ಅಕ್ರಮ ಔಷಧ ದಂಧೆ: ಕೇಂದ್ರಕ್ಕೆ ನೋಟಿಸ್

7

ಅಕ್ರಮ ಔಷಧ ದಂಧೆ: ಕೇಂದ್ರಕ್ಕೆ ನೋಟಿಸ್

Published:
Updated:

ನವದೆಹಲಿ (ಪಿಟಿಐ): ದೇಶದ ವಿವಿಧ ರಾಜ್ಯಗಳಲ್ಲಿ ಪ್ರಯೋಗಕ್ಕೆ ಒಳಪಡಿಸದೇ ಇರುವ ಔಷಧ ಮಾರಾಟ ಮಾಡುವ ದಂಧೆಯ ವಿರುದ್ಧ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ನ್ಯಾಯಮೂರ್ತಿಗಳಾದ ಆರ್.ಎಲ್.ಲೋಧ ಮತ್ತು ಎಚ್.ಎಸ್.ಗೋಖಲೆ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠ ಕೇಂದ್ರ ಸರ್ಕಾರವಲ್ಲದೇ, ಆರೋಗ್ಯ ಸಚಿವಾಲಯ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಗಳಿಗೂ ಈ ಬಗ್ಗೆ ಉತ್ತರಿಸುವಂತೆ ಸೂಚಿಸಿದೆ.ಇಂದೋರ್ ಮೂಲದ ಸರ್ಕಾರೇತರ ಸಂಸ್ಥೆ `ಸ್ವಾಸ್ಥ್ಯ ಅಧಿಕಾರ್ ಮಂಚ್~ ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಿವಿಧ ಬಹುರಾಷ್ಟ್ರೀಯ ಫಾರ‌್ಮಾಸ್ಯುಟಿಕಲ್ ಕಂಪೆನಿಗಳು ನಡೆಸಿರುವ ಔಷಧ ಪ್ರಯೋಗಗಳನ್ನು ಅಧಿಕೃತಗೊಳಿಸಲು ತಜ್ಞರ ಸಮಿತಿ ರಚಿಸುವಂತೆ ಮನವಿ ಮಾಡಿದೆ. ದೇಶದ ವಿವಿಧ ಭಾಗಗಳಲ್ಲಿ ಅನಧಿಕೃತ ಔಷಧಗಳನ್ನು ರೋಗಿಗಳಿಗೆ ನೀಡುವ ಮೂಲಕ ಪ್ರಯೋಗ ನಡೆಸಲಾಗುತ್ತಿದೆ.ಅಂತಹ ಪ್ರಯೋಗಗಳನ್ನು  ನಿಲ್ಲಿಸಬೇಕು ಹಾಗೂ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry