ಅಕ್ಟೋಬರ್‌ನಲ್ಲಿ ಕೂಡುಂಕುಳಂ ಸ್ಥಾವರ ಕಾರ್ಯಾರಂಭ

7

ಅಕ್ಟೋಬರ್‌ನಲ್ಲಿ ಕೂಡುಂಕುಳಂ ಸ್ಥಾವರ ಕಾರ್ಯಾರಂಭ

Published:
Updated:

ಚೆನ್ನೈ (ಐಎಎನ್‌ಎಸ್‌): ತಮಿಳುನಾಡಿನ ಕೂಡುಂಕುಳಂ ಪರಮಾಣು ವಿದ್ಯುತ್‌ ಸ್ಥಾವರ (ಕೆಎನ್‌ಪಿಪಿ) ಅಕ್ಟೋಬರ್‌  ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಭಾರತೀಯ ಪರಮಾಣು ವಿದ್ಯುತ್ ನಿಗಮ (ಎನ್‌ಪಿಸಿಐಎಲ್‌) ತಿಳಿಸಿದೆ.ಈ ಕುರಿತು ಎನ್‌ಪಿಸಿಐಎಲ್‌ ತನ್ನ ವೆಬ್‌ಸೈಟಿನಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್ ತಿಂಗಳಿನಿಂದ ವಿದ್ಯುತ್‌ ಸ್ಥಾವರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದೆ.ಕೂಡುಂಕುಳಂ ವಿದ್ಯುತ್ ಸ್ಥಾವರದ  ಕಾಮಗಾರಿಯ ಶೇಕಡಾ 99.74ರಷ್ಟು ಕೆಲಸ ಆಗಸ್ಟ್‌ನಲ್ಲೇ ಪೂರ್ಣಗೊಂಡಿದೆ.  ಸ್ಥಾವರಕ್ಕೆ ಒಂದು ಸಾವಿರ ಮೆ.ವಾ. ರಷಿಯನ್‌ ರಿಯಾಕ್ಟರ್ ಅಳವಡಿಸಲಾಗಿದೆ. ಇದರಿಂದ ಒಂದು  ಸಾವಿರ ಮೆ. ವಾ. ಯೂನಿಟ್‌ ವಿದ್ಯುತ್‌ ಉತ್ಪಾದಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry