ಅಕ್ರಮ ಅದಿರು ರಪ್ತು: ಸಿಬಿಐ ನೋಟಿಸ್

7

ಅಕ್ರಮ ಅದಿರು ರಪ್ತು: ಸಿಬಿಐ ನೋಟಿಸ್

Published:
Updated:

ಬಳ್ಳಾರಿ: ಅಕ್ರಮ ಅದಿರು ರಪ್ತು ಹಾಗೂ ಬೇಲೇಕೇರಿ ಬಂದರಿನಲ್ಲಿ ಅದಿರು ನಾಪತ್ತೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಜಿಲ್ಲೆಯ ಅದಿರು ರಪ್ತುದಾರರು, ಟ್ರೇಡರ್‌ಗಳು ಹಾಗೂ ಗಣಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.ಜಿಲ್ಲೆಯಲ್ಲಿ 76 ಜನ ರಪ್ತುದಾರರು, 50ಕ್ಕೂ ಅಧಿಕ ಟ್ರೇಡರ್‌ಗಳು ಮತ್ತು ಕೆಲವು ಗಣಿ ಮಾಲೀಕರಿಗೆ ರಿಜಿಸ್ಟರ್ ಅಂಚೆ ಮೂಲಕ ನೋಟಿಸ್ ಕಳುಹಿಸಿರುವ ಸಿಬಿಐ, ಸೋಮವಾರ ಬೆಂಗಳೂರಿನಲ್ಲಿರುವ ಕಚೇರಿಗೆ ವಿಚಾರಣೆಗಾಗಿ ಖುದ್ದು ಹಾಜರಾಗಲು ಸೂಚನೆ ನೀಡಿದೆ. ಗಣಿ ಉದ್ಯಮದಲ್ಲಿ ತೊಡಗಿರುವ ಜಿಲ್ಲೆಯ ಪ್ರಮುಖ ರಾಜಕಾರಣಿಗಳಿಗೂ ನೋಟಿಸ್ ನೀಡಲಾಗಿದೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry