್ಙಿ 4.30 ಕೋಟಿ ಅನುದಾನ ಮೀಸಲಿರಿಸ ಲಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣ ಗೊಂಡಿದೆ. ಒಂದು ವರ್ಷ ದೊಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗು ವುದು' ಎಂದರು.ಚಳವಳಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮುನಿ ಆಂಜಿನಪ್ಪ, ಜನಧ್ವನಿ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಕಾಕೋಳು ಲಕ್ಕಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry