ಶುಕ್ರವಾರ, ಜೂನ್ 18, 2021
28 °C

ಅಕಾಲಿಕ ಮಳೆಗೆ ತತ್ತರಿಸಿದ ದ್ರಾಕ್ಷಿ ಬೆಳೆ

ಪ್ರಜಾವಾಣಿ ವಾರ್ತೆ/ ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಎರಡು ದಶಕಗಳ ಹಿಂದೆ ಪ್ರಾಯೋಗಿಕ ತೋಟಗಾರಿಕೆ ಬೆಳೆ ಯಾಗಿ ತಾಲ್ಲೂಕು ಪ್ರವೇಶಿಸಿದ ಬೆಳೆ ಅದು. ಬೆಳೆಗಾರರ ಆರ್ಥಿಕ ಸ್ಥಾನ–ಮಾನಗಳ ದಿಕ್ಕು ಬದಲಿಸಿದ ಹಿರಿಮೆಯೂ ಆ ಬೆಳೆಗಿದೆ. ಅಷ್ಟೇ ಅಲ್ಲದೆ, ದೇಶ–ವಿದೇಶಗಳ ಮಾರುಕಟ್ಟೆ ಗಳಿಗೆ ಲಗ್ಗೆ ಇಟ್ಟು ಪ್ರಾಬಲ್ಯ ಮೆರೆದ ಕೀರ್ತಿಯೂ ಅದಕ್ಕಿದೆ. ಆದರೆ, ಎರಡು ದಶಕಗಳಿಂದಲೂ ಕುಂಭದ್ರೋಣ ಹಾಗೂ ಅಕಾಲಿಕ ಮಳೆ ಆ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ...!ಹೌದು, 1994ರಲ್ಲಿ ಗಜೇಂದ್ರ ಗಡದ ಲೋಕಪ್ಪ ರಾಠೋಡ್‌ ಎಂಬು ವವರು ಪ್ರಾಯೋಗಿಕವಾಗಿ ಬೆಳೆದ ‘ದ್ರಾಕ್ಷಿ’ ಬೆಳೆ ನಂತರದ ವರ್ಷಗಳಲ್ಲಿ ರೋಣ ತಾಲ್ಲೂಕಿನಾದ್ಯಂತ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತಾ ಸಾಗಿತು.ಸದ್ಯ ಕಳೆದ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ರೋಣ, ಗಜೇಂದ್ರಗಡ, ನೆಲ್ಲೂರ, ಜಿಗೇರಿ, ಲಕ್ಕಲಕಟ್ಟಿ,  ನಾಗರಸಕೊಪ್ಪ, ಕುಂಟೋಜಿ, ನಾಗೇಂದ್ರಗಡ, ಮುಶಿ ಗೇರಿ ಮುಂತಾದ ಗ್ರಾಮಗಳಲ್ಲಿ ಬೆಳೆಯ ಲಾಗಿದ್ದ 59 ಹೆಕ್ಟೇರ್‌್ ದ್ರಾಕ್ಷಿ ಕೊಳೆ ರೋಗಕ್ಕೆ ಸಿಲುಕಿ ತತ್ತರಿಸಿ ಹೋಗಿದೆ.2009 ರಲ್ಲಿ ಜರ್ಮನ್‌ ಮಾರುಕಟ್ಟೆಗೆ:1995ರಲ್ಲಿ ಲೋಕಪ್ಪ ರಾಠೋಡ್‌ ಎಂಬ ಪ್ರಗತಿಪರ ಕೃಷಿಕ ರಿಂದ ತಾಲ್ಲೂಕನ್ನು ಪ್ರವೇಶಿಸಿದ ದ್ರಾಕ್ಷಿ ತನ್ನ ಬಾಹುಗಳನ್ನು ವಿಸ್ತರಿಸುತ್ತಾ ಸಾಗಿತು. ಕೊಳವೆ ಬಾವಿ ಆಶ್ರಿತ ಪ್ರಗತಿ ಪರ ಕೃಷಿಕರು ದ್ರಾಕ್ಷಿ ಬೆಳೆಯಲಾ ರಂಭಿಸಿದರು. ಸ್ಥಳೀಯ ಮಾರುಕಟ್ಟೆಗಳಲ್ಲಿ ಭಾರಿ ಜನ ಮನ್ನಣೆ ಗಳಿಸಿದ್ದ ದ್ರಾಕ್ಷಿಗೆ ದೇಶ–ವಿದೇಶಗಳ ಮಾರಕಟ್ಟೆಯ ಭಾಗ್ಯ ದೊರೆತಿರಲಿಲ್ಲ. ನೆಲ್ಲೂರ ಗ್ರಾಮದ ಯುವ ರೈತ ವೀರನಗೌಡ ಗೌಡರ ಬೆಳೆದ ದ್ರಾಕ್ಷಿಗೆ 2009ರಲ್ಲಿ ಜರ್ಮನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಇದರಿಂದಾಗಿ ದೇಶ–ವಿದೇಶ ಗಳಲ್ಲಿ ಇಲ್ಲಿನ ದ್ರಾಕ್ಷಿ ಬೆಳೆಗೆ ಭಾರಿ ಬೇಡಿಕೆ ದೊರಕಿತು.‘ಎಕರೆ ದ್ರಾಕ್ಷಿ ಬೆಳೆಯಲು ₨ 2.5 ಲಕ್ಷ ವೆಚ್ಚ ಮಾಡಬೇಕು. 18 ತಿಂಗಳಿಗೆ ದ್ರಾಕ್ಷಿ ಮೊದಲ ಫಸಲು ದೊರೆಯು ತ್ತದೆ. ಆರಂಭದಲ್ಲಿ ದ್ರಾಕ್ಷಿ ಬೆಳೆ ನಿರ್ವ ಹಣೆ ದೊಡ್ಡ ಮೊತ್ತದ ಬೆಳೆಯಾಗಿ ಪರಿಣಮಿಸಿದರೂ ಮೊದಲ ಫಸಲಿ ನಲ್ಲಿಯೇ (ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ ಉಂಟಾಗ ದಿದ್ದರೆ) ಬೆಳೆಗೆ ಮಾಡಿದ ಖರ್ಚು ಸಹಿತ ದುಪ್ಪಟ್ಟು ಲಾಭ ಗಳಿಸಬಹುದು’ ಎನ್ನುತ್ತಾರೆ ಎಂ.ಪಿ.ಪಾಟೀಲ.‘ಪ್ರಸಕ್ತ ವರ್ಷ ಎಕರೆಗೆ 12 ರಿಂದ 15 ಟನ್‌ ಫಸಲು ನಿರೀಕ್ಷಿಸಲಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಹಸಿ ದ್ರಾಕ್ಷಿಗೆ ₨ 3,800 ಕ್ವಿಂಟಲ್‌ ದರವಿದೆ. ಆದರೆ, ಅಕಾಲಿಕ ಮಳೆಯಿಂದಾಗಿ ಬೆಳೆಗೆ ಮಾಡಿದ ಖರ್ಚೂ ಸಹ ಕೈಸೇರ ದಂತಾಗಿದೆ’ ಎಂದು ದ್ರಾಕ್ಷಿ ಬೆಳೆಗಾರ ಲೋಕಪ್ಪ ರಾಠೋಡ್‌ ಅಲವತ್ತು ಕೊಂಡರು.ಸಮೀಕ್ಷೆ ನಡೆಸಿ ಬೆಳೆಗೆ ಪರಿಹಾರ

‘ರೋಣ ತಾಲ್ಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಉಂಟಾಗಿರುವ ದ್ರಾಕ್ಷಿ ಬೆಳೆ ನಷ್ಟ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರ ಪರಿಹಾರ ನೀಡಿದ ಬಳಿಕ ಬೆಳೆಗಾರರಿಗೆ ನೀಡಲಾಗುವುದು’

-ಎಂ.ಎಂ.ತಾಂಬೋಟಿ,  ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ,ರೋಣಅಕಾಲಿಕ ಮಳೆಯಿಂದ ಬೆಳೆಗಾರರಿಗೆ ನಷ್ಟ


‘ದ್ರಾಕ್ಷಿ ಬೆಳೆಗಾರರು ಅಕಾಲಿಕ ಮಳೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡ ಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ’

-ವೀರನಗೌಡ ಗೌಡರ, ಜಿಲ್ಲಾ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.