ಅಕ್ಕನ ಬಳಗದ ಅಮೃತ ಮಹೋತ್ಸವ 4ರಿಂದ

7

ಅಕ್ಕನ ಬಳಗದ ಅಮೃತ ಮಹೋತ್ಸವ 4ರಿಂದ

Published:
Updated:

ಧಾರವಾಡ: ಇಲ್ಲಿಯ ಡಿಸಿ ಕಂಪೌಂಡ್‌ನಲ್ಲಿರುವ ‘ಅಕ್ಕನ ಬಳಗ’ದ ಅಮೃತ ಮಹೋತ್ಸವ ಇದೇ 4–5ರಂದು ನಗರದಲ್ಲಿ ನಡೆಯಲಿದೆ ಎಂದು ಬಳಗದ ಅಧ್ಯಕ್ಷೆ ಪ್ರಭಾವತಿ ಮೂರಶಿಳ್ಳಿ ಹೇಳಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರು ವಚನ ಸಾಹಿ­ತ್ಯ­ವನ್ನು ಅಭ್ಯಾಸ ಮಾಡಬೇಕು.

ಶರಣ­ಧರ್ಮ ತತ್ವಗಳನ್ನು ಆಚರಿ­ಸಬೇಕು ಎಂಬ ಉದ್ದೇಶದಿಂದ ಪ್ರೊ.ಸ.ಸ.­ ಮಾಳವಾಡ, ವಿ.ಬಿ. ಹಾಲಭಾವಿ ಅವರ ಬೆಂಬಲದೊಂದಿಗೆ 1938ರಲ್ಲಿ ಬಸವನಾಳರ ಮನೆಯಲ್ಲಿ ಧಾರವಾಡ ಮಾಳಮಡ್ಡಿ ಅಕ್ಕನ ಬಳಗ’ ಎಂಬ ಹೆಸರಿನಿಂದ ಸಂಸ್ಥೆ ಶುರುವಾಯಿತು. ಇದೀಗ ಸಂಸ್ಥೆಗೆ 75 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜ 4ರಂದು ಸಂಜೆ ಜರುಗುವ ಅಕ್ಕಮಹಾದೇವಿಯ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ ಚಾಲನೆ ನೀಡುವರು.

ಜ 5ರಂದು ಬೆಳಿಗ್ಗೆ ಷಟ್‌ಸ್ಥಲ ಧ್ವಜಾರೋಹಣ, ಶಿಲಾಫಲಕದ ಅನಾವರಣ ನೆರವೇರುವುದು. ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ–ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ವಹಿಸುವರು. ‘ಅಮೃತ ವಿರಾಗಿಣಿ’ ಸ್ಮರಣ ಸಂಚಿಕೆ­ಯನ್ನು ಶಾಸಕ ವಿನಯ ಕುಲಕರ್ಣಿ, ಡಾ.ವೀರಣ್ಣ ರಾಜೂರ ಅವರು ಸಂಪಾದಿಸಿದ ‘ಕದಳಿಯ ಕಲ್ಪತರು’ ಸ್ಮರಣ ಸಂಪುಟವನ್ನು ಇನ್ನೋರ್ವ ಶಾಸಕ ಅರವಿಂದ ಬೆಲ್ಲದ ಬಿಡುಗಡೆ ಮಾಡಲಿದ್ದಾರೆ’ ಎಂದರು.‘ದೂರದರ್ಶನದ ಹೆಚ್ಚುವರಿ ಮಹಾ­ನಿರ್ದೇಶಕ ಡಾ.ಮಹೇಶ ಜೋಶಿ ಮಹಾ­ದೇವಿ ಅಕ್ಕನ ಜೀವನದ ಚಿತ್ರ­ಗಳನ್ನು ಬಿಡುಗಡೆ ಮಾಡುವರು. ಮಧ್ಯಾಹ್ನ ನಡೆಯುವ ಮಹಿಳಾ ಗೋಷ್ಠಿಯಲ್ಲಿ ಧಾರ್ಮಿಕ ನೆಲೆಯಲ್ಲಿ ಮಹಿಳೆ ಕುರಿತು ಬೀದರನ ಅನ್ನ­ಪೂರ್ಣ, ಕೌಟುಂಬಿಕ ನೆಲೆಯಲ್ಲಿ ಮಹಿಳೆ ಕುರಿತು ಗಿರಿಜಾ ಕಾಡಯ್ಯನ­ಮಠ, ಸಾಹಿತ್ಯಿಕ ನೆಲೆಯಲ್ಲಿ ಮಹಿಳೆ ಕುರಿತು ಶಾರದಾ ಕಿರೇಸೂರ ಉಪ­ನ್ಯಾಸ ನೀಡಲಿದ್ದಾರೆ’ ಎಂದು ವಿವರಿಸಿದರು. ಕಸ್ತೂರಿ ಜಿಗಜಿನ್ನಿ, ಲೀಲಾವತಿ ಬೆಲ್ಲದ, ಶಾಂತಕ್ಕ ಬೆಣ್ಣಿ, ಉಮಾದೇವಿ ಬಳ್ಳಾರಿ, ಪ್ರೇಮಾ ಹಲಕಿ, ನಳಿನಾಕ್ಷಿ, ಶಾರದಾ ಕೌದಿ ಇತರರು ಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry