ಸೋಮವಾರ, ಜೂನ್ 21, 2021
20 °C

ಅಕ್ರಮ ಆರೋಪ: ‘ಎಂಸಿಎಕ್ಸ್‌’ ಅಧ್ಯಕ್ಷ ಪಿಳ್ಳೈ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ/ನವದೆಹಲಿ (ಪಿಟಿಐ): ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (ಎಂಸಿಎಕ್ಸ್‌) ಮಂಡಳಿ ಅಧ್ಯಕ್ಷ ಜಿ.ಕೆ.ಪಿಳ್ಳೈ, ಆರು ವರ್ಷಗಳ ಹಿಂದೆ ಪರವಾನಗಿ ನವೀಕ ರಣ ಸಂಬಂಧ ಅವ್ಯವಹಾರ ಎಸಗಿ ದ್ದಾರೆ ಎಂಬ ಆರೋಪದ ತನಿಖೆಯನ್ನು ಸಿಬಿಐ ಕೈಗೊಂಡಿದ್ದು, ಪಿಳ್ಳೈ ತಮ್ಮ ಸ್ಥಾನಕ್ಕೆ ರಾಜೀನಾಮೆ  ನೀಡಿದ್ದಾರೆ.ಈ ಬೆಳವಣಿಗೆಯಿಂದ ಎದುರಾ ಗುವ ತೊಡಕುಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಮತ್ತು ‘ಸೆಬಿ’ ಮುಂದಾಗಿವೆ. ಶುಕ್ರವಾರ ‘ಎಂಸಿಎಕ್ಸ್‌’ ಆಡಳಿತ ಮಂಡಳಿ ಸಭೆ ಆರಂಭಕ್ಕೆ ಕೆಲವೇ ಗಂಟೆ ಮೊದಲು ಪಿಳ್ಳೈ ರಾಜೀನಾಮೆ ನೀಡಿ ದ್ದಾರೆ. ಸಭೆಯಲ್ಲಿ ಭಾರತೀಯ ಜೀವ ವಿಮಾ ನಿಗಮದ ಮಾಜಿ ಅಧ್ಯಕ್ಷ ಥಾಮಸ್‌ ಮ್ಯಾಥ್ಯೂ ಅವರನ್ನು ಮಂಡ ಳಿಯ ಹೊಸ ಅಧ್ಯಕ್ಷರಾಗಿ ನೇಮಿಸಲಾಗಿದೆ.ಮಂಡಳಿ ನಿರ್ದೇಶಕರು ಸಾರ್ವ ಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಆಶ್ವಾಸನೆ ನೀಡಿದ್ದಾರೆ. ಸೆಬಿ ಮಾಜಿ ಅಧ್ಯಕ್ಷ ಸಿ.ಬಿ.ಭಾವೆ ಮತ್ತು ಮಾಜಿ ಸದಸ್ಯ ಕೆ.ಎಂ.ಅಬ್ರಹಾಂ ಅವರ ವಿರುದ್ಧವೂ ಸಿಬಿಐ ಪ್ರಾಥಮಿಕ ತನಿಖೆಯನ್ನು ಗುರುವಾರ ಆರಂಭಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.