ಅಕ್ಕಿಗೆ ನಿರ್ಬಂಧ ಇಲ್ಲ

7

ಅಕ್ಕಿಗೆ ನಿರ್ಬಂಧ ಇಲ್ಲ

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತ ಹಾಗೂ ಇರಾನ್ ನಡುವಿನ ಅಕ್ಕಿ ವ್ಯಾಪಾರದ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ಇರಾನ್ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನವು, ಆಹಾರ, ಔಷಧ ಹಾಗೂ ವೈದ್ಯಕೀಯ ಸಾಧನಗಳ ರಫ್ತಿಗೆ ಅನ್ವಯವಾಗದು ಎಂದು ವಿದೇಶಾಂಗ ಇಲಾಖೆ ವಕ್ತಾರೆ ವಿಕ್ಟೋರಿಯಾ ನುಲಾಂಡ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.ಭಾರತದಿಂದ ಅಕ್ಕಿ ಖರೀದಿಗೆ ಇರಾನ್ ಹಣ ಪಾವತಿಸಿಲ್ಲ ಎಂಬ ವರದಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, `ಈ ವಿಷಯವನ್ನು ಸ್ವತಂತ್ರವಾಗಿ ದೃಢಪಡಿಸುವ ಸ್ಥಿತಿಯಲ್ಲಿ ಅಮೆರಿಕ ಇಲ್ಲ~ ಎಂದರು.ದೇಶಗಳು ಇರಾನಿನ ತೈಲದ ಅವಲಂಬನೆಯನ್ನು ಕಳಚಿಕೊಳ್ಳಬೇಕಾಗುತ್ತದೆ ಎಂಬ ನಮ್ಮ ಆತಂಕವು ಭಾರತ ಸರ್ಕಾರಕ್ಕೆ ಸ್ಪಷ್ಟವಾಗಿ ಮನವರಿಕೆಯಾಗಿದೆ. ಭಾರತ ಹಾಗೂ ಇತರ ದೇಶಗಳೊಂದಿಗೆ ಸೇರಿಕೊಂಡು ಇದಕ್ಕೊಂದು ದಾರಿ ಕಂಡುಕೊಳ್ಳುವ ದಿಸೆಯಲ್ಲಿ ನಾವು ಒಟ್ಟಾಗಿ ಶ್ರಮಿಸುತ್ತಿದ್ದೇವೆ. ಇರಾನ್ ಜನರೊಂದಿಗೆ ಅಮೆರಿಕ ಜಗಳ ಕಾಯುತ್ತಿಲ್ಲ ಎಂದೂ ನುಲಾಂಡ್ ತಿಳಿಸಿದರು.ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಪರಮಾಣು ಕಾರ್ಯಕ್ರಮ ಬಳಸಿಕೊಳ್ಳುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದರೆ ಆ ದೇಶವನ್ನು ಪ್ರತ್ಯೇಕವಾಗಿ ನೋಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry