ಶುಕ್ರವಾರ, ಜನವರಿ 24, 2020
27 °C

ಅಕ್ಕಿ ಗಿರಣಿ ಮಾಲೀಕರ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ರಾಜ್ಯ ಸರ್ಕಾರ ಅಕ್ಕಿ ಗಿರಣಿ ಮಾಲೀಕರಿಗೆ ಹೊಸದಾಗಿ ವಿಧಿಸಿರುವ ಲೆವಿ ಶುಲ್ಕ ಪದ್ಧತಿಯನ್ನು ರದ್ದುಗೊ ಳಿಸುವಂತೆ ಒತ್ತಾಯಿಸಿ, ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ 40 ಅಕ್ಕಿ ಗಿರಣಿಗಳು ಸೋಮವಾರ ಅನಿ ರ್ಧಿಷ್ಟಾವಧಿ ಮುಷ್ಕರ ಆರಂಭಿಸಿದವು.ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿ ಎಂಎಸ್)ದ ಸಭಾಂಗಣದಲ್ಲಿ ಮಲೆ ನಾಡು ಅಕ್ಕಿ ಗಿರಣಿ ಕೈಗಾರಿಕಾ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಪಿ. ಶಂಕರಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ ಮಿಲ್ ಮಾಲಿೀಕರ ಸಭೆಯಲ್ಲಿ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಅನಿರ್ಧಿ ಷ್ಟಾವಧಿ ಮುಷ್ಕರದ ಕರೆಗೆ ಬೆಂಬಲಿಸಲು ನಿರ್ಧರಿಸಲಾಯಿತು.ಬಳಿಕ ಸಂಘದ ಪದಾಧಿಕಾರಿಗಳು ತಾಲ್ಲೂಕು ಕಚೇರಿಗೆ ತೆರಳಿ, ಹೊಸ ದಾಗಿ ವಿಧಿಸಿರುವ ಲೆವಿ ಶುಲ್ಕ ಪದ್ಧತಿಯನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಹಶೀ ಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್‌ ಅವರಿಗೆ ಮನವಿ ಸಲ್ಲಿಸಿದರು.ಕ್ಷೇತ್ರದ ಅಕ್ಕಿ ಗಿರಣಿಗಳಲ್ಲಿ ರೈತರು ತಂದ ಬತ್ತವನ್ನು ಮಾತ್ರ ಅಕ್ಕಿ ಮಾಡುತ್ತಿದ್ದು, ಯಾವುದೇ ಅಕ್ಕಿ ಗಿರಣಿ ಮಾಲೀಕರು ವ್ಯಾಪಾರ ನಡೆಸುತ್ತಿಲ್ಲ. ಬತ್ತಕ್ಕೆ ಸೂಕ್ತ ಧಾರಣೆ ಇಲ್ಲದಿರುವುದು. ಇಳುವರಿ ಕೊರತೆ, ಕಾರ್ಮಿಕರ ಕೊರತೆಯಿಂದ ಕೃಷಿಕರು ಬತ್ತ ಬೇಸಾಯ ಕೈ ಬಿಟ್ಟು ವಾಣಿಜ್ಯ ಬೆಳೆಗೆ ಆಕರ್ಷಿತರಾಗಿ ರುವುದರಿಂದ ಅಕ್ಕಿ ಗಿರಣಿ ನಡೆಸಿ ಕೊಂಡು ಹೋಗುವುದೇ ದುಸ್ತರ ವಾಗಿದೆ.ಸರ್ಕಾರ  ಅಕ್ಕಿ ಗಿರಣಿಗಳು ಬಳಕೆ ಮಾಡುವ ವಿದ್ಯುತ್ ಬಿಲ್ ಆಧಾರದಲ್ಲಿ ಶೇ. 33ರಷ್ಟು ಲೆವಿಯನ್ನು ಸೋನಾ ಮಸೂರಿ ಬತ್ತದ ರೂಪದಲ್ಲಿ ಭದ್ರಾವತಿಯಲ್ಲಿರುವ ಆಹಾರ ಇಲಾಖೆ ಗೋಡೌನ್‌ಗೆ ಕೊಂಡೊಯ್ದು ತುಂಬಿಸಬೇಕೆಂದು ಆದೇಶಿಸಿ ರುವು ದನ್ನು ಪಾಲಿಸಲು ಸಾಧ್ಯವಾ ಗುತ್ತಿಲ್ಲ. ಈ ಎಲ್ಲಾ ಪರಿಸ್ಥಿತಿ ಮನ ಗಂಡು ಅಕ್ಕಿ ಗಿರಣಿಗಳಿಗೆ ಲೆವಿಯಿಂದ ವಿನಾಯಿತಿ ನೀಡುವಂತೆ ್ಲಿ ಒತ್ತಾಯಿಸಲಾಯಿತು.ರೈಸ್ ಮಿಲ್ ಮಾಲಿಕರಾದ ಕೆ.ಎಸ್. ಕಾಡಪ್ಪ ಗೌಡ, ಹೆಗ್ಗಾರು ಕೃಷ್ಣಮೂರ್ತಿ ನಾಯಕ್, ಕೆ.ಎನ್. ಗೋಪಾಲ ಹೆಗ್ಡೆ, ಶಿವಶಂಕರ್, ಇಕ್ಬಾಲ್ ಅಹಮದ್, ಎಚ್.ಎಲ್. ದೀಪಕ್, ಎಂ. ಗೋಪಾ ಲ್, ಟಿಎಪಿಸಿಎಂಎಸ್ ಕಾರ್ಯದರ್ಶಿ  ಚಂದ್ರಶೇಖರ್‌, ಜಗನ್ನಾಥ್ ಮುಂತಾದವರಿದ್ದರು.

ಪ್ರತಿಕ್ರಿಯಿಸಿ (+)