`ಅಂಬೇಡ್ಕರ್ ಸಾಮಾಜಿಕ ಕ್ರಾಂತಿ ಸಂಕೇತ'

7

`ಅಂಬೇಡ್ಕರ್ ಸಾಮಾಜಿಕ ಕ್ರಾಂತಿ ಸಂಕೇತ'

Published:
Updated:

ವಿಜಾಪುರ:ಶೋಷಿತರ ಅಭಿವೃದ್ಧಿಗಾಗಿ ಜೀವನವಿಡಿ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಸಾಮಾಜಿಕ ಕ್ರಾಂತಿಯ ಸಂಕೇತವಾಗಿದ್ದಾರೆ ಎಂದು ಮೈಸೂರು ವಿವಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ದಯಾನಂದ ಮಾನೆ   ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪ.ಜಾ., ಪ.ಪಂಗಡ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 56ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಮೌಲ್ಯಮಾಪನ ಕುಲಸಚಿವೆ ಡಾ.ಡಿ.ಎಚ್. ತೇಜಾವತಿ, ಮಹಿಳಾ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಡಾ.ಅಂಬೇಡ್ಕರ್ ಕೊಡುಗೆ ಅಮೋಘ ಎಂದರು.ಕುಲಸಚಿವ ಪ್ರೊ.ಜಿ.ಆರ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ.ಜಾ. ಪ.ಪಂ ಘಟಕದ ನಿರ್ದೇಶಕ ಡಿ.ಎಂ. ಜ್ಯೋತಿ ವೇದಿಕೆಯಲ್ಲಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಿ.ಎಂ. ಮದರಿ  ಸ್ವಾಗತಿಸಿದರು. ಪ್ರೊ. ಪಿ.ಕಣ್ಣನ್ ಪರಿಚಯಿಸಿದರು. ಡಾ.ಸಕ್ಪಾಲ್ ಹೂವಣ್ಣ ನಿರೂಪಿಸಿದರು.   ಶಾಂತಾದೇವಿ ಟಿ. ವಂದಿಸಿದರು.ಅಂಚೆ ಕಚೇರಿ: ಭಾರತೀಯ ಅಂಚೆ ಇಲಾಖೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಸಂಘದ ಆಶ್ರಯದಲ್ಲಿ ಇಲ್ಲಿಯ ಅಂಚೆ ಕಚೇರಿಗಳ ನಿರೀಕ್ಷಕರ ಕಚೇರಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.ಅಂಚೆ ನಿರೀಕ್ಷಕ ಸುಧಾಕರ ಮೂರ್ತಿ, ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಂಚೆ ಮೇಲ್ವಿಚಾರಕರಾದ ಎ.ಬಿ. ಕಾಸರ್, ಟಿ.ಪಿ. ತಾಜಿಮತರಿಕ, ಸದಾಶಿವ ತೊರವಿ, ಎಸ್.ಬಿ. ಪಾಟೀಲ, ಎಸ್.ಟಿ. ಬಗಲಿ, ಎಂ.ಬಿ. ಕಾಂಬಳೆ, ಆರ್. ಎಂ.ಎಸ್. ಅಧಿಕಾರಿಗಳಾದ ಕೆ.ಆರ್. ನಂದಗಾಂವ, ಕಲ್ಲಪ್ಪ ಅನವಾಲ, ಜೆ.ಎಸ್. ಇಂಗಳೆ, ಜೆ.ಬಿ. ವಿರಕ್ತಮಠ,  ಎನ್.ಎಸ್. ಮೆಂಡೆಗೇರಿ, ಪಿ.ಜಿ. ರೊಟ್ಟಿ, ಪಿ.ವೈ. ಚೌಧರಿ ಇತರರು ಪಾಲ್ಗೊಂಡಿದ್ದರು.ಬಿಜೆಪಿ ಕಚೇರಿ: ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಎಸ್.ಸಿ. ಮೋರ್ಚಾದಿಂದ ಡಾ.ಅಂಬೇಡ್ಕರ್ ಅವರ 56ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಛಲವಾದಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಮಗಿಮಠ, ಮನೋಜ್ ಕೋಟ್ಯಾಳಕರ, ಚಂದ್ರಶೇಖರ ಮ್ಯಾಗೇರಿ, ಸಂಜೀವ ಕಾಖಂಡಕಿ, ಮಾರುತಿರಾವ ಬಂಡಿ, ನಾಗರಾಜ ಬಿಸನಾಳ, ರಮೇಶ ಪಡಸಲಗಿ, ಕಾಮನಗೌಡ ಪಾಟೀಲ, ಶರಣು ಕಾಖಂಡಕಿ, ಶ್ರೀಕಾಂತ ರಾಠೋಡ, ಜವಾಹರ ಗೋಸಾಮಿ ಇತರರು ಭಾಗವಹಿಸಿದ್ದರು.ಎಬಿವಿಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮವನ್ನು ಇಲ್ಲಿಯ ಮಹಿಳಾ ವಿವಿಯ ನಗರ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಎಬಿವಿಪಿ ನಗರ ಘಟಕದ ಉಪಾಧ್ಯಕ್ಷೆ ಪ್ರೊ.ಹೇಮಲತಾ, ನಗರ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ, ಅಧ್ಯಕ್ಷತೆ ವಹಿಸಿದ್ದ ಡಾ. ಶರಣಪ್ಪ ಬಿ. ಹಲಸೆ ಮಾತನಾಡಿದರು. ಶರತ್ ಬಿರಾದಾರ, ರಾಜೇಶ್ವರಿ, ಅಶ್ವಿನಿ ಕೇಮಶೆಟ್ಟಿ, ಅರುಣ ಸುರಬೂರ, ಕಪೀಲ ಜವಾಳ್ಕರ, ಪ್ರೇಮ್ ಬಿರಾದಾರ ಇತರರು ಉಪಸ್ಥಿತರಿದ್ದರು.ಜಿಲ್ಲಾ ಆಡಳಿತ: ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು. ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪಂಚಾಯಿತಿ ಸಿಇಒ ಗುತ್ತಿ ಜಂಬುನಾಥ್, ಎಸ್ಪಿ ಅಜಯ್ ಹಿಲೋರಿ ಇಲ್ಲಿಯ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿದರು.ಎಸ್‌ಸಿ ಎಸ್‌ಟಿ ನೌಕರರ ಸಮಿತಿ: ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ., ಎಸ್.ಟಿ. ನೌಕರರ ಸಮನ್ವಯ ಸಮಿತಿಯಿಂದ ನಗರದ ಅಂಬೇಡ್ಕರ್ ಚೌಕ್‌ನಲ್ಲಿ ಡಾ. ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ನಾಗಠಾಣ, ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ, ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್. ನಾಡಗಿರಿ, ಪ್ರಕಾಶ ಕಟ್ಟಿಮನಿ, ಆರ್.ಬಿ. ಬಡಿಗೇರ, ಅಡಿವೆಪ್ಪ ಸಾಲಗಲ್, ಆರ್.ಆರ್. ಕಾಂಬಳೆ, ಮುದ್ದಣ್ಣ ಭೀಮನಗರ, ನಂದಾ ತಿಕೋಟಿ, ಆರ್.ಎಂ. ನಾಗಾವಿ, ಗೋವಿಂದ ವಾಜಂತ್ರಿ, ಪ್ರದೀಪ ಕ್ಯಾತನ, ಬಿ.ಟಿ. ವಾಘ್ಮೋರೆ, ಎಲ್.ವೈ. ಬ್ಯಾಲ್ಯಾಳ, ಚಂದ್ರಶೇಖರ ಲೆಂಡಿ ಇದ್ದರು.ಜಿಲ್ಲಾ ಕಾಂಗ್ರೆಸ್ ಕಚೇರಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಡಾ.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ವೈಜನಾಥ ಕರ್ಪೂರಮಠ, ಜ್ಯೋತಿರಾಮ ಪವಾರ, ಮಹಾದೇವಿ ಗೋಕಾಕ, ಎನ್.ಆರ್. ಪಂಚಾಳ, ವಿಜಯಕುಮಾರ ಘಾಟಗೆ, ಸುರೇಶ ಗೊಣಸಗಿ, ವಸಂತ ಹೊನಮೋಡೆ ಮುಂತಾದವರು ಭಾಗವಹಿಸಿದ್ದರು.ತಿಕೋಟಾ: ತಿಕೋಟಾದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಗ್ರಾಮ ಪಂಚಾಯಿತಿಯಿಂದ ಪ್ರತ್ಯೇಕವಾಗಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ರಮೇಶ ದರನಾಕರ, ಸಾಬು ದರನಾಕರ, ಸಿದ್ದಾರ್ಥ ಝಂಡೆ, ಯಮನಪ್ಪ ಮಲಕನವರ, ಎಂ.ಸಿ. ತಳವಾರ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry