ಅಕ್ಕನಿಂದ ಪ್ರೇರಣೆ: ದೇಹದಾನ ಮಾಡಿದ ತಮ್ಮ!

ಗುರುವಾರ , ಜೂಲೈ 18, 2019
28 °C

ಅಕ್ಕನಿಂದ ಪ್ರೇರಣೆ: ದೇಹದಾನ ಮಾಡಿದ ತಮ್ಮ!

Published:
Updated:

ಶಹಾಬಾದ: ಚಿತ್ತಾಪುರ ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ಇದೆ ವರ್ಷ ಮೇ 3 ರಂದು ತೀರಿಕೊಂಡ ಅಕ್ಕ 85 ವರ್ಷದ ಲಕ್ಷ್ಮೀಬಾಯಿ ಮಾದುರಾಯ ಗುರುಮಿಟಕಲ್ ಅವರಿಂದ  ಪ್ರೇರಣೆ ಪಡೆದ ತಮ್ಮ ಕೃಷ್ಣಮೂರ್ತಿ ಗುರುಮಿಟಕಲ್(70) ಎಂಬುವವರು ನಿಧನಾನಂತರ ತಮ್ಮ ದೇಹದಾನ ಮಾಡಬೇಕೆಂದು ಸಂಕಲ್ಪಿಸಿದ್ದರು.ಕೆಲ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಇದ್ದಾರೆ.ಕೆಲವು ದಿನಗಳ ಹಿಂದಷ್ಟೆ ಅವರು ದೇಹದಾನ ಮಾಡುವ ಬಗ್ಗೆ ಮಹಾತ್ಮಾ ಗಾಂಧಿ ಅಂಗವಿಕಲರ ಸಂಘದ ಈರಣ್ಣ ಕಾರ್ಗಿಲ್ ಅವರಿಗೆ ಮಾಹಿತಿ ನೀಡಿದ್ದರು.ಬೆಳಿಗ್ಗೆ ಕೃಷ್ಣಮೂರ್ತಿ ತೀರಿಕೊಂಡ ಸುದ್ದಿ ತಿಳಿಯುತ್ತಲೆ ಅವರ ಆಸೆಯಂತೆ ದೇಹವನ್ನು ಗುಲ್ಬರ್ಗದ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು.ಗ್ರಾಮದ ಹಿರಿಯರಾದ ಶರಣಗೌಡ ಪಾಟೀಲ, ನಾಗೇಂದ್ರ ಮಾಚನೂರ, ವಿಜಯಕಾಂತ ಪಾಟೀಲ, ಸುರೇಶ ಕುಲಕರ್ಣಿ ಸ್ಥಳೀಯವಾಗಿ ಸಹಾಯ ಮಾಡಿದರು. ಇದು ಭಂಕೂರ ಗ್ರಾಮದಲ್ಲಿ ನಡೆದ ಎರಡನೆ ದೇಹದಾನದ ಪ್ರಕರಣವಾಗಿದೆ. ಆಸ್ಪತ್ರೆ ವೈದ್ಯರ ನಿರಾಸಕ್ತಿ: ಕೃಷ್ಣಮೂರ್ತಿ ನಿಧನರಾಗುತ್ತಿದ್ದಂತೆಯೆ  ಈರಣ್ಣ ಕಾರ್ಗಿಲ್ ಎಂಆರ್‌ಎಂಸಿ ಕಾಲೇಜಿಗೆ ದೂರವಾಣಿ ಮಾಡಿ ದೇಹ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಬಿ.ಮಾಲೀಪಾಟೀಲ ಅವರಿಗೆ ದೇಹದಾನ ಮಾಡುವ ಬಗ್ಗೆ ವಿವರಣೆ ನೀಡಿ, ವಾಹನ ಕಳುಹಿಸಲು ಕೋರಿದಾಗ 'ನೀವೆ ವಾಹನ ಮಾಡಿಕೊಂಡು ದೇಹವನ್ನು ತನ್ನಿ' ಎಂಬ ನಿರಾಸಕ್ತಿಯ ಉತ್ತರ ಸಿಕ್ಕಿದೆ. ನಂತರ ಬಸವೇಶ್ವರ ಆಸ್ಪತ್ರೆಯ ಡಾ.ಎಸ್.ಎನ್.ಪಾಟೀಲ ಸಂಪರ್ಕಿಸಿ ವಾಹನ ಸೌಲಭ್ಯ ಪಡೆದು ದೇಹವನ್ನು ಎಂಆರ್‌ಎಂಸಿ ಆಸ್ಪತ್ರೆಗೆ ಕಳಿಸಲಾಯಿತು ಎಂದು ಈರಣ್ಣತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry