ಶನಿವಾರ, ಆಗಸ್ಟ್ 24, 2019
27 °C

ಅಕ್ಕಿ ವಿತರಣೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

Published:
Updated:

ರಾಣೆಬೆನ್ನೂರು: ತಾಲೂಕಿನ ಚೌಡಯ್ಯ ದಾನಪುರ ಗ್ರಾಮದಲ್ಲಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಮಸ್ಥರು ಬಿಪಿಎಲ್ ಕಾರ್ಡನ್ನು ಹೊದಿದವರಿಗೆ ಅಕ್ಕಿಯನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಅನ್ನಭಾಗ್ಯ ಯೋಜನೆಗೆ ಚಾಲನೆಗೆ ತಡೆ ಮಾಡಿ ಭಾನುವಾರ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ 360 ಪಡಿತರ ಕಾರ್ಡ್ ಹೊಂದಿದ್ದು ಅವುಗಳಲ್ಲಿ 80 ಪಡಿತರ ಕಾರ್ಡುಗಳ ಫಲಾನುಭವಿಗಳು ಸರ್ಕಾರದ ಆದೇಶ ಮೇರೆಗೆ ಹೆಬ್ಬಟ್ಟಿನ ಗುರುತನ್ನು ಕೊಟ್ಟು ಬಂದರೂ ಈಗ ಅವರಿಗೆ ಸದ್ಯದಲ್ಲಿ ಅಕ್ಕಿಯನ್ನು ವಿತರಿ ಸುವುದು ಆಗುವುದಿಲ್ಲ ಎಂದಿದ್ದಕ್ಕೆ 80 ಕಾರ್ಡಿನ ಫಲಾನುಭವಿಗಳು ದಿಢೀರ್‌ನೆ ನ್ಯಾಯಬೆಲೆಯ ಅಂಗಡಿಗೆ ಜಮಾಯಿಸಿ ನಮಗೂ ಪಡಿತರ ಆಹಾರ ಧಾನ್ಯ ವಿತರಿಸಬೇಕು ಇಲ್ಲವಾದರೆ ನೀವು ರೇಷನ್ ಕೊಡುವುದೇ ಬೇಡ ಎಂದು ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಬಾಗಿಲು ಹಾಕಿ ಪ್ರತಿಭಟನೆಗೆ ಮುಂದಾ ದರು.ತಹಶೀಲ್ದಾರ್ ಹೆಚ್ ಶಿವಕುಮಾರ ಅವರು `ಇದೊಂದು ತಿಂಗಳು ಸಹಕರಿಸಿ ಕೊಳ್ಳಿ ಮುಂದಿನ ತಿಂಗಳಿಂದ ಬಯೋ ಮೆಟ್ರಿಕ್ ನೀಡಿದ ಎಲ್ಲ ಫಲಾನುಭವಿ ಗಳಿಗೂ ಪಡಿರವನ್ನು ವಿತರಿಸಲಾಗು ವುದು' ಎಂದು ಭರವಸೆ ನೀಡಿದರು.ಮಹೇಶ ಬನ್ನಿಮಟ್ಟಿ, ನಿಂಗಪ್ಪ ಬನ್ನಿಮಟ್ಟಿ, ಮಲ್ಲಿಕಾರ್ಜುನ ದೀಪಾ ವಳಿ, ದೇವಿಂದ್ರಪ್ಪ ಹರಿಜನ, ಬಸವ ರಾಜ ಉಪ್ಪಿನ, ನಾಗರಾಜ ಉಪ್ಪಿನ, ಮಂಜುನಾಥ ಹೊನ್ನತ್ತಿ, ನಾಗರಾಜ ದೀಪಾವಳಿ, ಸಂಕಪ್ಪ ಅರಸಪ್ಪನವರ, ವೀರಣ್ಣ ಬನ್ನಿಮಟ್ಟಿ, ಮಾಲತೇಶಪ್ಪ ಹರಿಜನ, ಬಸವರಾಜ. ಕೃಷ್ಣಕುಮಾರ ಬಸವರಾಜ ಉಪಸ್ಥಿತರಿದ್ದರು.ಕೊಲೆ ಯತ್ನ: ದೂರು

ಹುಬ್ಬಳ್ಳಿ: ನಗರದ ಕೋರ್ಟ್ ಸರ್ಕಲ್‌ನಲ್ಲಿರುವ ಗ್ರೀನ್‌ಗೇಟ್ ಬಾರ್ ಅಂಡ್ ರೆಸ್ಟೋರಂಟ್ ಮೆನೇಜರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಶನಿವಾರ ಸಂಜೆ 7.30ರ ಸುಮಾರಿಗೆ ನಡೆದಿದೆ.ಚೀಲವೊಂದರಲ್ಲಿ ಲಾಂಗ್ ಇಟ್ಟು ಕೊಂಡು ಬಂದಿದ್ದ ಆರೋಪಿ, ಹೋಟೆಲ್ ಮೆನೇಜರ್ ರಾಜೇಶ್ ಶೆಟ್ಟಿ ಯನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ

Post Comments (+)